ಉಮ್ರಾನ್ ಮಲಿಕ್ ರವರು ಆಡಲು ಅವಕಾಶ ಸಿಗದೇ ಇರಲು ಕಾರಣವಾದರು ಯಾರು ಗೊತ್ತೇ? ಈ ನಿರ್ಧಾರ ಯಾರದ್ದು ಗೊತ್ತೇ??
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ ಐಪಿಎಲ್ ಮೂಲಕ ಜಮ್ಮು-ಕಾಶ್ಮೀರ ಮೂಲದ ವೇಗದ ಬೌಲರ್ ಆಗಿರುವ ಉಮ್ರಾನ್ ಮಲಿಕ್ ಉತ್ತಮ ಪ್ರದರ್ಶನವನ್ನು ತೋರ್ಪಡಿಸಿ ಈಗಾಗಲೇ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇನ್ನು 22 ವರ್ಷದ ಹುಡುಗ ಆಗಿರುವ ಮಲ್ಲಿಕ್ ಈ ಬಾರಿಯ ಸೌತ್ ಆಫ್ರಿಕಾ ತಂಡಕ್ಕೆ ಕೂಡ ಭಾರತೀಯ ತಂಡದ ಪರವಾಗಿ ಆಡಲು ಆಯ್ಕೆಯಾಗಿದ್ದರು. ಐಪಿಎಲ್ ನಲ್ಲಿ ಸತತವಾಗಿ 150 ಕಿಲೋಮೀಟರ್ ಗಳಿಗೂ ಅಧಿಕ ವೇಗದಲ್ಲಿ ಬೌಲ್ ಮಾಡುವ ಉಮ್ರಾನ್ ಭಾರತೀಯ ಕ್ರಿಕೆಟ್ ತಂಡದ ನೆಟ್ ಪ್ರಾಕ್ಟೀಸ್ ನಲ್ಲಿ ಕೂಡ 163.7 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ವಿಶ್ವದಾಖಲೆಯನ್ನು ಮಾಡಿದ್ದಾರೆ. ಆದರೆ ಸೌತ್ ಆಫ್ರಿಕಾ ಸರಣಿಯನ್ನು ಗಮನಿಸಿದರೆ ಇವರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಕೂಡ ಯಾವುದೇ ಅವಕಾಶವನ್ನು ನೀಡಿಲ್ಲ.
ಇದರ ಕುರಿತಂತೆ ಮಾತನಾಡಿರುವ ಮಹಮ್ಮದ್ ಕೈಫ್ ಅವರು ಇದಕ್ಕೆ ಕಾರಣವಾಗಿರುವುದು ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಎಂದು ಹೇಳಿದ್ದಾರೆ. ಅರೆ ಇದೇನಪ್ಪಾ ಶಾ’ಕಿಂಗ್ ಹೇಳಿಕೆ ಎಂಬುದಾಗಿ ನೀವು ಯೋಚಿಸಬಹುದು. ಯಾಕೆಂದರೆ ಭಾರತೀಯ ಕ್ರಿಕೆಟ್ ತಂಡದ ಬಹುತೇಕ ಎಲ್ಲಾ ಯುವ ಆಟಗಾರರು ಕೆ ಎಲ್ ರಾಹುಲ್ ರಿಷಬ್ ಪಂತ್ ಪೃಥ್ವಿ ಶಾ ಸಂಜು ಸ್ಯಾಮ್ಸನ್ ಸೇರಿದಂತೆ ಹಲವಾರು ಆಟಗಾರರು ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದ ಮೇರೆಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದವರು. ಇಂತಹ ಮಹಾನ್ ಮಾರ್ಗದರ್ಶಕ ಈ ಯುವ ಆಟಗಾರರನ್ನು ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುವುದನ್ನು ಹೇಗೆ ತಪ್ಪಿಸಿಯಾರು ಎಂಬುದಾಗಿ ನೀವು ಯೋಚಿಸಬಹುದು.

ಇದಕ್ಕೆ ಮೊಹಮ್ಮದ್ ಕೈಫ್ ರವರು ಒಂದು ಉತ್ತಮವಾದ ಕಾರಣವನ್ನು ಕೂಡ ನೀಡಿದ್ದಾರೆ. ಹೌದು ಗೆಳೆಯರೇ ಅದೇನೆಂದರೆ ಇನ್ನು 22 ವರ್ಷದ ಯುವಕ ಆಗಿರುವ ಉಮ್ರಾನ್ ಮಲಿಕ್ ಪೆವಿಲಿಯನ್ ನಲ್ಲಿ ಕೂತು ಅಂತರಾಷ್ಟ್ರೀಯ ಪಂದ್ಯಗಳನ್ನು ವೀಕ್ಷಿಸಿದಷ್ಟು ಆತನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅನುಭವ ಇನ್ನಷ್ಟು ಹೆಚ್ಚಾಗುತ್ತದೆ ಎಂಬುದಾಗಿಯೇ ದ್ರಾವಿಡ್ ಅವರು ಆತನನ್ನು ಇನ್ನು ಆಡಿಸಿಲ್ಲ. ಆತನನ್ನು ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಆಡುವುದನ್ನು ನೋಡಲು ನನಗೂ ಕೂಡ ಆಸೆ ಇದೆ ಆದರೆ ದ್ರಾವಿಡ್ ಅವರ ಯೋಜನೆ ಪ್ರಕಾರ ಇದು ನಿಜಕ್ಕೂ ಕೂಡ ಆತನಿಗೆ ಕಲಿಯುವಂತಹ ಸಮಯ ಎಂಬುದಾಗಿ ಕೈಫ್ ಹೇಳಿದ್ದಾರೆ.