ದಿನೇಶ್ ಕಾರ್ತಿಕ್ ರವರು ವಾಪಸ್ಸು ಬಂದ ಸ್ಪೀಡ್ ನೋಡಿ, ರೊಚ್ಚಿಗೆದ್ದ ಮುರಳಿ ಏನು ಮಾಡಿದ್ದಾರೆ ಗೊತ್ತೆ?? ಇವೆಲ್ಲ ಬೇಕಿತ್ತಾ ಎಂದ ನೆಟ್ಟಿಗರು.
ನಮಸ್ಕಾರ ಸ್ನೇಹಿತರೆ ಮುರಳಿ ವಿಜಯ್ ಹಾಗೂ ದಿನೇಶ್ ಕಾರ್ತಿಕ್ ರವರ ನಡುವೆ ನಡೆದಿರುವಂತಹ ವಿಚಾರದ ಕುರಿತಂತೆ ನಿಮಗೆ ವಿವರವಾಗಿ ಹೇಳಬೇಕಾಗಿಲ್ಲ ಎಲ್ಲವೂ ನಿಮಗೆ ಗೊತ್ತಿರುವುದೇ. ಹೌದು ಗೆಳೆಯರೇ ಒಂದು ಕಾಲದಲ್ಲಿ ಸಹ ಕ್ರಿಕೆಟಿಗ ರಾಗಿದ್ದ ಹಾಗೂ ಪ್ರಾಣ ಸ್ನೇಹಿತರಾಗಿದ್ದ ಇವರಿಬ್ಬರು ಹೇಗೆ ಬೇರೆಯಾಗಿ ಬದ್ಧ ವೈರಿಗಳಾದ್ರು ಎನ್ನುವುದು ನಿಮಗೆಲ್ಲ ತಿಳಿದಿದೆ. ಹೌದು ಗೆಳೆಯರೇ ಇಬ್ಬರೂ ಕೂಡ ಪ್ರಾಣ ಸ್ನೇಹಿತರಾಗಿದ್ದರು ಹಾಗೂ ತಮಿಳುನಾಡು ರಣಜಿ ತಂಡದ ಪರವಾಗಿ ಇಬ್ಬರು ಕೂಡ ಜೊತೆಯಾಗಿ ಆಟವಾಡುತ್ತಿದ್ದರು. ಆದರೆ ತನ್ನ ಸ್ನೇಹಿತನಾಗಿರುವ ದಿನೇಶ್ ಕಾರ್ತಿಕ್ ಅವರ ಹೆಂಡತಿಯ ಮೇಲೆ ಕಣ್ಣು ಹಾಕಿ ಅವರ ಜೊತೆಗೆ ಬೇಡದ ಸಂಬಂಧವನ್ನು ಇಟ್ಟುಕೊಂಡು ದಿನೇಶ್ ಕಾರ್ತಿಕ್ ರವರನ್ನು ಅವರ ಹೆಂಡತಿ ಬಿಟ್ಟು ಬರುವಂತೆ ಮುರಳಿ ವಿಜಯ್ ಮಾಡುತ್ತಾರೆ.
ನಂತರ ಅವರನ್ನು ಮದುವೆಯಾಗುವ ಮೂಲಕ ದಿನೇಶ್ ಕಾರ್ತಿಕ್ ರವರಿಗೆ ದೊಡ್ಡಮಟ್ಟದ ಮೋಸ ಮಾಡುತ್ತಾರೆ. ಹಲವಾರು ವರ್ಷಗಳ ಕಾಲ ಡಿಪ್ರೆಶನ್ ನಲ್ಲಿ ಇದ್ದ ದಿನೇಶ್ ಕಾರ್ತಿಕ್ ರವರು ಸಂಪೂರ್ಣವಾಗಿ ಕ್ರಿಕೆಟ್ ರಂಗದಿಂದ ಹೊರಬಿದ್ದಿದ್ದರು. ಆದರೆ ಈಗ 37ನೇ ವರ್ಷದ ದಿನೇಶ್ ಕಾರ್ತಿಕ್ ರವರು ಕ್ರಿಕೆಟ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ತಮ್ಮ ಕಂಬ್ಯಾಕ್ ಘೋಷಿಸಿ ಈಗ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಕೂಡ ದೊಡ್ಡ ಮಟ್ಟದಲ್ಲಿ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಇನ್ನು ದಿನೇಶ್ ಕಾರ್ತಿಕ್ ರವರು ಸದ್ಯಕ್ಕೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20ವಿಶ್ವಕಪ್ ನಲ್ಲಿ ಕೂಡ ಆಯ್ಕೆಯಾಗಲಿದ್ದಾರೆ ಎನ್ನುವ ಬಲವಾದ ಸುದ್ದಿ ಬಿಸಿಸಿಐ ವಲಯದಲ್ಲಿ ಕೇಳಿಬರುತ್ತಿದೆ.

ಇದರಿಂದ ರೊಚ್ಚಿಗೆದ್ದಿರುವ ಮುರಳಿ ವಿಜಯ್ ಈಗ ಮಾಡಿರುವ ಕೆಲಸವನ್ನು ನೋಡಿ ನೆಟ್ಟಿಗರು ಈಗ ಇವೆಲ್ಲ ಬೇಕಾ ಇರುವುದಾಗಿ ಕೇಳುತ್ತಿದ್ದಾರೆ. ಹೌದು ಗೆಳೆಯರೇ 2020 ರಲ್ಲಿ ದುಬೈನಲ್ಲಿ ಚೆನ್ನೈ ತಂಡದ ಪರವಾಗಿ ಕೊನೆಯ ಪಂದ್ಯವನ್ನು ಆಡಿದ್ದಾರೆ ವಿಜಯ್ ಅವರು ಮತ್ತೆ ಕ್ರಿಕೆಟ್ ನತ್ತ ಮುಖ ಮಾಡಿರಲಿಲ್ಲ. ಆದರೆ ಈಗ ದಿನೇಶ್ ಕಾರ್ತಿಕ್ ರವರು ಮಾಡುತ್ತಿರುವ ಸಾಧನೆಯನ್ನು ನೋಡಿ ರೊಚ್ಚಿಗೆದ್ದಿರುವ ಮುರಳಿ ವಿಜಯ್ ರವರು 38 ವರ್ಷ ವಯಸ್ಸಿನಲ್ಲಿ ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ರುಬಿ ತ್ರಿಚಿ ವಾರಿಯರ್ಸ್ ತಂಡದ ಪರವಾಗಿ ಆಡಲು ಹೊರಟಿದ್ದಾರೆ. ಆದರೆ ನೆಟ್ಟಿಗರು ಮಾತ್ರ ದಿನೇಶ್ ಕಾರ್ತಿಕ್ ಅವರ ರೇಂಜ್ ಗೆ ತಲುಪುವುದು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.