ಮತ್ತೊಬ್ಬರು ನಟಿಯ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ನಾಗ ಚೈತನ್ಯ ಪರವಾಗಿ ನಿಂತ ಫ್ಯಾನ್ಸ್, ಸಮಂತಾ ಬೇಸರ ವ್ಯಕ್ತ ಪಡಿಸಿ ಹೇಳಿದ್ದೇನು ಗೊತ್ತೇ?
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಸಮಂತ ಹಾಗೂ ನಾಗಚೈತನ್ಯ ಇಬ್ಬರು ಕೂಡ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಟ್ಟು ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಬೇರೆಯಾಗಿದ್ದರು. ಏಳು ವರ್ಷಗಳ ಕಾಲ ಪ್ರೀತಿಸಿ ನಾಲ್ಕು ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿದ ನಂತರವೂ ಕೂಡ ಇಬ್ಬರು ಬೇರೆ ಬೇರೆಯಾಗಿದ್ದು ಅಭಿಮಾನಿಗಳಿಗೆ ಸಾಕಷ್ಟು ಬೇಸರವನ್ನು ಉಂಟುಮಾಡಿತ್ತು. ಆದರೆ ಇಬ್ಬರು ಕೂಡ ಪರಸ್ಪರ ವಿಚ್ಛೇದನ ಪಡೆದುಕೊಂಡು ನಂತರ ತಮ್ಮ ಸಿನಿಮಾ ಕರಿಯರ್ ಮೇಲೆ ಸಾಕಷ್ಟು ಗಮನವನ್ನು ವಹಿಸಿ ಹಲವಾರು ಚಿತ್ರಗಳಲ್ಲಿ ಕೂಡ ಈಗಾಗಲೇ ಸಕ್ರಿಯರಾಗಿದ್ದಾರೆ.
ಅದರಲ್ಲೂ ವಿಶೇಷವಾಗಿ ನಾಗಚೈತನ್ಯ ರವರಿಂದ ಹೆಚ್ಚಾಗಿ ಸಮಂತ ಅವರನ್ನು ಗಮನಿಸುವುದಾದರೆ ಚಿತ್ರರಂಗದಲ್ಲಿ ಹಿಂದೆಂದಿಗಿಂತಲೂ ಅತ್ಯಂತ ಹೆಚ್ಚು ಯಶಸ್ಸನ್ನು ಸಾಧಿಸಿ ಸದ್ಯದ ಮಟ್ಟಿಗೆ ಪ್ರತಿಯೊಬ್ಬ ನಿರ್ದೇಶಕರ ನೆಚ್ಚಿನ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ನಟ ನಾಗಚೈತನ್ಯ ರವರು ತೆಲುಗು ಚಿತ್ರರಂಗದ ನಟಿಯಾಗಿರುವ ಶೋಭಿತಾ ಧುಳಿಪಲ ರವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದಾಗಿ ಸುದ್ದಿ ಹರಡಿರುವುದು ನಿಮಗೆಲ್ಲರಿಗೂ ತಿಳಿದಿದೆ. ಆದರೆ ನಾಗಚೈತನ್ಯ ಅಭಿಮಾನಿಗಳು ಇದು ಸಮಂತಾ ರವರ ಅಭಿಮಾನಿಗಳಲ್ಲಿ ಕೆಲಸ ಸುಮ್ಮಸುಮ್ಮನೆ ಗಾಳಿಸುದ್ದಿ ಹರಡುತ್ತಿದ್ದಾರೆ ಎಂಬುದಾಗಿ ಮಾಧ್ಯಮಗಳಲ್ಲಿ ಕೂಡ ಸ್ವರ ಎತ್ತಿದ್ದು ಕೇಳಿಬಂದಿತ್ತು.

ಇದಕ್ಕೆ ಸರಿಯಾಗಿಯೇ ಪ್ರತಿಕ್ರಿಯೆ ನೀಡಿರುವ ಸಮಂತ ರವರು ಹೆಣ್ಣುಮಕ್ಕಳ ಕುರಿತಂತೆ ಗಾಳಿಸುದ್ದಿ ಹಬ್ಬಿದರೆ ಅದನ್ನು ನಿಜ ಎನ್ನುತ್ತೀರಿ ಅದೇ ಗಂಡು ಮಕ್ಕಳ ಕುರಿತಂತೆ ಗಾಳಿಸುದ್ದಿ ಹಬ್ಬಿದರೆ ಅದನ್ನು ಹೆಣ್ಣು ಹರಡಿಸಿದ್ದು ಎಂಬುದಾಗಿ ಹೇಳುತ್ತೀರಿ. ಇದರಲ್ಲಿ ಇನ್ವಾಲ್ವ್ ಆಗಿರುವವರು ಎಲ್ಲವನ್ನು ಬಿಟ್ಟು ಮುಂದೆ ಹೋಗುತ್ತಿದ್ದಾರೆ ನೀವು ಕೂಡ ನಿಮ್ಮ ಜೀವನದಲ್ಲಿ ಮುಂದೆ ಹೋಗಿ ನಿಮ್ಮ ಹೆತ್ತವರ ಕುರಿತಂತೆ ಯೋಚಿಸುವುದನ್ನು ಮಾಡಿ ಎಂಬುದಾಗಿ ಸರಿಯಾಗಿ ರಿಪ್ಲೈ ಮಾಡಿದ್ದಾರೆ. ಸಮಂತ ರವರ ಹೇಳಿಕೆ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡಿ ಹಂಚಿಕೊಳ್ಳಿ.