ಪ್ರತಿ ಬಾಲಿವುಡ್ ಸ್ಟಾರ್ ನಟಿಯರ ಕಣ್ಣು ಕೆಜಿಎಫ್ 3 ರ ಮೇಲೆ. ಯಾಕೆ ಗೊತ್ತೇ?? ಅಸಲಿಗೆ ತೆರೆಹಿಂದೆ ನಡೆಯುತ್ತಿರುವುದಾದರೂ ಏನು ಗೊತ್ತೇ?

17

ಕೆಜಿಎಫ್2 ಸಿನಿಮಾ ಭಾರತ ಚಿತ್ರರಂಹದಲ್ಲಿ ಹಿಂದೆಂದೂ ನೋಡಿರದ ದಾಖಲೆ ಸೃಷ್ಟಿಸಿದೆ. ಕೆಲವರಿಗೆ ಈ ಸಿನಿಮಾ ಇಷ್ಟವಾಗಲಿಲ್ಲ, ಆದರೆ ಪ್ರೇಕ್ಷಕ ಮಹಾಶಯರು ಮಾತ್ರ, ಕೆಜಿಎಫ್2 ಸಿನಿಮಾ ನೋಡಿ ಫುಲ್ ಮಾರ್ಕ್ಸ್ ನೀಡಿದ್ದಾರೆ. ವಿಶ್ವಾದ್ಯಂತ ಕೆಜಿಎಫ್2 ಸಿನಿಮಾ 1200 ಕೋಟಿಗಿಂತ ಹೆಚ್ಚಿನ ಹಣ ಬಾಚಿಕೊಂಡಿದೆ. ಕೆಜಿಎಫ್2 ಮಾಡಿರುವ ದಾಖಲೆಗಳನ್ನು ಹೇಳುತ್ತಾ ಹೋದರೆ, ಹೇಳುತ್ತಲೇ ಇರಬಹುದು. ಅದರಲ್ಲೂ ಬಾಲಿವುಡ್ ಗೆ ಕೆಜಿಎಫ್2 ಸಿನಿಮಾ ದೊಡ್ಡ ಶಾಕ್ ಅನ್ನೇ ನೀಡಿತ್ತು. ಇದೀಗ ಕೆಜಿಎಫ್2 ಸಿನಿಮಾ ಮೇಲೆ ಬಾಲಿವುಡ್ ನ ದೊಡ್ಡ ನಟಿಯರೆ ಕಣ್ಣಿಟ್ಟಿದ್ದಾರಂತೆ..

ಕೆಜಿಎಫ್ ಸಿನಿಮಾ ಸೂಪರ್ ಹಿಟ್ ಆದ ಕಾರಣ, ಕೆಜಿಎಫ್2 ಮೇಲೆ ಎಲ್ಲರ ನಿರೀಕ್ಷೆ ಇತ್ತು. ನಿರೀಕ್ಷೆಯ ಮಟ್ಟಕ್ಕಿಂತ ಅದ್ಭುತವಾಗಿಯೇ ಮೂಡಿಬಂದಿತ್ತು ಕೆಜಿಎಫ್2. ಈ ಸಿನಿಮಾದಲ್ಲಿ ನಟಿಸಿರುವ ಪ್ರತಿಯೊಬ್ಬ ಕಲಾವಿದರ ಜೀವನವು ಬದಲಾಯಿತು ಎಂದರೆ ತಪ್ಪಾಗುವುದಿಲ್ಲ. ಕೆಜಿಎಫ್2 ಬಳಿಕ ರವೀನಾ ಟಂಡನ್, ಸಂಜಯ್ ದತ್, ಕೆಜಿಎಫ್ ಸಿನಿಮಾ ಹಾಡಿನ ಬಳಿಕ ಮೌನಿ ರಾಯ್ ಇವರೆಲ್ಲರ ಸ್ಟಾರ್ ಸ್ಟೇಟಸ್ ಸಹ ಬದಲಾಗಿದೆ. ಹಾಗಾಗಿ ಈಗ ಎಲ್ಲರ ಕಣ್ಣು ಕೆಜಿಎಫ್3 ಮೇಲಿದೆ. ಈಗಾಗಲೇ ನಿರ್ಮಾಪಕರೆ ಹೇಳಿರುವ ಹಾಗೆ, ಕೆಜಿಎಫ್3 ಸಿನಿಮಾ ಬರುವುದಂತೂ ಪಕ್ಕಾ, ಆದರೆ ಯಾವಾಗ ಶುರುವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸದ್ಯಕ್ಕಂತೂ ಕೆಜಿಎಫ್3 ಶುರುವಾಗುವುದಿಲ್ಲ. ಆದರೆ ಸಿನಿಮಾ ಮೇಲೆ ಈಗಾಗಲೇ ಬಾಲಿವುಡ್ ನಟಿಯರು ಕಣ್ಣಿಟ್ಟಿದ್ದಾರಂತೆ.

ಕೆಜಿಎಫ್3 ಸಿನಿಮಾದಲ್ಲಿ ನಟಿಸುವುದಾಗಿ, ನಟಿಸಲು ಆಸಕ್ತಿ ಇದೆ ಎಂದು ಬಾಲಿವುಡ್ ನ ಖ್ಯಾತ ನಟಿಯರು ಕೆಜಿಎಫ್2 ನಿರ್ಮಾಪಕರ ಜೊತೆಗೆ ಮಾತನಾಡಿದ್ದಾರಂತೆ ಎನ್ನುವ ಮಾಹಿತಿ ಸಿಕ್ಕಿದೆ. ನಿರ್ಮಾಪಕರು ಸಹ ಕೆಜಿಎಫ್3 ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣ, ಬಾಲಿವುಡ್ ನಟಿಯರನ್ನು ಹಾಕಿಕೊಳ್ಳಲು ನಿರ್ಮಾಪಕರು ಮನಸ್ಸು ಮಾಡಬಹುದು ಎನ್ನಲಾಗುತ್ತಿದೆ. ಬಾಲಿವುಡ್ ನಟಿಯರು ಕೆಜಿಎಫ್3 ನಲ್ಲಿ ನಟಿಸಲು ಆಸೆಪಟ್ಟಿದ್ದಾರೆ ಎನ್ನುವ ಸುದ್ದಿಯೇನೋ ನಿಜ, ಆದರೆ ನಟಿಸಲು ಇಂಗಿತ ವ್ಯಕ್ತಪಡಿಸಿರುವ ಆ ನಟಿಯರು ಯಾರು ಎನ್ನುವುದು ಮಾತ್ರ ಇನ್ನೂ ರಿವೀಲ್ ಆಗಿಲ್ಲ. ಒಟ್ಟಿನಲ್ಲಿ ನಮ್ಮ ಕನ್ನಡ ಸಿನಿಮಾ ಇಷ್ಟರ ಮಟ್ಟಿಗೆ ತಲುಪಿರುವುದು ನಿಜಕ್ಕೂ ನಮಗಂತೂ ಹೆಮ್ಮೆಯ ವಿಚಾರವೇ ಆಗಿದೆ.