ವಿಕ್ರಾಂತ್ ರೋಣ ಟ್ರೈಲರ್ ಬಿಡುಗಡೆ ಮಾಡುವಾಗ ಮುಂಬೈ ನಲ್ಲಿ ಕಿಚ್ಚ ಸುದೀಪ್ ಧರಿಸಿದ ಜಾಕೆಟ್ ಬೆಲೆ ಎಷ್ಟು ಗೊತ್ತೇ?
ನಮಸ್ಕಾರ ಸ್ನೇಹಿತರೆ ಕೊನೆಗೂ ಸಾಕಷ್ಟು ವಿಚಾರಗಳಿಗಾಗಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಅಧಿಕೃತವಾಗಿ ಆರು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಹೌದು ಗೆಳೆಯರೇ ಕನ್ನಡ ಹಿಂದಿ ತಮಿಳು ತೆಲುಗು ಮಲಯಾಳಂ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿ ಕೂಡ ಚಿತ್ರದ ಟ್ರೈಲರ್ ಈಗಾಗಲೇ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಅನು ಭಂಡಾರಿ ನಿರ್ದೇಶನದಲ್ಲಿ ಹಾಗೂ ಜಾಕ್ ಮಂಜುನಾಥ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ತ್ರಿಡಿಯಲ್ಲಿ ವಿಶ್ವಾದ್ಯಂತ ಜುಲೈ 28 ರಂದು ಬಿಡುಗಡೆಯಾಗಲಿದೆ.
ಈಗಾಗಲೇ ಟ್ರೈಲರ್ ಪ್ರತಿಯೊಂದು ಭಾಷೆಯ ಪ್ರೇಕ್ಷಕರಲ್ಲಿ ದೊಡ್ಡಮಟ್ಟದ ಕುತೂಹಲವನ್ನು ಚಿತ್ರದ ಕುರಿತಂತೆ ಹುಟ್ಟಿಸಿದ್ದು ಮುಂದಿನ ದಿನಗಳಲ್ಲಿ ಕುತೂಹಲ ಎನ್ನುವುದು ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ರೂಪಾಯಿ ಮೂಲಕ ಪರಿಹಾರ ಗೊಳ್ಳಲಿದೆ ಎಂದು ಹೇಳಬಹುದಾಗಿದೆ. ಇನ್ನು ಬೆಂಗಳೂರಿನ ಒರಿಯನ್ ಮಾಲ್ ನಲ್ಲಿ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮವನ್ನು ಮುಗಿಸಿದ ನಂತರ ಕಿಚ್ಚ ಸುದೀಪ್ ರವರ ಜಾಕ್ವಲಿನ್ ಫರ್ನಾಂಡೀಸ್ ಅವರ ಜೊತೆಗೆ ಮುಂಬೈನಲ್ಲಿ ಕೂಡ ಜೂನ್ 23ರಂದು ಹಿಂದಿಯ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಲ್ಲಿ ಕಿಚ್ಚ ಸುದೀಪ್ ರವರು ಧರಿಸಿದ್ದ ಜಾಕೆಟ್ ಮೇಲೆ ಎಲ್ಲರ ಕಣ್ಣು ಬಿದ್ದಿತ್ತು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಿಚ್ಚ ಸುದೀಪ್ ರವರು ಮೊದಲೇ ಸ್ಟೈಲ್ಗೆ ಹೆಸರುವಾಸಿಯಾದವರು. ಈ ಜಾಕೆಟ್ ಎನ್ನುವುದು ಅವರಿಗೆ ಇನ್ನಷ್ಟು ಮೆರುಗು ನೀಡಿತ್ತು.

ಹೌದು ಗೆಳೆಯರೇ ಕಪ್ಪು ಹಾಗೂ ಬೂದುಬಣ್ಣದ ಕಾಂಬಿನೇಷನ್ನಲ್ಲಿ ಇರುವಂತಹ ಈ ಎಂಪೋರಿಯಂ ಅರ್ಮಾನಿ ಬ್ರಾಂಡ್ ನ ಜಾಕೆಟ್ ಅನ್ನು ಸುದೀಪ್ ರವರು ಕಾರ್ಯಕ್ರಮದಲ್ಲಿ ಧರಿಸಿದ್ದರು. ಕಿಚ್ಚ ಸುದೀಪ್ ರವರ ಧರಿಸಿರುವ ಈ ಜಾಕೆಟ್ ಬೆಲೆ ಬರೋಬ್ಬರಿ 23 ಸಾವಿರ ರೂಪಾಯಿ ಆಗಿದೆ. ಈ ಲುಕ್ ನಲ್ಲಿ ಸುದೀಪ್ ರವರು ಕ್ಯಾಮರ ಕಣ್ಣಿಗೆ ಕಂಡಿರುವ ಫೋಟೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು ಚಿತ್ರದ ಕುರಿತಂತೆ ಇನ್ನಷ್ಟು ಕುತೂಹಲ ಹೆಚ್ಚಿದೆ.