ತನ್ನ ನಕ್ಷತ್ರವನ್ನು ಬದಲಾವಣೆ ಮಾಡಿದ ಸೂರ್ಯ ದೇವ: ಇದರಿಂದ ಮೂರು ರಾಶಿಗಳ ಕಷ್ಟ ಕಳೆದು ಅದೃಷ್ಟ ಆರಂಭ. ಯಾರ್ಯಾರಿಗೆ ಗೊತ್ತೇ?

31

ನಮಸ್ಕಾರ ಸ್ನೇಹಿತರೆ ಇದೇ ಜೂನ್ 22ರಂದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳ ರಾಜನಾಗಿರುವ ಸೂರ್ಯ ನಕ್ಷತ್ರಪುಂಜ ವನ್ನು ಬದಲಾಯಿಸಲು ಇದ್ದಾನೆ. ಹೌದು ಗೆಳೆಯರೇ ಕೇವಲ ರಾಶಿ ಬದಲಾವಣೆ ಮಾತ್ರವಲ್ಲದೆ ನಕ್ಷತ್ರ ಬದಲಾವಣೆಯೂ ಕೂಡ ಆಯಾಯ ರಾಶಿಯವರ ಜೀವನ ಕ್ರಮದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ. ಇನ್ನು ಸೂರ್ಯ ಜುಲೈ 6ರವರೆಗೆ ಆರ್ದ್ರ ನಕ್ಷತ್ರದಲ್ಲಿ ಇರುತ್ತಾನೆ. ಈ ಸಂದರ್ಭದಲ್ಲಿ ಮೂರು ರಾಶಿಯವರಿಗೆ ಕಷ್ಟಗಳು ಕಳೆದು ಶುಭದಿನಗಳು ಮೂಡಿಬರಲಿವೆ.

ಮಿಥುನ ರಾಶಿ; ಆರ್ಥಿಕವಾಗಿ ನಿಮ್ಮ ಜೀವನ ಬಲಿಷ್ಠ ಗೊಳ್ಳಲಿದೆ ಹಾಗೂ ನಿಮ್ಮ ಕೆಲಸದಲ್ಲಿ ವೇತನ ಹಾಗೂ ಸ್ಥಾನ ಕ್ರಮದಲ್ಲಿ ಬಡ್ತಿ ಸಿಗಲಿದೆ. ನಿಮ್ಮ ಜೀವನದ ಅದೃಷ್ಟ ದಿಂದಾಗಿ ಎಲ್ಲ ಕೆಲಸಗಳು ಪೂರ್ಣ ವಾಗುವುದರಿಂದ ನಿಮ್ಮ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಮೆಚ್ಚುಗೆ ಸಿಗುತ್ತದೆ. ನಿಮ್ಮ ಮನಸ್ಸಿನಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸುವ ಇಚ್ಛೆ ಇದ್ದರೆ ಇದೊಂದು ಪ್ರಶಸ್ತವಾದ ಸಮಯ.

ಸಿಂಹ ರಾಶಿ; ಅರ್ಧಕ್ಕೆ ನಿಂತಿರುವ ಕೆಲಸಗಳು ಸಂಪೂರ್ಣ ಯಶಸ್ವಿಯಾಗಲಿವೆ. ಒಂದು ವೇಳೆ ನೀವು ಕೆಲಸದಲ್ಲಿದ್ದರೆ ನಿಮ್ಮ ಕೆಲಸದಲ್ಲಿ ಪ್ರಮೋಷನ್ ಸಿಗಲಿದ್ದು ಸಂಭಾವನೆ ಕೂಡ ಹೆಚ್ಚಾಗಲಿದೆ. ಈ ಶುಭ ಸಂದರ್ಭದಲ್ಲಿ ನೀವು ಹೊಸಮನೆ ಹಾಗೂ ಹೊಸ ವಾಹನವನ್ನು ಖರೀದಿಸುವ ಯೋಗ ನಿಮ್ಮ ಜಾತಕದಲ್ಲಿ ಇದೆ.

ಕನ್ಯಾ ರಾಶಿ; ಜೂನ್ 22ರಿಂದ ಪ್ರಾರಂಭವಾಗಿ ಜುಲೈ 6ರವರೆಗೆ ಇರುವಂತಹ ಉತ್ತಮವಾದ ಸಂದರ್ಭದಲ್ಲಿ ನೀವು ಹಲವಾರು ಶುಭ ಸುದ್ದಿಗಳನ್ನು ಕೇಳಲಿದ್ದೀರಿ. ಕೆಲಸದಲ್ಲಿ ಸಂಬಳದ ಹೆಚ್ಚಳ ಹಾಗೂ ವ್ಯಾಪಾರದಲ್ಲಿ ಲಾಭದ ಹೆಚ್ಚಳದಿಂದಾಗಿ ಆರ್ಥಿಕ ಸ್ಥಿತಿ ಸದೃಢವಾಗಿರಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರಿ ಕೆಲಸವನ್ನು ಅಪೇಕ್ಷಿಸುವವರಿಗೆ ಶುಭಸುದ್ದಿ ದೊರೆಯಲಿದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.