ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಒಮ್ಮೆಲೇ ಅರ್ಧಕ್ಕಿಂತ ಕಡಿಮೆ ಮಾಡಲು ಏನು ಮಾಡ್ಬೇಕು ಗೊತ್ತೇ?

67

5 ವರ್ಷಕ್ಕೊಮ್ಮೆ ಬರುವ ಎಲ್ಲಾ ಸರ್ಕಾರಗಳು ಸಹ ಕಡಿಮೆ ಬೆಲೆಯಲ್ಲಿ ಸಾರ್ವಜನಿಕರಿಗೆ ವಿದ್ಯುತ್ ನೀಡುವುದಾಗಿ ಭರವಸೆ ನೀಡುತ್ತಾರೆ. ಆದರೆ ಜನರು ಮಾತ್ರ, ತಮ್ಮ ಮನೆಯ ಎಲೆಕ್ಟ್ರಿಸಿಟಿ ಬಿಲ್ ಜಾಸ್ತಿ ಬಂದಿದೆ ಎಂದು ಯೋಚನೆ ಮಾಡುತ್ತಾರೆ. ಇಂದು ನಾವು ನಿಮಗೆ ಈ ರೀತಿ ಹೆಚ್ಚಾಗಿ ಬರುವ ಎಲೆಕ್ಟ್ರಿಸಿಟಿ ಬಿಲ್ ಅನ್ನು ಕಡಿಮೆ ಮಾಡುವ ದಾರಿ ಹೇಳಿಕೊಡುತ್ತೇವೆ. ಯಾವುದೇ ಸೌಲಭ್ಯವನ್ನು ಕಡಿಮೆ ಮಾಡದೆ, ಸುಲಭವಾಗಿ ಎಲೆಕ್ಟ್ರಿಸಿಟಿ ಬಿಲ್ ಕಡಿಮೆ ಬರುವ ಹಾಗೆ ಮಾಡಲು ಈ ಕ್ರಮಗಳನ್ನು ಅನುಸರಿಸಿ..

ಅಗತ್ಯವಿಲ್ಲದೆ ಇದ್ದಾಗ ಫ್ಯಾನ್ ಆಫ್ ಮಾಡಿ :- ಈ ಕೆಲಸವನ್ನು ಎಲ್ಲರೂ ಮಾಡುವುದಿಲ್ಲ, ಮನೆಗಳಲ್ಲಿ ಫ್ಯಾನ್ ಚೇಂಜ್ ಮಾಡುವುದು ಕಡಿಮೆ..ಹಳೆಯ ಫ್ಯಾನ್ ಗಳು 90 ವ್ಯಾಟ್ ವಿದ್ಯುತ್ ಪಡೆದುಕೊಳ್ಳುತ್ತದೆ, ಹಾಗಾಗಿ ವಿದ್ಯುತ್ ಉಳಿಸಲು ಫ್ಯಾನ್ ಆಫ್ ಮಾಡಿ.
ಬೇಸಿಗೆಯಲ್ಲಿ ಎಸಿ ಖರೀದಿ ಮಾಡುವ ಪ್ಲಾನ್ ಇದ್ದರೆ, ಈ ಎರಡು ಸಲಹೆಗಳನ್ನು ನೆನಪಿನಲ್ಲಿ ಇಡಿ, ಮೊದಲನೆಯದು, 5ಸ್ಟಾರ್ ರೇಟಿಂಗ್ ಇರುವ ವಿದ್ಯುತ್ ಉಳಿಸುವ ಎಸಿಯನ್ನು ಖರೀದಿ ಮಾಡಿ..ವಿಂಡೋ ಬದಲಿಗೆ split inverter ಇರುವ ಎಸಿ ಖರೀದಿ ಮಾಡಿ. ಇದರಿಂದ ವಿದ್ಯುತ್ ಉಳಿಯುತ್ತದೆ. ಎಸಿ ಆನ್ ಮಾಡಿದಾಗ, 24°C ಟೆಂಪರೇಚರ್ ಇಡಿ, ಆಗ ವಿದ್ಯುತ್ ಬಿಲ್ ನಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತದೆ.

ಪವರ್ ಸ್ಟ್ರಿಪ್ ಬಳಸಿ :- ಒಂದೊಂದು ಸಾಧನವನ್ನು ಬೇರೆ ಬೇರೆ ಸ್ವಿಚ್ ಗೆ ಹಾಕಿದರೆ, ಹೆಚ್ಚಿನ ವಿದ್ಯುತ್ ವ್ಯತ್ಯಯ ಆಗುತ್ತದೆ, ಹಾಗಾಗಿ ವಿದ್ಯುತ್ ಬಿಲ್ ಕಡಿಮೆ ಆಗಬೇಕು ಎಂದು ಬಯಸಿದರೆ, ಪವರ್ ಸ್ಟ್ರಿಪ್ ಅಥವಾ ಎಕ್ಸ್ಟನ್ಷನ್ ಬೋರ್ಡ್ ಬಳಸಿ. ಇದು ವಿದ್ಯುತ್ ಉಳಿಸುತ್ತದೆ.
ಸ್ಟ್ಯಾಂಡ್ ಬೈ ಮೋಡ್ ನಲ್ಲಿ ಇಡಬೇಡಿ :- ವಿದ್ಯುತ್ ಉಳಿಸಲು ಸಾಧನಗಳನ್ನು ಆಫ್ ಮಾಡುವುದು ಮಾತ್ರವಲ್ಲ ಅದು ಸ್ಟ್ಯಾಂಡ್ ಬೈ ಮೋಡ್ ನಲ್ಲಿಲ್ಲ ಎನ್ನುವುದನ್ನು ಗಮನಿಸಬೇಕು. ಮುಖ್ಯ ಸ್ವಿಚ್ ಆಫ್ ಮಾಡಬೇಕು. ಸ್ಟ್ಯಾಂಡ್ ಬೈ ಪವರ್ ಇಂದ ವಿದ್ಯುತ್ ಬಿಲ್ ನಲ್ಲಿ ಹಣ ಉಳಿಸಬಹುದು.
ಫ್ರಿಜ್ ಇಡುವ ಸ್ಥಳ :- ಮನೆಯಲ್ಲಿ ಫ್ರಿಜ್ ಇಡುವ ಸ್ಥಳ ಸಹ ವಿದ್ಯುತ್ ಉಳಿಸಲು ಸಹಾಯ ಆಗುತ್ತದೆ. ಫ್ರಿಜ್ ಗಾಳಿಯ ಪ್ರಸರಣ ಸ್ಥಳ ಪಡೆಯುತ್ತದೆ. ಹಾಗಾಗಿ ಗೋಡೆಯಿಂದ 2ಇಂಚ್ ದೂರದಲ್ಲಿರುತ್ತದೆ, ಈ ರೀತಿ ಇದ್ದಾಗ, ವಿದ್ಯುತ್ ಉಳಿತಾಯ ಮಾಡಬಹುದು.