ಕೆಜಿಎಫ್ 2 ಯಶಸ್ಸು ಕಂಡರೂ ಕೈ ಹಿಡಿಯದ ಅದೃಷ್ಟ, ಹಲವಾರು ಸಿನಿಮಾಗಳನ್ನು ಕಳೆದುಕೊಂಡ ಶ್ರೀನಿಧಿ ಶೆಟ್ಟಿ, ಕಾರಣ ಏನು ಗೊತ್ತೇ?
ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು ಸಿನಿಮಾ ಬಾಕ್ಸಾಫೀಸ್ ನಲ್ಲಿ ಹಾಗೂ ರಿಪೋರ್ಟ್ ವಿಚಾರದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡರೆ ಆ ಚಿತ್ರದ ಕಲಾವಿದರಿಗೆ ಹಾಗೂ ನಾಯಕ ನಾಯಕಿಗೆ ಮತ್ತು ನಿರ್ದೇಶಕರಿಗೆ ಬೇರೆ ಕಡೆಗಳಲ್ಲಿ ಹಾಗೂ ನಿರ್ಮಾಪಕ ಬಳಗದಿಂದ ಸಾಕಷ್ಟು ಆಫರ್ ಗಳು ಹುಡುಕಿಕೊಂಡು ಬರುತ್ತದೆ. ಇತ್ತೀಚೆಗಷ್ಟೇ ಭಾರತೀಯ ಚಿತ್ರರಂಗದಲ್ಲಿ ದೊಡ್ಡಮಟ್ಟದ ಸದ್ದು ಮಾಡಿರುವ ಕನ್ನಡದ ಹೆಮ್ಮೆಯ ಚಿತ್ರವಾಗಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಕುರಿತಂತೆ ನಿಮಗೆಲ್ಲರಿಗೂ ತಿಳಿದಿದೆ. ಇನ್ನು ಚಿತ್ರದಲ್ಲಿ ನಾಯಕನಾಗಿ ರಾಕಿಂಗ್ ಸ್ಟಾರ್ ಯಶ್ ರವರು ಯಾವ ಮಟ್ಟಿಗೆ ಜನಪ್ರಿಯತೆಯನ್ನು ದೇಶದಾದ್ಯಂತ ಪಡೆದುಕೊಂಡಿದ್ದಾರೆ ಎಂಬುದನ್ನು ವಿವರಣೆಯಿಂದ ಹೇಳಬೇಕಾಗಿಲ್ಲ.
ಇನ್ನು ಕೆಜಿಎಫ್ ಚಾಪ್ಟರ್ 1 ಹಾಗೂ 2 ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರು ಕರಾವಳಿ ಮೂಲದ ನಟಿ ಶ್ರೀನಿಧಿ ಶೆಟ್ಟಿ. ಕೆಜಿಎಫ್ ಚಾಪ್ಟರ್ 2 ಚಿತ್ರದ ಯಶಸ್ಸಿನ ನಂತರ ಅವರ ಬೇಡಿಕೆಯು ಕೂಡ ಭಾರತೀಯ ಚಿತ್ರರಂಗದಲ್ಲಿ ಹೆಚ್ಚಾಗಿತ್ತು. ಕೆಜಿಎಫ್ ಸರಣಿ ಚಿತ್ರಗಳನ್ನು ಹೊರತುಪಡಿಸಿ ಅವರು ನಟಿಸಿರುವುದು ಕೇವಲ ವಿಕ್ರಂ ನಟನೆಯ ಕೋಬ್ರಾ ಸಿನಿಮಾದಲ್ಲಿ ಮಾತ್ರ. ಆದರೆ ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ಶ್ರೀನಿಧಿ ಶೆಟ್ಟಿ ಅವರನ್ನು ಹುಡುಕಿಕೊಂಡು ಹಲವಾರು ಆಫರ್ ಗಳು ಬಂದಿದ್ದರೂ ಕೂಡ ಅವರಿಗೆ ನಟಿಸಲು ಸಾಧ್ಯವಾಗುತ್ತಿಲ್ಲ.

ಹೌದು ಗೆಳೆಯರೇ ಅದಕ್ಕೆ ಉದಾಹರಣೆ ಎಂದರೆ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಅವಕಾಶವೂ ಕೂಡ ಹುಡುಕಿಕೊಂಡು ಬಂದಿತ್ತು. ಆದರೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಯಶಸ್ಸಿನ ನಂತರ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿರುವ ಶ್ರೀನಿಧಿ ಶೆಟ್ಟಿರವರಿಗೆ ಅಷ್ಟೊಂದು ಸಂಭಾವನೆ ನೀಡಲು ಪ್ರೊಡ್ಯೂಸರ್ಗಳು ಹಿಂದೇಟು ಹಾಕುತ್ತಿದ್ದು ಇದೇ ಕಾರಣಕ್ಕಾಗಿ ಅವರು ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ಕೂಡ ಶ್ರೀನಿಧಿ ಶೆಟ್ಟಿ ಮುಂದಿನ ದಿನಗಳಲ್ಲಿ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.