ಸಮಂತಾ ಜೊತೆ ಇರುವ ಮ್ಯಾಟರ್ ಗೊತ್ತಿದ್ದರೂ ಕೂಡ ನಾಗ ಚೈತನ್ಯ ಜೊತೆ ಮದುವೆಗೆ ಒಪ್ಪಿಗೆ ಕೊಟ್ರ ನಟಿ ಶೋಭಿತಾ? ಏನಾಗುತ್ತಿದೆ ಗೊತ್ತೇ?
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಮಂತ ಹಾಗೂ ನಾಗಚೈತನ್ಯ ಇಬ್ಬರು ಕೂಡ ತಮ್ಮ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ತಿಲಾಂಜಲಿ ಇಟ್ಟಿದ್ದರು. ಇಬ್ಬರು ಕೂಡ ಬೇರೆಬೇರೆಯಾಗಿ ತಮ್ಮ ಸಿನಿಮಾ ಕರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಸಮಂತ ರವರು ನಾಗಚೈತನ್ಯ ರವರಿಗೆ ವಿವಾಹ ವಿಚ್ಛೇದನವನ್ನು ನೀಡಿದ ಸಂದರ್ಭದಲ್ಲಿ ಅವರು ಬೇರೆ ರಹಸ್ಯ ಪ್ರೇಮಿಯ ಜೊತೆಗೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಎಂಬುದಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಗಾಳಿಸುದ್ದಿ ಹರಿದಾಡಿತ್ತು.
ನಂತರ ಕುದ್ದಾಗಿ ಸಮಂತ ರವರೇ ಇದು ಸತ್ಯಕ್ಕೆ ದೂರವಾದದ್ದು ಎಂಬುದನ್ನು ಹೇಳಿದ್ದರು. ಅಂದು ಸಮಂತ ರವರು ಅನುಭವಿಸಿದ್ದ ಅದೇ ಗಾಳಿಸುದ್ದಿಯನ್ನು ಈಗ ನಾಗಚೈತನ್ಯ ರವರು ಅನುಭವಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೆ ನಾಗಚೈತನ್ಯ ರವರು ತಮ್ಮ ಸಹನಟಿ ಆಗಿರುವ ಶೋಭಿತ ರವರ ಜೊತೆಗೆ ಲಿವಿನ್ ಟುಗೆದರ್ ರಿಲೇಷನ್ಶಿಪ್ ನಲ್ಲಿ ಇದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇವರಿಬ್ಬರು ಅತಿ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎಂಬುದಾಗಿ ಕೂಡ ತಿಳಿದು ಬರುತ್ತಿದೆ.

ಆದರೆ ಇವರಿಬ್ಬರಿಗೆ ಹತ್ತಿರವಿರುವ ಮೂಲಗಳು ಇದು ಸುಳ್ಳು ಎಂಬುದಾಗಿ ಹೇಳುತ್ತಿದೆ. ಚಿತ್ರರಂಗದ ಸೆಲೆಬ್ರಿಟಿಗಳ ವಿಚಾರದಲ್ಲಿ ಯಾವುದನ್ನು ಕೂಡ ನಂಬಲಿಕ್ಕೆ ಸಾಧ್ಯವಾಗುವುದಿಲ್ಲ ಎನ್ನುವುದು ನಿಮಗೆಲ್ಲ ತಿಳಿದಿದೆ. ಇಬ್ಬರು ಕೂಡ ಕಾಮನ್ ಫ್ರೆಂಡ್ ಮೂಲಕ ಪರಿಚಯ ಆಗಿ ನಂತರ ಇವರ ಪರಿಚಯ ಪ್ರೀತಿಗೆ ತಿರುಗಿದೆ ಎಂಬುದಾಗಿ ತಿಳಿದುಬಂದಿದೆ. ಹಲವಾರು ಬಾರಿ ಇವರಿಬ್ಬರು ಕ್ಯಾಮರ ಕಣ್ಣಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ನಾಗಚೈತನ್ಯ ರವರು ಥ್ಯಾಂಕ್ಯು ಸಿನಿಮಾದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ.