ಪಾರು ಧಾರವಾಹಿ ಮೂಲಕ ಮನಗೆದ್ದಿರುವ ಮೋಕ್ಷಿತ ಪೈ ಧರಿಸಿರುವ ಈ ಬ್ಲೌಸ್ ನ ಬೆಲೆ ಎಷ್ಟು ಗೊತ್ತೇ?? ಕೇಳಿದರೆ ತಲೆ ತಿರುಗುತ್ತದೆ. ಎಷ್ಟು ಸಾವಿರ ಗೊತ್ತೇ?
ಕನ್ನಡ ಕಿರುತೆರೆಯ ಪಾರು ಧಾರವಾಹಿ ಬಹಳ ಫೇಮಸ್ ಆಗಿರುವ ಧಾರವಾಹಿಗಳಲ್ಲಿ ಒಂದು, ಪಾರು ಧಾರವಾಹಿಯನ್ನು ಕಥಾನಾಯಕಿ ಪಾರುಗಾಗಿ ನೋಡುವವರು ಸಾಕಷ್ಟು ಜನ ಇದ್ದಾರೆ. ಪಾರು ಧಾರವಾಹಿಯಲ್ಲಿ ಈಗ ಪಾರುಗೆ ಕಷ್ಟದ ಸಮಯ ಎದುರಾಗಿದೆ. ಅತ್ತೆ ಕೊಟ್ಟ ಸವಾಲುಗಳನ್ನು ಗೆದ್ದು, ಮನೆಯ ಯಜಮಾನಿ ಆಗಿದ್ದ ಪಾರು ಮಾಡಿದ ಒಂದು ಎಡವಟ್ಟು, ಬೇರೆಯವರು ಮಾಡಿದ ಒಂದು ಕುತಂತ್ರದ ಬಗ್ಗೆ ಸರಿಯಾಗಿ ಯೋಚಿಸದೆ ಬಲಿಯಾದ ಪಾರು ಅಧಿಕಾರ ಕಳೆದುಕೊಂಡು ಈಗ ಮತ್ತೆ ಮನೆಕೆಲಸದವಳ ಹಾಗೆ ಆಗಿದ್ದಾಳೆ.
ಇನ್ನು ಜೆನೆರಲ್ ಆಗಿ ಧಾರವಾಹಿ ಮತ್ತು ಅದರ ಕಲಾವಿದರ ಬಗ್ಗೆ ಮಾತನಾಡುವುದಾದರೆ, ಜನರು ಅವರು ಧರಿಸುವ ಬಟ್ಟೆಗಳು, ಒಡವೆಗಳು, ಅವರ ಮೇಕಪ್ ಇದೆಲ್ಲವನ್ನು ಗಮನಿಸುವ ಸಲುವಾಗಿ ಅವರನ್ನು ಫಾಲೋ ಮಾಡುವುದು ಹೆಚ್ಚು. ಅದೇ ರೀತಿ ಈಗ ನಮ್ಮ ಪಾರು ಧರಿಸಿರುವ ಒಂದು ಬ್ಲೌಸ್ ವಿಚಾರ ನೆಟ್ಟಿಗರಿಗೆ ಶಾಕ್ ನೀಡಿದೆ. ಪಾರು ಪಾತ್ರದ ಮೋಕ್ಷಿತ ಅವರು ಧಾರವಾಹಿಯಲ್ಲಿ ಮೊದಲಿಗೆ ಬಹಳ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಿದ್ದರು, ಇವರು ಒಡವೆ ಧರಿಸುವುದಕ್ಕಿಂತ, ಸಿಂಪಲ್ ಆಗಿರುವಾಗಲೇ ಚಂದ ಎನ್ನುತ್ತಾರೆ ಅಭಿಮಾನಿಗಳು. ನಿಜ ಜೀವನದಲ್ಲಿ ಸಹ ಮೋಕ್ಷಿತ ಅಷ್ಟೇ ಸಿಂಪಲ್. ಆದರೆ ಇತ್ತೀಚೆಗೆ ಮೋಕ್ಷಿತ ಅವರು ಸೀರೆಗೆ ಧರಿಸಿರುವ ಬ್ಲೌಸ್ ನ ಬೆಲೆ ಕೇಳಿ, ಜನರು ಶಾಕ್ ಆಗಿರುವುದಂತೂ ಖಂಡಿತ.

ಕೆಂಪು ಬಣ್ಣದ ಬ್ಲೌಸ್ ಗೆ ಗೋಲ್ಡನ್ ಕಲರ್ ಮಿಕ್ಸ್ ಆಗಿದ್ದ ಬ್ಲೌಸ್ ಅನ್ನು ಪಾರು ಧರಿಸಿದ್ದರು. ಈ ಬ್ಲೌಸ್ ಮತ್ತು ಅದರಲ್ಲಿದ್ದ ವರ್ಕ್ ಜನರನ್ನು ಆಕರ್ಷಿಸಿದ್ದಂತೂ ನಿಜ. ಈ ಬ್ಲೌಸ್ ನೋಡಿ, ಅದನ್ನು ಗಮನಿಸಿದರೆ, ಬ್ಲೌಸ್ ನಲ್ಲಿ ವಿಭಿನ್ನವಾದ ವರ್ಕ್ ಇದೆ, ಕಾಯಿನ್ ಗಳನ್ನು ಬಳಸಿ ಬ್ಲೌಸ್ ವರ್ಕ್ ಮಾಡಲಾಗಿದೆ. ಗಮನಿಸಿದರೆ ಮಾತ್ರ ಅದು ಗೊತ್ತಾಗುತ್ತದೆ. ಇದನ್ನು ಕಾಯಿನ್ ಬ್ಲೌಸ್ ಎಂದು ಕರೆಯುತ್ತಾರೆ. ಈ ವಿಶಿಷ್ಟವಾದ ಬ್ಲೌಸ್ ಗಳನ್ನು ಟೈನಾಟ್ ಎನ್ನುವ ಸಂಸ್ಥೆ ತಯಾರಿಸುತ್ತಿದ್ದು, ಈ ಸಂಸ್ಥೆಯ ಓನರ್ ಹೆಸರು ಶಿಲ್ಪಾ, ಟೈನಾಟ್ ಸಂಸ್ಥೆಯ ಖಾತೆ ಇನ್ಸ್ಟಾಗ್ರಾಮ್ ನಲ್ಲಿ ಸಹ ಇದೆ. ಶಿಲ್ಪಾ ಅವರು ಇನ್ನು ಸಾಕಷ್ಟು ವಿಭಿನ್ನವಾದ ಬ್ಲೌಸ್ ಗಳನ್ನು ಡಿಸೈನ್ ಮಾಡಿದ್ದು, ಟ್ರೆಂಡ್ ಗೆ ತಕ್ಕ ಹಾಗೆ ಪ್ರೈಸ್ ಫಿಕ್ಸ್ ಮಾಡುತ್ತಾರಂತೆ. ಇನ್ನು ಪಾರು ಧರಿಸಿರುವ ಬ್ಲೌಸ್ ನ ಬೆಲೆ ₹12 ಸಾವಿರ ರೂಪಾಯಿ ಎಂದು ತಿಳಿಸಿದ್ದಾರೆ ಶಿಲ್ಪಾ.