ಅದ್ಭುತ ಪಾತ್ರಗಳ ಮೂಲಕ ಮನಗೆದ್ದಿರುವ ಸುಚೇಂದ್ರ ಪ್ರಸಾದ್ ರವರ ನಡವಳಿಕೆ ನಿಜ ಜೀವನದಲ್ಲಿ ಹೇಗಿರುತ್ತದೆ ಅಂತೇ ಗೊತ್ತೇ?? ಪವಿತ್ರ ರವರು ಬಿಚ್ಚಿಟ್ಟ ರಹಸ್ಯವೇನು ಗೊತ್ತೇ?
ನಮಸ್ಕಾರ ಸ್ನೇಹಿತರ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಾಲಿವುಡ್ ನಂತಹ ಗಾಸಿಪ್ ಗಳು ಸೃಷ್ಟಿ ಆಗದಿದ್ದರೂ ಕೂಡ ಕೆಲವೊಂದು ಗಾಸಿಪ್ ಗಳು ಸೃಷ್ಟಿಯಾದಾಗ ಅದು ದೊಡ್ಡ ಮಟ್ಟದಲ್ಲಿ ಪ್ರಚಾರವನ್ನು ಪಡೆದುಕೊಳ್ಳುತ್ತದೆ. ಇಂದು ನಾವು ಮಾತನಾಡಲು ಹೊರಟಿರುವುದು ಕೂಡ ಇದೇ ರೀತಿಯ ವಿಚಾರದ ಕುರಿತಂತೆ. ಹೌದು ಗೆಳೆಯರೇ ಎಲ್ಲಿ ನೋಡಿದರೂ ಕೂಡ ಪವಿತ್ರಾಲೋಕೇಶ್ ರವರು ಈಗಾಗಲೇ ತೆಲುಗು ಚಿತ್ರರಂಗದ ಖ್ಯಾತ ನಟ ನರೇಶ್ ರವರನ್ನು ಮದುವೆಯಾಗುತ್ತಾರೆ ಅಥವಾ ಆಗಲಿದ್ದಾರೆ ಎನ್ನುವ ಸುದ್ದಿಗಳು ಬಲವಾಗಿ ಕೇಳಿ ಬರುತ್ತಿವೆ. ತೆಲುಗು ನಟರಾಗಿರುವ ನರೇಶ್ ರವರು ಮಹೇಶ್ ಬಾಬುರವರ ಅಣ್ಣ ಹಾಗೂ ಅವರ ತಂದೆಯಾಗಿರುವ ಸೂಪರ್ ಸ್ಟಾರ್ ಕೃಷ್ಣ ರವರ ಎರಡನೇ ಹೆಂಡತಿಯ ಮಗ ಎನ್ನುವುದನ್ನು ವಿಶೇಷವಾಗಿ ನಿಮಗೆ ವಿವರಿಸಿ ಹೇಳಬೇಕಾಗಿಲ್ಲ ಯಾಕೆಂದರೆ ಇದು ಎಲ್ಲರಿಗೂ ತಿಳಿದಿರುವ ವಿಚಾರ.
ಈಗಾಗಲೇ ಅವರು ಮೂರು ಮದುವೆಯನ್ನು ಆಗಿದ್ದು ಪವಿತ್ರಲೋಕೇಶ್ ರವರನ್ನು ಮದುವೆಯಾದರೆ ಇದು ನಾಲ್ಕನೇ ಮದುವೆ ಆದಂತಾಗುತ್ತದೆ. ಇನ್ನು ಪವಿತ್ರ ಲೋಕೇಶ್ ರವರ ಹಿನ್ನೆಲೆಯನ್ನು ಹೇಳುವುದಾದರೆ ಅವರು ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಹಾಗೂ ಖಳನಟ ಮೈಸೂರು ಲೋಕೇಶ್ ರವರ ಮಗಳಾಗಿದ್ದಾರೆ. ಕನ್ನಡ ಚಿತ್ರರಂಗದಿಂದ ತಮ್ಮ ನಟನೆಯನ್ನು ಪ್ರಾರಂಭಿಸಿದ ಪರಭಾಷೆಗಳಲ್ಲಿ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಇವರು 2007 ರಲ್ಲಿ ನಟ ಸುಚೇಂದ್ರಪ್ರಸಾದ್ ರವರನ್ನು ಮದುವೆಯಾಗುತ್ತಾರೆ ಹಾಗೂ ಇವರಿಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರ ಲೋಕೇಶ್ ರವರು ಒಟ್ಟಾಗಿ ಜೀವಿಸುತ್ತಿಲ್ಲ ಇದರಿಂದಾಗಿ ಈಗ ಓಡಾಡುತ್ತಿರುವ ಸುದ್ದಿಗೆ ಇನ್ನಷ್ಟು ತುಪ್ಪ ಸುರಿದಂತಾಗಿದೆ ಎಂದು ಹೇಳಬಹುದಾಗಿದೆ.

ಇನ್ನು ಒಂದು ಸಂದರ್ಶನದಲ್ಲಿ ಸುಚೇಂದ್ರ ಪ್ರಸಾದ್ ರವರ ಕುರಿತಂತೆ ಮಾತನಾಡುತ್ತಾ ಪವಿತ್ರಲೋಕೇಶ್ ರವರು ಅವರನ್ನು ನನ್ನ ಜೀವನದಲ್ಲಿ ಪಡೆಯಲು ನಾನು ಪುಣ್ಯ ಮಾಡಿದ್ದೆ ಎಂಬುದಾಗಿ ಹೇಳಿದ್ದರು. ನನ್ನ ಪ್ರತಿಯೊಂದು ಕೆಲಸದ ವಿಚಾರದಲ್ಲಿ ಕೂಡ ನನಗೆ ಬೆಂಬಲವಾಗಿ ನಿಂತು ಸಹಾಯ ಮಾಡುತ್ತಾರೆ ಎಂಬುದಾಗಿ ಹೇಳಿಕೊಂಡಿದ್ದರು. ಆದರೆ ಇಂದು ಕೇಳಿಬರುತ್ತಿರುವ ಸುದ್ದಿ ಈ ಪ್ರೀತಿ ಎಂಬ ವಿಚಾರವನ್ನು ಎಲ್ಲರೂ ನಂಬದಂತೆ ಮಾಡಿಬಿಟ್ಟಿದ್ದೆ ಎಂದರೆ ತಪ್ಪಾಗಲಾರದು. ಆದರೆ ಸತ್ಯ ಇನ್ನೂ ಹೊರಗೆ ಬಂದಿಲ್ಲ ಬರುವವರೆಗೂ ಕೂಡ ಕಾಯ ಬೇಕಾಗಿರುವುದು ನಿಶ್ಚಿತ.