ಭಾರತೀಯ ಬೌಲರ್ ಗಳಿಗೆ ಮನಬಂದಂತೆ ಬೌಂಡರಿ ಗಳಿಸಿದ ಐರ್ಲೆಂಡ್ ಬ್ಯಾಟ್ಸಮನ್ ಗೆ ಪಂದ್ಯ ಮುಗಿದ ಬಳಿಕ ಪಾಂಡ್ಯ ಮಾಡಿದ್ದೇನು ಗೊತ್ತೇ??

19

ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಸಮಬಲ ಗೊಳಿಸಿ ಈಗಾಗಲೇ ಐರ್ಲೆಂಡ್ ಗೆ ಹಾರಿದ್ದು ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಹಾರ್ದಿಕ್ ಪಾಂಡ್ಯ ರವರ ನಾಯಕತ್ವದಲ್ಲಿ ಭಾರತೀಯ ಯುವ ಕ್ರಿಕೆಟ್ ತಂಡ ಐರ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಬರೋಬ್ಬರಿ ಏಳು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅದರಲ್ಲೂ ವಿದೇಶಿ ನೆಲದಲ್ಲಿ ಭಾರತೀಯ ಕ್ರಿಕೆಟ್ ತಂಡ ಸರ್ವಸನ್ನದ್ಧವಾಗಿದೆ ಎನ್ನುವ ಸಂದೇಶವನ್ನು ಬಲವಾಗಿ ಸಾರಿದೆ.

ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಕಾರಣಕ್ಕಾಗಿ ಸಂಪೂರ್ಣವಾಗಿ ರದ್ದಾಗುವ ಸಂದರ್ಭ ಬಂದಿತ್ತು ಆದರೆ ಪಂದ್ಯವನ್ನು 12 ಓವರುಗಳಿಗೆ ಮೊಟಕುಗೊಳಿಸಿ ಆಡಿಸಲಾಗಿತ್ತು. ಮೊದಲು ಬ್ಯಾಟಿಂಗ್ ಇಳಿದ ಐರ್ಲೆಂಡ್ ತಂಡ 109 ರನ್ನುಗಳ ಗುರಿಯನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ನೀಡಿತ್ತು. ದೀಪಕ್ ಹೂಡ ರವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದಾಗಿ ಎರಡು ಓವರುಗಳು ಬಾಕಿ ಉಳಿದಿರುವಂತೆ ಭಾರತೀಯ ಕ್ರಿಕೆಟ್ ತಂಡ ಮೊದಲ ಪಂದ್ಯವನ್ನು ಗೆದ್ದು ಬೀಗಿದೆ. ಭಾರತೀಯ ಬೌಲರ್ಗಳ ದಾಳಿಗೆ ಐರ್ಲೆಂಡ್ ತಂಡದ ಆರಂಭಿಕ ಆಟಗಾರರು ಮಂಡಿಯೂರಿದರು.

ಆದರೆ ಹಾರಿ ಟ್ಯಕ್ಟರ್ ಮಾತ್ರ ಭಾರತೀಯ ಬೌಲರ್ ಗಳನ್ನು ದಿಟ್ಟ ರೀತಿಯಲ್ಲಿ ನಿಂತು ಎದುರಿಸಿದರು. ನಾಲ್ಕನೇ ವಿಕೆಟಿಗೆ ಕ್ರೀಸಿಗೆ ಹೇಳಿದ ಹ್ಯಾರಿ ಭಾರತೀಯ ಬೌಲರ್ ಗಳನ್ನು ಬೆಸ್ಟ್ ಬೀಳುವಂತೆ ಮಾಡುತ್ತಾರೆ. ಕೇವಲ 33 ಎಸೆತಗಳಲ್ಲಿ 3 ಸಿಕ್ಸರ್ ಆರು ಬೌಂಡರಿ ಗಳೊಂದಿಗೆ ನಾಟೌಟ್ 64 ರನ್ನುಗಳನ್ನು ಬಾರಿಸಿದ್ದಾರೆ. ಪಂದ್ಯ ಮುಗಿದ ನಂತರ ನಾಯಕ ಹಾರ್ದಿಕ್ ಪಾಂಡ್ಯ ರವರು 22 ವರ್ಷದ ಈ ಯುವ ಆಟಗಾರನನ್ನು ಭೇಟಿ ಮಾಡಿ ಆತನ ಆಟಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ತನ್ನ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ರವರ ಈ ನಡೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.