ಮೂವರಲ್ಲಿ ಒಬ್ಬರು ಹೊರ ಹೋದರೆ ಮಾತ್ರ ದಿನೇಶ್ ಕಾರ್ತಿಕ್ ಸ್ಥಾನ. ಆ ಮೂವರು ಯಾರ್ಯಾರು ಗೊತ್ತೇ? ಯಾರು ಹೊರಬಹುದು ಗೊತ್ತಾ?

23

ನಮಸ್ಕಾರ ಸ್ನೇಹಿತರೆ ಈ ವರ್ಷದ ಐಪಿಎಲ್ ಪ್ರಾರಂಭದಲ್ಲಿಯೇ ದಿನೇಶ್ ಕಾರ್ತಿಕ್ ರವರು ನನ್ನ ಗುರಿ ಭಾರತಕ್ಕಾಗಿ ವಿಶ್ವಕಪ್ ಗೆಲ್ಲುವುದು ಎನ್ನುವುದಾಗಿ ಹೇಳಿ ತಾನು ಯಾವುದಕ್ಕೆ ಸಿದ್ಧನಾಗಿದ್ದೇನೆ ಎಂಬುದನ್ನು ಸ್ಪಷ್ಟಪಡಿಸಿದ್ದರು. ಹೀಗಾಗಿ ಐಪಿಎಲ್ನಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಮೂರು ವರ್ಷಗಳ ನಂತರ ಆಯ್ಕೆಯಾಗಿ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೊನೆಯ ಓವರ್ಗಳಲ್ಲಿ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ನೀಡುವ ಮೂಲಕ ಫಿನಿಷಿಂಗ್ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಾರೆ.

ಸ್ವತಹ ಕೋಚ್ ರಾಹುಲ್ ದ್ರಾವಿಡ್ ಅವರೇ ದಿನೇಶ್ ಕಾರ್ತಿಕ್ ರವರು ಅತ್ಯುತ್ತಮ ಫಿನಿಶರ್ ಎಂಬುದಾಗಿ ಹೊಗಳುತ್ತಾರೆ. ಈ ಮೂಲಕ ಖಂಡಿತವಾಗಿ ಅಕ್ಟೋಬರ್ ಹಾಗೂ ನವಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದ ನೆಲದಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್ ತಂಡಕ್ಕೆ ದಿನೇಶ್ ಕಾರ್ತಿಕ್ ರವರು ಆಯ್ಕೆಯಾಗುವುದು ನಿಶ್ಚಿತ ಎಂಬುದಾಗಿ ಹೇಳಲಾಗುತ್ತಿದೆ. ಆದರೆ ದಿನೇಶ್ ಕಾರ್ತಿಕ್ ಅವರ ಆಗಮನದಿಂದಾಗಿ ಮೂರು ಆಟಗಾರರ ಸ್ಥಾನಕ್ಕೆ ಕುತ್ತು ಬರಲಿದೆ ಎನ್ನುದಾಗಿ ಹೇಳಲಾಗುತ್ತಿದೆ. ಕೆ ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಆರಂಭಿಕ ಎರಡು ಸ್ಥಾನಗಳನ್ನು ಆಡಿದರೆ ನಂತರ ಮೂರನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ರವರು ಆಡುತ್ತಾರೆ. ಐದು ಹಾಗೂ ಆರನೇ ಕ್ರಮಾಂಕದಲ್ಲಿ ಫಿನಿಶರ್ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡೆ ಹಾಗೂ ದಿನೇಶ್ ಕಾರ್ತಿಕ್ ರವರು ನಿರ್ವಹಿಸುತ್ತಾರೆ.

ಹೀಗಾಗಿ ಉಳಿದುಕೊಳ್ಳುವುದು ಕೇವಲ 4ನೇ ಕ್ರಮಾಂಕದ ಬ್ಯಾಟಿಂಗ್ ಸ್ಥಾನ ಮಾತ್ರ. ಇದಕ್ಕಾಗಿ ಸೂರ್ಯಕುಮಾರ್ ಯಾದವ್ ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ರವರ ನಡುವೆ ದೊಡ್ಡ ಮಟ್ಟದ ಪೈಪೋಟಿ ಏರ್ಪಡಲಿದೆ. ಶ್ರೇಯಸ್ ಅಯ್ಯರ್ ಈಗಾಗಲೇ ಕೊಂಚಮಟ್ಟಿಗೆ ಡೌನ್ ಪರ್ಫಾರ್ಮೆನ್ಸ್ ನೀಡುತ್ತಿರುವ ಕಾರಣದಿಂದಾಗಿ ಅವರು ತಂಡದಿಂದ ಹೊರ ಹೋಗಬಹುದಾಗಿದೆ. ಇನ್ನು ಸ್ಥಾನಕ್ಕಾಗಿ ಸೂರ್ಯ ಕುಮಾರ್ ಯಾದವ್ ಹಾಗೂ ರಿಷಬ್ ಪಂತ್ ರವನ್ ನಡುವೆ ಪೈಪೋಟಿ ಏರ್ಪಡಲಿದೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಆಟಗಾರರಿಗೆ ಈ ಸ್ಥಾನ ಸಿಗಲಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ.