ಆಗಿನ ಕಾಲದಲ್ಲಿಯೇ ದರ್ಶನ್-ವಿಜಯಲಕ್ಷ್ಮಿ ಮದುವೆಗೆ ಆಗಮಿಸಿದ್ದ ದೊಡ್ಮನೆ ಕುಟುಂಬ ನೀಡಿದ ದುಬಾರಿ ಉಡುಗೊರೆ ಏನು ಗೊತ್ತೇ?
ನಮಸ್ಕಾರ ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಎಂದರೆ ಕನ್ನಡ ಚಿತ್ರರಂಗದಲ್ಲಿ ಒಂದು ಬೇರೆಯದೇ ರೀತಿಯ ಖದರ್ ಹಾಗೂ ಗೌರವ ಇದೆ. ಖ್ಯಾತ ನಟನ ಮಗನಾಗಿದ್ದರೂ ಕೂಡ ಜೀವನದ ಕಷ್ಟಗಳನ್ನು ಅನುಭವಿಸಿ ಜೀವನ ಎಂದರೇನು ಎಂಬುದನ್ನು ತಿಳಿದುಕೊಂಡು ಪ್ರತಿಯೊಂದು ಅವಮಾನ ಸನ್ಮಾನಗಳನ್ನು ಎದುರಿಸಿ ಇಂದು ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುವ ಪಟ್ಟವನ್ನು ಅಲಂಕರಿಸಿದ್ದಾರೆ. ಹೌದು ಗೆಳೆಯರೇ ಕೇವಲ ಸಿನಿಮಾದಲ್ಲಿ ನಟಿಸುವ ಕುರಿತಂತೆ ಮಾತ್ರವಲ್ಲದೆ ನಿಜಜೀವನದಲ್ಲಿ ಕೂಡ ನಮ್ರವಾಗಿ ಇರುವಂತಹ ಡಿ ಬಾಸ್ ರವರ ವ್ಯಕ್ತಿತ್ವವನ್ನು ನೋಡಿ ಕೂಡ ಅಭಿಮಾನಿಗಳಾದವರು ಕೂಡ ಸಾವಿರಾರು ಮಂದಿ ಇದ್ದಾರೆ.
ಇನ್ನು ಕಷ್ಟವೆಂದು ಬಂದವರಿಗೆ ಸಹಾಯ ಮಾಡುವುದರಲ್ಲಿ ದರ್ಶನ್ ರವರು ಎತ್ತಿದ ಕೈ ಎಂದು ಹೇಳಬಹುದಾಗಿದೆ. ಇದರ ಕುರಿತಂತೆ ಹಲವಾರು ದೃಷ್ಟಾಂತಗಳನ್ನು ಈಗಾಗಲೇ ನೀವು ಕೇಳಿ ತಿಳಿದಿದ್ದೀರಿ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಪತ್ನಿಯಾಗಿರುವ ವಿಜಯಲಕ್ಷ್ಮಿ ರವರನ್ನು ಸ್ನೇಹಿತರೊಬ್ಬರ ಬರ್ತಡೇ ಪಾರ್ಟಿಯಲ್ಲಿ ಕಾಮನ್ ಫ್ರೆಂಡ್ಸ್ ಮೂಲಕ ಪರಿಚಯ ಮಾಡಿಕೊಂಡು ನಂತರ ಇವರಿಬ್ಬರ ನಡುವೆ ಪ್ರೀತಿ ಉಂಟಾಗಿ ಇಬ್ಬರೂ ಕೂಡ 2000 ಇಸವಿಯಲ್ಲಿ ಮೇ 14ರಂದು ಚಿತ್ರರಂಗ ಹಾಗೂ ಸಮಾಜದ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ 5000ಕ್ಕೂ ಅಧಿಕ ಜನರ ಸಮಕ್ಷಮದಲ್ಲಿ ಮದುವೆಯಾಗುತ್ತಾರೆ.

ಇನ್ನು ಈ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ವರನಟ ಡಾಕ್ಟರ್ ರಾಜಕುಮಾರ್ ಹಾಗೂ ಅವರ ಪತ್ನಿ ಪಾರ್ವತಮ್ಮ ರಾಜಕುಮಾರ್ ಇಬ್ಬರು ಕೂಡ ಬರೋಬ್ಬರಿ ಹತ್ತು ಲಕ್ಷ ಮೌಲ್ಯದ ಎರಡು ಉಂಗುರಗಳನ್ನು ಇಬ್ಬರಿಗೂ ಕೂಡ ಉಡುಗೊರೆಯಾಗಿ ಮದುವೆಯಲ್ಲಿ ನೀಡುತ್ತಾರೆ. ಇನ್ನು ದರ್ಶನ್ ಅವರು ಕೂಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು ಅಣ್ಣಾವ್ರ ಪ್ರೊಡಕ್ಷನ್ ಸಂಸ್ಥೆಯಲ್ಲಿ ಎನ್ನುವುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬಹುದಾಗಿದೆ. ಒಟ್ಟಾರೆಯಾಗಿ ಇಬ್ಬರು ದಂಪತಿಗಳು ಈಗ ಎಲ್ಲರ ನೆಚ್ಚಿನ ಜೋಡಿ ಗಳಾಗಿದ್ದು 22 ವರ್ಷಗಳ ವೈವಾಹಿಕ ಜೀವನವನ್ನು ಕಳೆದಿದ್ದಾರೆ.