ಅವಳಿ ಮಕ್ಕಳ ತಾಯಿ ಅಮೂಲ್ಯ ಈಗ ಹೇಗಿದ್ದಾರೆ ಗೊತ್ತೇ?? ಫೋಟೋಶೂಟ್ ಮಾಡಿಸಿ ಗ್ಲಾಮರ್ ಲೋಕ ಕೊಟ್ಟಿದ್ದು ಹೇಗೆ ಗೊತ್ತೇ??
ಚಂದನವನದ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ. ಪರ್ವ ಸೈನಿಕ ಮೂಲಕ ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಅಮೂಲ್ಯ ಬಾಲನಟಿಯಾಗಿಯೇ ಹಲವಾರು ಸಿನಿಮಾಗಳಲ್ಲಿ ಕನ್ನಡದ ಮೇರು ಕಲಾವಿದರೊಡನೆ ನಟಿಸಿದ್ದರು. ಆನಂತರ 2007 ರಲ್ಲಿ 14ನೇ ವಯಸ್ಸಿನಲ್ಲಿ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಈ ಮೂಲಕ ಅತಿ ಚಿಕ್ಕ ವಯಸ್ಸಿಗೆ ಹೀರೋಯಿನ್ ಆದ ನಟಿಯರ ಸಾಲಿಗೆ ಸೇರಿಕೊಂಡರು ಅಮೂಲ್ಯ. ಕಿರಿಯ ವಯಸ್ಸಿಗೆ ಹೀರೋಯಿನ್ ಆದ ಈ ನಟಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಮುಗ್ದತೆ ಮತ್ತು ಬಬ್ಲಿ ನೇಚರ್ ಇರುವ ಪಾತ್ರಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಅಭಿನಯದಲ್ಲಿ ಸಾಕಷ್ಟು ಸಕ್ಸಸ್ ಕಂಡ ನಟಿ ಅಮೂಲ್ಯ, ರಾಜಕರಾಣದ ಹಿನ್ನಲೆ ಇರುವ ಜಗದೀಶ್ ಅವರನ್ನು ಮದುವೆಯಾಗಿ ಸುಖಜೀವನ ನಡೆಸುತ್ತಿದ್ದಾರೆ.
ಈ ವರ್ಷ ಶಿವರಾತ್ರಿ ಹಬ್ಬದಂದು ಅಮೂಲ್ಯ ಅವರು ಮುದಾದ ಗಂಡು ಮಕ್ಕಳಿಗೆ ಜನ್ಮ ನೀಡಿದರು. ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ ಈಗ ಮಕ್ಕಳ ಪಾಲನೆ ಪೋಷಣೆಯಲ್ಲಿ ತೊಡಗಿದ್ದಾರೆ. ಮಕ್ಕಳಾದ ಮೇಲೆ ಅಮೂಲ್ಯ ಅವರು ಹೇಗಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಸಾಮಾನ್ಯವಾಗಿ ನಟಿಯರು ಮಗುವಾದ ಬಳಿಕ ದೊಡ್ಡ ಹರೇಜ್ ಪಡೆದುಕೊಳ್ಳುತ್ತಾರೆ. ಆದರೆ ಅಮೂಲ್ಯ ಅವರು ಹಾಗೆ ಮಾಡಿಲ್ಲ, ಮಗುವಾದ ಬಳಿಕ ಇದೀಗ ತಾವು ಹೇಗಿದ್ದಾರೆ ಎನ್ನುವುದನ್ನು ರಿವೀಲ್ ಮಾಡಿದ್ದು, ಅಭಿಮಾನಿಗಳನ್ನು ಇವರನ್ನು ನೋಡಿ ಶಾಕ್ ಆಗಿರುವುದಂತೂ ಖಂಡಿತ. ಮಗುವಾದ ಬಳಿಕ ಸಹ ಅಮೂಲ್ಯ ಅವರು ಬಹಳ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಹಸಿರು ಬಣ್ಣದ ಡ್ರೆಸ್ ನಲ್ಲಿ ಬಹಳ ಮುದ್ದಾಗಿ, ಸುಂದರವಾಗಿ ಕಾಣಿಸಿದ್ದಾರೆ, ಅಮೂಲ್ಯ ಅವರ ಈ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಹೀಗೆ ಮಾಡರ್ನ್ ಆಗಿ ಅಮೂಲ್ಯ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಾರಾ ಎನ್ನುವ ಕುತೂಹಲವನ್ನು ಅಮೂಲ್ಯ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಅಮೂಲ್ಯ ಅವರು ಇತ್ತೀಚೆಗೆ ಮಕ್ಕಳ ಜೊತೆಗೆ ಫೋಟೋ ಶೇರ್ ಮಾಡಿದ್ದರು, ಇದೀಗ ಅವರನ್ನು ನೋಡಿ ಅಭಿಮಾನಿಗಳು ಮತ್ತೆ ಚಿತ್ರರಂಗಕ್ಕೆ ಬನ್ನಿ ಎನ್ನುತ್ತಿದ್ದಾರೆ. ಅಮೂಲ್ಯ ಅವರು ಈಗಲೇ ಚಿತ್ರರಂಗಕ್ಕೆ ಬರಿತ್ತಾರೋ ಇಲ್ಲವೋ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ, ಮಕ್ಕಳ ಪಾಲನೆ ಪೋಷಣೆಯಲ್ಲಿ ಹೆಚ್ಚಿನ ಸಮಯ ಕಳೆಯಬಹುದು ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಅಮೂಲ್ಯ ಅವರ ಈ ಹೊಸ ಲುಕ್ ಎಲ್ಲರಿಗೂ ಇಷ್ಟ ಆಗಿರುವುದಂತೂ ಖಂಡಿತ.