ಮುಂದಿನ 2024 ರ ವರೆಗೂ ಶನಿ ಮಹಾತ್ಮನ ಕೃಪೆಯಿಂದ ರಾಜಯೋಗ ಪಡೆದು ಲಕ್ಷ ಲಕ್ಷ ಹಣಗಳಿಸುವವರು ಯಾವ್ಯಾವ ರಾಶಿಯವರು ಗೊತ್ತೇ?

46

ನಮಸ್ಕಾರ ಸ್ನೇಹಿತರೇ 2022 ರಿಂದ 2024 ರವರೆಗೆ ಈ ಎರಡು ರಾಶಿಯವರೆಗೆ ರಾಜಯೋಗ ಇರಲಿದೆ. ಈ ಎರಡು ರಾಶಿಯವರಿಗೆ ಶನಿದೇವನ ಕೃಪೆಯಿಂದ ರಾಜಯೋಗ ಬರಲಿದೆ. ಹಾಗಾದರೆ ಶನಿದೇವನಿಂದ ರಾಜಯೋಗ ಪಡೆಯುತ್ತಿರುವ ಆ ಎರಡು ಅದೃಷ್ಟ ರಾಶಿಗಳು ಯಾವ್ಯಾವು ಮತ್ತು ಈ ರಾಜಯೋಗದಿಂದಾಗಿ ಈ ರಾಶಿಯ ವ್ಯಕ್ತಿಗಳು ಯಾವೆಲ್ಲಾ ರೀತಿಯ ಅನುಕೂಲಗಳನ್ನ ಪಡೆಯಲಿದ್ದಾರೆ ಎಂಬುದನ್ನ ತಿಳಿಯಲು ಈ ಲೇಖನವನ್ನ ಸಂಪೂರ್ಣವಾಗಿ ಓದಿ. ಸಾಮಾನ್ಯವಾಗಿ ಈ ಶನಿದೇವ ರಾಶಿಯ ಮೇಲೆ ತನ್ನ ಸ್ಥಾನವನ್ನ ಅಲಂಕರಿಸಿದಾಗ ಆ ರಾಶಿಯ ವ್ಯಕ್ತಿಗಳಿಗೆ ಅಪಾಯ ಕಂಟಕ ಎಂದು ಹೇಳಲಾಗುತ್ತದೆ.

ಆದರೆ ಅಸಲಿಗೆ ಅದು ನಿಜವಾಗಿಯೂ ಕೂಡ ಸತ್ಯಕ್ಕೆ ದೂರವಾದ ಮಾತು ಎಂದು ಹೇಳಬಹುದು. ಯಾಕಂದ್ರೆ ಶನಿ ದೇವರು ನಮ್ಮ ಕಷ್ಟ ಕಾರ್ಪಣ್ಯಗಳನ್ನ ಪರೀಕ್ಷೆ ಮಾಡಿ ಅದಕ್ಕೆ ಸೂಕ್ತ ಪರಿಹಾರ ನೀಡುವ ಕರುಣಾಮಯಿ ಅನ್ನೋದು ಬಹುತೇಕ ಮಂದಿಗೆ ತಿಳಿದಿರುವುದಿಲ್ಲ. ಅಂದಹಾಗೆ ಇದೇ ಕಳೆದ ಏಪ್ರಿಲ್ 29 ರಿಂದ ಶನಿಗ್ರಹವು ಕುಂಭ ರಾಶಿಗೆ ಸಂಚಾರ ಮಾಡಿದ್ದಾನೆ. ಇದರ ಪರಿಣಾಮದಿಂದಾಗಿ ದ್ವಾದಶ ರಾಶಿ ಚಕ್ರಗಳ ಈ ಎರಡು ಪ್ರಮುಖ ರಾಶಿಗಳ ಮೇಲೆ ಶನಿಗ್ರಹದ ಕೃಪಾಕಟಾಕ್ಷ ಇರಲಿದೆ.

ಶನಿಕೃಪೆಗೆ ಪಾತ್ರವಾಗುತ್ತಿರುವ ಮೊದಲ ರಾಶಿ ಅಂದ್ರೆ ಅದು ದ್ವಾದಶ ರಾಶಿ ಚಕ್ರದ ಪ್ರಥಮ ರಾಶಿ ಆಗಿರುವ ಮೇಷ ರಾಶಿ. ಈ ಮೇಷ ರಾಶಿ ಅವರ ಮೇಲೆ ಶನಿಗ್ರಹದ ದೃಶ್ಟಿ ಬೀರಿದ್ದು ಈ ರಾಶಿಯ ವ್ಯಕ್ತಿಗಳಿಗೆ ಎರಡು ವರ್ಷಗಳ ಕಾಲ ರಾಜಯೋಗ ಇರಲಿದೆ. ಇವರು ಮುಟ್ಟಿದ್ದೆಲ್ಲಾ ಚಿನ್ನ ಆಗುವಂತಹ ಕಾಲ ಇವರಿದ್ದಾಗಿದೆ. ಈ ರಾಶಿಯ ಜನರಿಗೆ ಅದೃಷ್ಟದ ಬಾಗಿಲು ತೆರೆದಿದೆ. ಆದರೆ ಈ ಜನರು ಭಯ ಆತಂಕ ಬಿಟ್ಟು ಮುನ್ನುಗಿದರೆ ನಿರೀಕ್ಷೆಗೆ ಮೀರಿ ಲಾಭವನ್ನ ಕಾಣಬಹುದಾಗಿರುತ್ತದೆ.

