ಕೊನೆಗೂ ರಿಲೀಸ್ ಆಯಿತು, ಹೊಸ ಟಿ 20 ರ್ಯಾಂಕಿಂಗ್, ರೋಹಿತ್ ರವರನ್ನು ಹಿಂದಕ್ಕೆ ಹಾಕಿದ ಇಶಾನ್ ಕಿಶನ್, ದಿನೇಶ್ ಕಾರ್ತಿಕ್ ಭರ್ಜರಿ ಕಮ್ ಬ್ಯಾಕ್.

30

ನಮಸ್ಕಾರ ಸ್ನೇಹಿತರೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನು ಮುಗಿಸಿದ್ದು ಈಗಾಗಲೇ ಐರ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಕ್ರಿಕೆಟ್ ಸರಣಿಗೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಇದೆ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ಇರುವಂತಹ ಟಿ-ಟ್ವೆಂಟಿ ವಿಶ್ವಕಪ್ ಗೆ ತಯಾರಿ ಮಾಡುವ ನಿಟ್ಟಿನಲ್ಲಿ ಕೇವಲ ಯುವ ಆಟಗಾರರನ್ನೇ ತಂಡದಲ್ಲಿ ಆಯ್ಕೆ ಮಾಡಲಾಗುತ್ತಿದೆ. ಇನ್ನು ಸದ್ಯಕ್ಕೆ ಇತ್ತೀಚಿಗಷ್ಟೆ ಐಸಿಸಿ ಟಿ-ಟ್ವೆಂಟಿ ರ್ಯಾಂಕಿಂಗ್ ಅನ್ನು ಬಿಡುಗಡೆ ಮಾಡಿದ್ದು ಹಲವಾರು ಅಚ್ಚರಿ ಆಗುವಂತಹ ಬದಲಾವಣೆಗಳು ನಡೆದಿದೆ. ಹಾಗಿದ್ದರೆ ಯಾವೆಲ್ಲ ಆಟಗಾರರು ಯಾವೆಲ್ಲ ಸ್ಥಾನವನ್ನು ಅಲಂಕರಿಸಿದ್ದಾರೆ ಎಂಬುದನ್ನು ನೋಡೋಣ ಬನ್ನಿ.

ಮೊದಲಿಗೆ ದಿನೇಶ್ ಕಾರ್ತಿಕ್ ರವರ ಕುರಿತಂತೆ ಹೇಳುವುದಾದರೆ ಮೂರು ವರ್ಷಗಳ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭರ್ಜರಿ ಪ್ರದರ್ಶನವನ್ನು ನೀಡುವ ಮೂಲಕ 108 ಸ್ಥಾನಗಳ ಏರಿಕೆಯನ್ನು ಕಂಡು 87ನೇ ಸ್ಥಾನಕ್ಕೆ ಭರ್ಜರಿ ಜಿಗಿತವನ್ನು ಕಂಡಿದ್ದಾರೆ. ಸೌತ್ ಆಫ್ರಿಕಾ ಸರಣಿಯಿಂದ ಹಿಂದೆ ಸರಿದಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ ರವರು 21ನೇ ಸ್ಥಾನದಲ್ಲಿದ್ದರೆ ನಾಯಕ ರೋಹಿತ್ ಶರ್ಮಾ ರವರು 18 ನೇ ಸ್ಥಾನದಲ್ಲಿದ್ದಾರೆ. ಇನ್ನು ಮತ್ತೊಮ್ಮೆ ಮಧ್ಯಮ ಕ್ರಮಾಂಕದ ಆಟಗಾರ ಆಗಿರುವ ಶ್ರೇಯಸ್ ಅಯ್ಯರ್ ಅವರು 19ನೇ ಸ್ಥಾನದಲ್ಲಿದ್ದಾರೆ. ಈ ಬಾರಿಯ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮವಾಗಿ ಹಾಗೂ ಭಾರತದ ತಂಡದ ಪರವಾಗಿ ಅತ್ಯಂತ ಹೆಚ್ಚು ರನ್ ಗಳಿಸಿರುವ ಇಶಾನ್ ಕಿಶಾನ್ ಟಾಪ್ 10 ರಲ್ಲಿರುವ ಏಕೈಕ ಭಾರತೀಯ ಕ್ರಿಕೆಟರ್ ಆಗಿದ್ದಾರೆ.

ಹೌದು ಗಳಿಗೆ ಟಿ-ಟ್ವೆಂಟಿ ಕ್ರಿಕೆಟಿನ ಟಾಪ್ 10 ಬ್ಯಾಟ್ಸ್ಮನ್ ಗಳಲ್ಲಿ ಇಶಾನ್ ಕಿಶನ್ 6ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಒಂದನೇ ಸ್ಥಾನದಲ್ಲಿ ಪಾಕಿಸ್ತಾನದ ಕಪ್ತಾನ ಆಗಿರುವ ಬಾಬರ್ ಆಜಮ್ ಇದ್ದಾರೆ. ಮುಂದಿನ ದಿನಗಳಲ್ಲಿ ಟಿ-ಟ್ವೆಂಟಿ ಸರಣಿಗಳು ಹೆಚ್ಚುತ್ತಿದ್ದಂತೆ ಹೆಚ್ಚು-ಹೆಚ್ಚು ಭಾರತೀಯ ಕ್ರಿಕೆಟಿಗರು ಈ ಸ್ಥಾನಗಳಲ್ಲಿ ಕಂಡುಬರಬಹುದಾಗಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.