ಕೊನೆಗೂ ಸಿಕ್ಕಿತು ಸ್ಪಷ್ಟನೆ. ಪವಿತ್ರ ಲೋಕೇಶ್ ರವರಿಗೆ ನಿಜಕ್ಕೂ ಮತ್ತೊಂದು ಮದುವೆಯಾಗಿದೆಯೇ?? ತಮ್ಮ ಆದಿ ಹೇಳಿದ್ದೇನು ಗೊತ್ತೇ??

63

ನಮಸ್ಕಾರ ಸ್ನೇಹಿತರೇ ಸಾಕಷ್ಟು ದಿನಗಳಿಂದ ಕನ್ನಡ ಚಿತ್ರರಂಗದ ನಟಿಯೊಬ್ಬರ ಕುರಿತಂತೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಗಾಳಿಸುದ್ದಿ ಹರಿದಾಡುತ್ತಿದೆ. ಹೌದು ಗೆಳೆಯರೇ ಈ ಗಾಳಿಸುದ್ದಿ ಹರಿದಾಡುತ್ತಿರುವ ಬೇರೆ ಯಾವ ನಟಿಯ ಕುರಿತಂತೆ ಅಲ್ಲ ಬದಲಾಗಿ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿ ಹಾಗೂ ಪೋಷಕ ನಟಿಯ ಪಾತ್ರದಲ್ಲಿ ಕಾಣಿಸಿಕೊಂಡು ಬೇರೆ ಭಾಷೆಗಳಲ್ಲಿ ಕೂಡ ಮಿಂಚನ್ನು ಹರಿಸಿರುವ ನಟಿ ಪವಿತ್ರಾ ಲೋಕೇಶ್ ರವರ ಕುರಿತಂತೆ.

ಹೌದು ಗೆಳೆಯರೆ ಪವಿತ್ರಾಲೋಕೇಶ್ ರವರು ಪರಭಾಷೆಗಳಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಅವರ ಕುರಿತಂತೆ ಕೆಲವೊಂದು ಗಾಳಿಸುದ್ದಿಗಳು ದೊಡ್ಡಮಟ್ಟದಲ್ಲಿ ಹರಿದಾಡುತ್ತಿದ್ದು ಇದು ಅವರ ವೈಯಕ್ತಿಕ ಜೀವನವನ್ನು ತೆರೆದಿಡುವಂತೆ ಈ ವಿಚಾರವು ಸುದ್ದಿ ಮಾಡುತ್ತಿದೆ. ಹೌದು ಗೆಳೆಯರೆ ತೆಲುಗು ನಟ ಆಗಿರುವ ನರೇಶ್ ರವರನ್ನು ಪವಿತ್ರಾಲೋಕೇಶ್ ರವರು ಮದುವೆಯಾಗಿದ್ದಾರೆ ಎಂಬುದಾಗಿ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಇನ್ನು ನರೇಶ್ ಯಾರು ಎನ್ನುವುದನ್ನು ನೀವು ಕೇಳಬಹುದಾಗಿದೆ. ತೆಲುಗಿನ ಸೂಪರ್ ಸ್ಟಾರ್ ನಟ ಆಗಿರುವ ಕೃಷ್ಣರವರ ಎರಡನೇ ಹೆಂಡತಿ ವಿಜಯನಿರ್ಮಲ ಅವರ ಮಗನೇ ನರೇಶ್ ಆಗಿದ್ದಾರೆ.

ಹೌದು ಗೆಳೆಯರೇ ಸೂಪರ್ ಸ್ಟಾರ್ ಕೃಷ್ಣ ರವರು ಮಹೇಶ್ ಬಾಬುರವರ ತಂದೆ ಆಗಿದ್ದು ಇವರ ಎರಡನೇ ಹೆಂಡತಿಯ ಮಗನೇ ನರೇಶ್ ಆಗಿದ್ದು ಹಲವಾರು ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡು ಹೆಸರು ಸಂಪಾದಿಸಿದ್ದಾರೆ. ಇವರನ್ನೇ ಪವಿತ್ರ ಲೋಕೇಶ್ ರವರು ಮದುವೆಯಾಗಿದ್ದಾರೆ ಎಂಬುದಾಗಿ ಸುದ್ದಿಯಾಗುತ್ತಿರುವುದು. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಆದಿಲೋಕೇಶ್ ಅಂದರೆ ಪವಿತ್ರ ಲೋಕೇಶ್ ಅವರ ಸಹೋದರ ಈ ಮಾತುಗಳು ಸತ್ಯಕ್ಕೆ ದೂರವಾಗಿದ್ದು ನನ್ನ ಅಕ್ಕ ಅವರನ್ನು ಮದುವೆಯಾಗಿಲ್ಲ ಎಂಬುದಾಗಿ ಹೇಳಿದ್ದಾರೆ. ಈ ಕುರಿತಂತೆ ಹೆಚ್ಚು ಮಾತನಾಡಲು ನಾನು ಇಷ್ಟಪಡುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಈ ಕುರಿತಂತೆ ಪವಿತ್ರಾ ಲೋಕೇಶ್ ಅವರು ಇದುವರೆಗೂ ಯಾವುದೇ ಹೇಳಿಕೆಯನ್ನು ನೀಡದೆ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.