ಅನುಪಮಾ ರವರ ಸ್ಥಾನಕ್ಕೆ ಬಂದಿರುವ ರಾಜ ರಾಣಿ ನಿರೂಪಕಿ ಜಾಹ್ನವಿ ರವರ ಹಿನ್ನೆಲೆ ಏನು ಗೊತ್ತೇ?

64

ನಮಸ್ಕಾರ ಸ್ನೇಹಿತರೆ ಕಲರ್ಸ್ ಕನ್ನಡ ವಾಹಿನಿಯ ರಾಜರಾಣಿ ಕಾರ್ಯಕ್ರಮದ ಮೊದಲನೆ ಸೀಸನ್ ಸಾಕಷ್ಟು ಯಶಸ್ವಿಯಾಗಿ ಪ್ರಸಾರ ಕಂಡಿತ್ತು. ಹೀಗಾಗಿ ಈಗಾಗಲೇ ರಾಜಾರಾಣಿ ಕಾರ್ಯಕ್ರಮದ ಎರಡನೇ ಸೀಸನ್ ಕೂಡ ಪ್ರಾರಂಭವಾಗಿದೆ. ಆದರೆ ಅನುಪಮ ಅವರ ಬದಲಿಗೆ ನಿರೂಪಕಿಯಾಗಿ ಜಾಹ್ನವಿ ರವರು ಕಾಣಿಸಿಕೊಂಡಿದ್ದಾರೆ. ಮೊದಲನೇ ಆವೃತ್ತಿಯಲ್ಲಿ ಅನುಪಮ ಗೌಡ ರವರು ಸಾಕಷ್ಟು ಯಶಸ್ವಿಯಾಗಿ ಈ ಜವಾಬ್ದಾರಿಯನ್ನು ನಿರ್ವಹಿಸಿ ಪ್ರೇಕ್ಷಕರ ನೆಚ್ಚಿನ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಈಗ ಅವರ ಸ್ಥಾನವನ್ನು ರಿಪ್ಲೇಸ್ ಮಾಡಿರುವ ಜಾಹ್ನವಿ ಈ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಲು ಸಾಧ್ಯವ ಎನ್ನುವುದಾಗಿ ಎಲ್ಲರೂ ಕೂಡ ಅನುಮಾನವನ್ನು ವ್ಯಕ್ತಪಡಿಸಿದ್ದರು ಆದರೆ ಜಾಹ್ನವಿ ಈ ಜವಾಬ್ದಾರಿಯನ್ನು ಈಗ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಎಲ್ಲರೂ ಕೂಡ ಇವರ ಹಿನ್ನೆಲೆಯನ್ನು ತಿಳಿದುಕೊಳ್ಳಲು ಕಾತುರರಾಗಿದ್ದಾರೆ. ಹೀಗಾಗಿ ಇಂದಿನ ಲೇಖನಿಯಲ್ಲಿ ಅವರ ಹಿನ್ನೆಲೆ ಏನು ಎಂಬುದನ್ನು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ಇವರ ಪೂರ್ಣ ಹೆಸರು ಜಾಹ್ನವಿ ಜ್ಯೋತಿ. ಇವರು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇನ್ನು ಇವರು ಮೂಲಕ ಬೆಂಗಳೂರಿಗರಾಗಿದ್ದು ಇವರ ವಿದ್ಯಾಭ್ಯಾಸದ ಕುರಿತಂತೆ ಹೇಳುವುದಾದರೆ ಡೆಂಟಲ್ ಸರ್ಜರಿಯಲ್ಲಿ ಬ್ಯಾಚುಲರ್ ಡಿಗ್ರಿಯನ್ನು ಪಡೆದುಕೊಂಡಿದ್ದಾರೆ. ಇವರು ಡೆಂಟಿಸ್ಟ್ ಆಗಿದ್ದರೂ ಕೂಡ ಘಟನೆ ಕುರಿತಂತೆ ಸಾಕಷ್ಟು ಆಸಕ್ತಿಯನ್ನು ಅನುಪಮಾ ರವರ ಸ್ಥಾನಕ್ಕೆ ಬಂದಿರುವ ರಾಜ ರಾಣಿ ನಿರೂಪಕಿ ಜಾಹ್ನವಿ ರವರ ಹಿನ್ನೆಲೆ ಏನು ಗೊತ್ತೇ?ಹೊಂದಿದ್ದರು. ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದರು ಮಿಸ್ ಕರ್ನಾಟಕ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ.

ಊರ್ವಿ 6ನೇ ಮೈಕಲ್ ಸಾಗುತ ದೂರ ದೂರ ಹೀಗೆ ಹಲವಾರು ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಇವರ ಡೇಟ್ ಆಫ್ ಬರ್ತ್ ಬಗ್ಗೆ ಕೇಳುವುದಾದರೆ ಸೆಪ್ಟೆಂಬರ್ 22 1993. ಅಂದರೆ ಇವರಿಗೆ ಸದ್ಯಕ್ಕೆ 29 ವರ್ಷ ನಡೆಯುತ್ತಿದೆ. ಇನ್ನು ಇವರ ಹೈಟ್ 5.6 ವೈಟ್ 60 ಕೆಜಿ ಆಗಿದೆ. ಇನ್ನು ಇವರು ಫಿಲಂ ಮೇಕರ್ ಹಾಗೂ ರೈಟರ್ ಆಗಿರುವ ಸತ್ಯ ರಾಹಿಲಾ ರವರನ್ನು ಮದುವೆಯಾಗಿದ್ದಾರೆ. ಜೀವನದಲ್ಲಿ ಕೂಡ ಜೋಡಿಯಾಗಿ ಈಗ ಕಲರ್ಸ್ ಕನ್ನಡದಲ್ಲಿ ಜೋಡಿಗಳ ರಿಯಾಲಿಟಿ ಶೋ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಬಂದಿದ್ದಾರೆ. ಅವರ ನಿರೂಪಣೆ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.