ನೂತನ ವ್ಯಾಪಾರ ವಹಿವಾಟು ಆರಂಭಿಸಲು ಇದು ಇವರಿಗೆ ಸೂಕ್ತ ಎನ್ನಬಹುದು. ವಿಧ್ಯಾರ್ಥಿಗಳಿಗೆ ಹೊರ ದೇಶದಲ್ಲಿ ಓದುವ ಅವಕಾಶ ಒದಗಿ ಬರಲಿದೆ. ಬಹಳ ದಿನಗಳಿಂದ ವ್ಯಾಜ್ಯದಲ್ಲಿದ್ದ ಪಿತ್ರಾರ್ಜಿತ ಆಸ್ತಿ ನಿಮ್ಮ ಪಾಲಾಗಲಿದೆ. ಇದು ನಿಮಗೆ ಹಾಗೂ ನಿಮ್ಮ ಕುಟುಂಬ ವರ್ಗದವರಿಗೆ ಸಂತಸದ ಸುದ್ದಿ ಆಗಿದೆ. ಇನ್ನು ಗೋಲ್ಡ್ ಬಿಝಿ಼ನೆಸ್ ಮಾಡುವವರಿಗೆ ಈ ಬಾರಿ ಅದೃಶ್ಟ ಖುಲಾಯಿಸಲಿದೆ ಎನ್ನಬಹುದು.

ಅದೇ ರೀತಿ ಈ ಶನಿಗ್ರಹದಿಂದ ರಾಜ ಯೋಗ ಪಡೆರಿರುವ ರಾಶಿ ಅಂದರೆ ಅದು ವೃಷಭ ರಾಶಿ. ಈ ರಾಶಿ ಅವರಿಗೆ ಹಣದ ಹೊಳೆಯೇ ಹರಿದು ಬರಲಿದೆ ಎನ್ನಬಹುದು. ಯಾರು ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾರೋ ಅವರಿಗೆ ಈ ಎರಡು ವರ್ಷಗಳ ಕಾಲ ಅತ್ಯುತ್ತಮವಾಗಿದೆ. ಶನಿಯು ಈ ವೃಫಭ ರಾಶಿ ಹತ್ತನೆ ಮನೆಯಲ್ಲಿ ಸ್ಥಾನವನ್ನ ಅಲಂಕರಿಸಿದ್ದಾನೆ.

ಇದರಿಂದಾಗಿ ಈ ರಾಶಿಯ ಜನರಿಗೆ ಯಾವುದೇ ಕೆಲಸ ಕಾರ್ಯ ಮಾಡಿದರು ಕೂಡ ಯಶಸ್ಸು ಎಂಬುದು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ನಿರುದ್ಯೋಗಿಗಳಿಗೆ ಇಚ್ಚೆಯ ಉದ್ಯೋಗ ಸಿಗಲಿದೆ. ನೂತನ ವ್ಯಾಪರಸ್ಥರಿಗೆ ಉತ್ತಮ ಆರಂಭ ಆಗುವುದು. ಅವಿವಾಹಿತರಿಗೆ ಈ ಬಾರಿ ಕಂಕಣ ಭಾಗ್ಯ ಕೂಡಿ ಬರಲಿದೆ. ಜೊತೆಗೆ ಪ್ರೀತಿಸಿ ಮದುವೆ ಆಗುತ್ತಿರುವ ವರನಿಗೆ ಬಂಪರ್ ಆಫರ್ ಸಿಗುತ್ತದೆ ಎಂದು ಹೇಳಬಹುದಾಗಿರುತ್ತದೆ. ಒಟ್ಟಾರೆಯಾಗಿ ಶನಿ ಗ್ರಹ ಕೃಪೆಯಿಂದಾಗಿ ಈ ಮೇಷ ಮತ್ತು ವೃಷಭ ರಾಶಿಯವರಿಗೆ ಎರಡು ವರ್ಷಗಳ ಕಾಲ ರಾಜಯೋಗ ಇರಲಿದೆ. ಇದನ್ನ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜೋತಿಷ್ಯ ಪಂಡಿತರು ತಿಳಿಸಿದ್ದಾರೆ.