ಅದೊಂದು ಉದ್ಯಮದಿಂದ ಬರೋಬ್ಬರಿ 100 ಕೋಟಿ ಲಾಭ ಮಾಡುತ್ತಿರುವ ಸುನಿಲ್ ಶೆಟ್ಟಿ. ನೀವು ಕೂಡ ಟ್ರೈ ಮಾಡಿ ನೋಡಿ, ಲಾಭ ಅಂತೂ ತಪ್ಪಲ್ಲ.

51

ನಮಸ್ಕಾರ ಸ್ನೇಹಿತರೆ ಕರಾವಳಿ ಮೂಲದ ಸುನಿಲ್ ಶೆಟ್ಟಿ ರವರು ಬಾಲಿವುಡ್ ಚಿತ್ರರಂಗದಲ್ಲಿ ನಟಿಸುವ ಮೂಲಕ ಯಾವ ಮಟ್ಟದಲ್ಲಿ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ನೀವೇ ನೋಡಿದ್ದೀರಿ. ಕನ್ನಡದಲ್ಲಿ ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಸಿನಿಮಾದಲ್ಲಿ ನಟಿಸುತ್ತಾರೆ. ಕೇವಲ ಬಾಲಿವುಡ್ ಚಿತ್ರರಂಗ ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ಪೋಷಕ ಪಾತ್ರ ಹಾಗೂ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲಿ ಯಾರ ಶಿಫಾರಸು ಹಾಗೂ ಬೆಂಬಲ ಇಲ್ಲದೆಯೂ ಕಷ್ಟ ಪರಿಶ್ರಮ ಇವುಗಳನ್ನೆಲ್ಲಾ ದಾಟಿ ಯಾವ ರೀತಿಯಲ್ಲಿ ಗೆಲುವು ಸಾಧಿಸಿದ್ದಾರೆ ಎಂಬುದು ನಮ್ಮ ಕಣ್ಣಮುಂದಿದೆ. ವಯಸ್ಸು 61 ದಾಟಿದ್ದರೂ ಕೂಡ ಅವರ ಫಿಟ್ನೆಸ್ ವಿಚಾರದಲ್ಲಿ ಯಾವ 25ರ ಹರೆಯದ ಯುವಕ ಕೂಡ ಎದುರು ನಿಲ್ಲಲಾರ.

ಇನ್ನು ಕೇವಲ ನಟನೆ ಮಾತ್ರವಲ್ಲದೆ ಹಲವಾರು ವ್ಯಾಪಾರ-ವ್ಯವಹಾರಗಳಲ್ಲಿ ಕೂಡ ಸುನಿಲ್ ಶೆಟ್ಟಿ ರವರು ಹುಡುಗಿಯನ್ನು ಮಾಡುವುದರ ಮೂಲಕ ಆರ್ಥಿಕವಾಗಿ ಕೂಡ ಸಾಕಷ್ಟು ಪ್ರಬಲವಾಗಿ ಬೆಳೆದು ಬಂದಿದ್ದಾರೆ. ಹಲವಾರು ರೆಸ್ಟೋರೆಂಟ್ ಸಮೂಹಗಳ ಮಾಲೀಕರಾಗಿ ಕೂಡ ಸುನಿಲ್ ಶೆಟ್ಟಿ ರವರು ವ್ಯಾಪಾರದಲ್ಲಿ ಹಲವಾರು ಕೋಟ್ಯಂತರ ರೂಪಾಯಿಗಳನ್ನು ಸಂಪಾದಿಸುತ್ತಿದ್ದಾರೆ. ಇದರ ಬೇರೆ ಬೇರೆ ಬ್ರಾಂಚ್ ಗಳು ಕೇವಲ ಮುಂಬೈನಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲಿ ಕೂಡ ಇದೆ. ಮಿಸ್ಟಿಫ್ ಡೈನಿಂಗ್ ಬಾರ್ ಹಾಗೂ ಹೆಚ್ ಟು ಒ ರೆಸ್ಟೋರೆಂಟ್ ಗಳ ಮಾಲೀಕರು ಕೂಡ ಆಗಿದ್ದಾರೆ. ಆದರೆ ಒಂದು ವಿಚಾರದ ಮೂಲಕ ಸುನಿಲ್ ಶೆಟ್ಟಿ ರವರು ನೂರು ಕೋಟಿ ರೂಪಾಯಿಗೂ ಅಧಿಕ ಸಂಪಾದನೆ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು ಗೆಳೆಯರೇ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆಯನ್ನು ಮಾಡಿರುವ ಸುನಿಲ್ ಶೆಟ್ಟಿ ಅವರು ಇದರಿಂದ 100 ಕೋಟಿ ರೂಪಾಯಿಗೂ ಅಧಿಕ ಆದಾಯವನ್ನು ಸಂಪಾದಿಸಿದ್ದಾರೆ ಎಂಬುದಾಗಿ ತಿಳಿದುಬಂದಿದ್ದು ಇದಕ್ಕೆ ಅವರ ಪತ್ನಿಯ ಬೆಂಬಲವು ಕೂಡ ಇದೆ. ಇಷ್ಟು ಮಾತ್ರವಲ್ಲದೆ ಆರ್ ಹೌಸ್ ಹೆಸರಿನ ಪೀಠೋಪಕರಣಗಳ ಶೋರೂಮ್ ಕೂಡ ಇದೆ. ಸುನಿಲ್ ಶೆಟ್ಟಿ ರವರ ನಟನ ಜೀವನ ಹಾಗೂ ನಿಜ ಜೀವನದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.