ತಾನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ತಿಳಿಸಿದ ಸಾರಾ, ಸಿಕ್ರೆ ಮದುವೆ ಫಿಕ್ಸ್ ಅಂತೇ, ನೋಡಿ ನೀವು ಟ್ರೈ ಮಾಡ್ತೀರಾ??

26

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ಹುಡುಗನಿಗೂ ಕೂಡ ಸೆಲೆಬ್ರಿಟಿ ಕೃಷ್ ಇದ್ದೇ ಇರುತ್ತಾರೆ. ಅದರಲ್ಲೂ ಒಬ್ಬ ಬಾಲಿವುಡ್ ನಟಿಯ ಕುರಿತಂತೆ ಖಂಡಿತವಾಗಿ ಪ್ರತಿಯೊಬ್ಬ ಹುಡುಗನ ಕೂಡ ಅವರು ನನ್ನ ಕನಸಿನ ಹುಡುಗಿ ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಭಾವನೆ ಜೀವನದಲ್ಲಿ ಒಮ್ಮೆಯಾದರೂ ಮೂಡಿಬರುತ್ತದೆ. ಇನ್ನು ಅಂತಹವರು ಜೀವನ ಸಂಗಾತಿಯಾಗಿ ಸಿಕ್ಕರಂತೂ ಕೇಳುವುದೇ ಬೇಡ ಸ್ವರ್ಗಕ್ಕೆ ಮೂರೇ ಗೇಣು ಎಂದು ಹೇಳಬಹುದು. ಹೌದು ಗೆಳೆಯರೇ ಈಗ ಎಲ್ಲರಿಗೂ ಕೂಡ ಇಂತಹ ಪ್ರಯತ್ನವನ್ನು ಮಾಡುವಂತಹ ಅವಕಾಶವನ್ನು ಬಾಲಿವುಡ್ ಚಿತ್ರರಂಗದ ಯುವ ನಟಿಯಾಗಿರುವ ಸಾರಾ ಅಲಿ ಖಾನ್ ಅವರು ನೀಡಿದ್ದಾರೆ ಎಂದು ಹೇಳಬಹುದಾಗಿದೆ.

ಸಾರಾ ಅಲಿ ಖಾನ್ ಅವರ ಕುರಿತಂತೆ ನಿಮಗೆಲ್ಲರಿಗೂ ತಿಳಿದೇ ಇದೆ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸೈಫ್ ಅಲಿ ಖಾನ್ ರವರ ಮೊದಲ ಹೆಂಡತಿಯ ಮಗಳಾಗಿದ್ದಾರೆ. ಈಗಾಗಲೇ ಬಾಲಿವುಡ್ ಚಿತ್ರರಂಗದಲ್ಲಿ ಒಂದಾದಮೇಲೊಂದರಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮುಂದಿನ ದಿನಗಳಲ್ಲಿ ಸಾಕಷ್ಟು ಬೇಡಿಕೆಯನ್ನು ಹೊಂದುವಂತಹ ನಾಯಕಿಯಾಗಿ ಕಾಣಿಸಿಕೊಳ್ಳುವ ಎಲ್ಲಾ ಭರವಸೆ ಮೂಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಇವರಿಗೆ ಲಕ್ಷಾಂತರ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಇವರ ಸೌಂದರ್ಯಕ್ಕೆ ಮನಸೋಲದವರಿಲ್ಲ. ಸೌಂದರ್ಯಕ್ಕಿಂತ ಹೆಚ್ಚಾಗಿ ಇವರ ಗುಣನಡತೆ ಗೆ ಮನಸೋಲದವರಿಲ್ಲ ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬರನ್ನು ಆದರಿಸುವ ಗುಣವನ್ನು ಸೆಲೆಬ್ರಿಟಿ ಕಿಡ್ ಹಾಗಿದ್ದರೂ ಕೂಡ ಹೊಂದಿರುವುದು ವಿಶೇಷವಾಗಿದೆ.

ಇನ್ನು ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ಸಾರ ತಮ್ಮನ್ನು ಮದುವೆಯಾಗುವ ವ್ಯಕ್ತಿಯಲ್ಲಿ ಈ ಗುಣವಿದ್ದರೆ ಖಂಡಿತವಾಗಿ ನಾನು ಅವರನ್ನು ಮದುವೆಯಾಗುತ್ತೇನೆ ಎಂಬುದಾಗಿ ಹೇಳಿದ್ದಾರೆ. ಹೌದು ಗೆಳೆಯ ಅವರ ಜೀವನದಲ್ಲಿ ಅವರ ತಾಯಿ ಅಮೃತ ಸಿಂಗ್ ಅತ್ಯಂತ ಮುಖ್ಯವಾದ ವ್ಯಕ್ತಿಯಾಗಿದ್ದು ಅವರನ್ನು ತಾನು ಬಿಟ್ಟು ಹೋಗುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಒಂದು ವೇಳೆ ನನ್ನನ್ನು ಮದುವೆಯಾಗುವ ವ್ಯಕ್ತಿ ನಮ್ಮ ತಾಯಿಯ ಜೊತೆಗೆ ನನ್ನ ಜೊತೆಗೆ ಅದೇ ಮನೆಯಲ್ಲಿ ಇರಲು ಒಪ್ಪಿದರೆ ಮಾತ್ರ ನಾನು ಅವರನ್ನು ಮದುವೆಯಾಗಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಕೆಲವೊಂದು ಹುಡುಗರು ಸೋಶಿಯಲ್ ಮೀಡಿಯಾದಲ್ಲಿ ಇಷ್ಟೇ ತಾನೇ ನಾನ್ ರೆಡಿ ಎಂಬುದಾಗಿ ಕಾಮೆಂಟ್ ಕೂಡ ಮಾಡಿದ್ದಾರೆ.