ಇದಪ್ಪ ಅದೃಷ್ಟ ಅಂದ್ರೆ, ಕಿರುತೆರೆಯಿಂದ ಸಿನಿಮಾ ದಲ್ಲಿ ಅವಕಾಶ ಪಡೆದ ಲೀಲಾ ಪಾತ್ರದಾರಿ. ನಟ ಯಾರು ಗೊತ್ತೇ?? ಸ್ಟಾರ್ ಕಲಾವಿದನ ಜೊತೆ ನಟಿಸುವ ಅವಕಾಶ

33

ಇತ್ತೀಚೆಗೆ ಜೀ ವಾಹಿನಿಯಲ್ಲಿ ಆರಂಭವಾಗಿ ಬಹಳ ಫೇಮಸ್ ಆಗುತ್ತಿರುವ ಧಾರವಾಹಿ ಹಿಟ್ಲರ್ ಕಲ್ಯಾಣ. ಶುರುವಾಗಿ ಕೆಲ ದಿನಗಳೇ ಆಗಿದ್ದರು ವಿಭಿನ್ನ ಕಥೆಯಿಂದ ಜನರನ್ನು ಸೆಳೆಯುತ್ತಿದೆ. ನಾಯಕಿ ಲೀಲಾಳ ಯಡವಟ್ಟು ಎಜೆ ಗತ್ತು ಎಲ್ಲರಿಗೂ ಬಹಳ ಇಷ್ಟವಾಗಿದೆ. ಮಿಸ್ಟರ್ ಪರ್ಫೆಕ್ಟ್ ಅಭಿರಾಮ್ ಜೈಶಂಕರ್ ಅವರ ಗತ್ತು ಗಮ್ಮತ್ತು ಕಿರುತೆರೆ ಲೋಕಕ್ಕೆ ಹೊಸ ಟ್ರೆಂಡ್ ಸೆಟ್ ಮಾಡಿದ ಈಗ ಧಾರಾವಾಹಿಯಲ್ಲಿ ಎಜೆ ಲೀಲಾ ಮದುವೆ ಆಗಿದ್ದು, ಇಬ್ಬರ ನಡುವೆ ಎಷ್ಟೇ ಜಗಳ ನಡೆದರು ಸಹ, ಇಬ್ಬರು ಒಂದಾಗುವುದನ್ನು ನೋಡಲು ವೀಕ್ಷಕರಿಗು ಬಹಳ ಇಷ್ಟವಾಗುತ್ತದೆ. ಎಡವಟ್ಟು ಲೀಲಾ ಪಾತ್ರ ಜನರಿಗೆ ಬಹಳ ಇಷ್ಟವಾಗಿದೆ ಎಂದರೆ ತಪ್ಪಾಗುವುದಿಲ್ಲ..

ಲೀಲಾ ಪಾತ್ರದ ಮೂಲಕ ಮುದ್ದಾಗಿ ನಟಿಸಿ ಕೆಲವೊಮ್ಮೆ ಖಡಕ್ ಆಗಿ ಮಾತನಾಡುವ ಎಲ್ಲರಿಗೂ ಬಹಳ ಇಷ್ಟವಾಗಿದ್ದಾರೆ ಈ ಹುಡುಗಿ. ಈ ಪಾತ್ರ ನಿರ್ವಹಿಸುತ್ತಿರುವ ಕಲಾವಿದೆಯ ನಿಜವಾದ ಹೆಸರು ಮಲೈಕಾ ವಸುಪಲ್. ಇವರು ಮೂಲತಃ ದಾವಣಗೆರೆಯವರು. ಮಲೈಕಾ ಅವರಿಗೆ ಈಗ 25 ವರ್ಷ ವಯಸ್ಸು. ಇವರು ಓದಿದ್ದು ಬೆಂಗಳೂರಿನಲ್ಲಿ, ಮಲೈಕಾ ಅವರು ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದು, ನಂತರ ಥಿಯೇಟರ್ ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಮಲೈಕಾ ಅವರದ್ದು ಕೂಡು ಕುಟುಂಬ. ಮಲೈಕಾ ಆಕ್ಟಿಂಗ್ ಮಾಡುವುದಕ್ಕೆ ಅವರ ಕುಟುಂಬದ ಎಲ್ಲರೂ ಪ್ರೋತ್ಸಾಹ ನೀಡುತ್ತಾರೆ. ದಾವಣಗೆರೆಯಿಂದ ಬೆಂಗಳೂರಿಗೆ ಕೆಲವು ಆಡಿಷನ್ ಗಾಗಿ ಬರುತ್ತಿದ್ದ ಮಲೈಕಾ, ಸೆಲೆಕ್ಟ್ ಆಗಿದ್ದು ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಾಯಕಿಯ ಪಾತ್ರಕ್ಕೆ. ಲೀಲಾ ಪಾತ್ರದ ಮೂಲಕ ಧಾರಾವಾಹಿ ಆರಂಭವಾಗಿ ಕೆಲವೇ ದಿನಕ್ಕೆ ಜನರ ಫೇವರೆಟ್ ಆಗಿದ್ದಾರೆ ಮಲೈಕಾ.

ಎಡವಟ್ಟು ಲೀಲಾ ಎಂದೇ ಕಿರುತೆರೆಯಲ್ಲಿ ಖ್ಯಾತಿ ಪಡೆದಿರುವ ಮಲೈಕಾ ಇದೀಗ ಬೆಳ್ಳಿತೆರೆಯಲ್ಲು ಮಿಂಚಲು ಸಜ್ಜಾಗಿದ್ದಾರೆ. ಈಗಾಗಲೇ ಜಿತೆ ಜೊತೆಯಲಿ ಧಾರವಾಹಿ ನಟಿ ಮೇಘಾ ಶೆಟ್ಟಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ, ಇದೀಗ ಮಲೈಕಾ ಸಹ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅದು ಉಪಾಧ್ಯಕ್ಷ ಸಿನಿಮಾ ಮೂಲಕ, ಕಾಮಿಡಿ ಸ್ಟಾರ್ ಚಿಕ್ಕಣ್ಣ ಅವರು ಮೊದಲ ಬಾರಿಗೆ ನಾಯಕನಾಗಿ ಉಪಾಧ್ಯಕ್ಷ ಸಿನಿಮಾದಲ್ಲಿ ನಟಿಸುತ್ತಿದ್ದು, ಅವರಿಗೆ ನಾಯಕಿಯಾಗಿ ಮಲೈಕಾ ನಟಿಸುತ್ತಿದಾರೆ. ಉಮಾಪರಿ ಶ್ರೀನಿವಾಸ್ ಗೌಡ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ದೊಡ್ಡ ಪ್ರೊಡಕ್ಷನ್ ಕಂಪೆನಿಯಲ್ಲಿ ನಟಿಸುತ್ತಿದ್ದಾರೆ ಮಲೈಕಾ. ಸಿನಿಮಾವನ್ನು ಅನಿಲ್ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದು, ಶೇಖರ್ ಚಂದ್ರ ಅವರ ಛಾಯಾಗ್ರಹಣ ಇರಲಿದೆ, ಹಾಗೆಯೇ, ಅರ್ಜುನ್ ಜನ್ಯ ಅವರ ಸಂಗೀತ ಇರಲಿದೆ. ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿರುವ ಮಲೈಕಾ ಅವರಿಗೆ ನಾವು ಸಹ ಆಲ್ ದಿ ಬೆಸ್ಟ್ ಹೇಳೋಣ.