ಜಗಳ ಆಡಿದಕ್ಕಾಗಿ ವಿಚ್ಚೇದನ ಪಡೆಯುವುದು ನೋಡಿರುತ್ತೀರಿ, ಆದರೆ ಗಂಡ ಪ್ರೀತಿ ಮಾಡುತ್ತಾನೆ ಎಂದು ವಿಚ್ಚೇದನ ಕೇಳಿದ ಮಹಿಳೆ. ಯಾಕೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ದಾಂಪತ್ಯಜೀವನದಲ್ಲಿ ಹೆಂಡತಿ ಗಂಡನಿಂದ ಪ್ರೀತಿಯ ಅಪೇಕ್ಷೆ ಮಾಡಿರುತ್ತಾರೆ. ಸಂಗಾತಿಗಳು ಪರಸ್ಪರ ಸಮಯ ಹಾಗೂ ಪ್ರೀತಿಯನ್ನು ನೀಡದಿದ್ದಾಗ ಅವರಿಬ್ಬರ ನಡುವೆ ವೈಮನಸ್ಸು ಉಂಟಾಗಿ ವಿವಾಹ ವಿಚ್ಛೇದನ ಪ್ರಕರಣಗಳು ಸಂಭವಿಸುವುದನ್ನು ನೀವು ಗಮನಿಸಿರುತ್ತೀರಿ. ಆದರೆ ಯುಎಇ ನಲ್ಲಿ ನಡೆದಿರುವ ಈ ವಿವಾಹ ವಿಚ್ಛೇದನ ಪ್ರಕರಣವನ್ನು ಗಮನಿಸಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೇ ಈ ಹೆಂಡತಿ ಗಂಡನಿಗೆ ತಲಾಕ್ ನೀಡಿರುವುದು ಅತ್ಯಂತ ಹೆಚ್ಚಾಗಿ ಪ್ರೀತಿಸುತ್ತಿರುವ ಕಾರಣದಿಂದಾಗಿ ಎಂಬುದಾಗಿ ತಿಳಿದುಬಂದಿದೆ.
ಹೌದು ಸ್ನೇಹಿತರೇ ಆಕೆ ನೀಡಿರುವ ದೂರಿನ ಅನ್ವಯ ಆತ ನನ್ನೊಂದಿಗೆ ಯಾವತ್ತೂ ಕೂಡ ಜಗಳವಾಡುವುದಿಲ್ಲ ಹಾಗೂ ನನಗೆ ಯಾವತ್ತೂ ಕೂಡ ಬಂದಿಲ್ಲ ನನ್ನನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ ಹಾಗೂ ನನ್ನನ್ನು ಬೇಸರದಿಂದ ಇರಲು ಬಿಡುವುದಿಲ್ಲ ನನಗೆ ಕ್ಲೀನಿಂಗ್ ನಲ್ಲಿ ಹಾಗೂ ಅಡುಗೆಯಲ್ಲಿ ಕೂಡ ಸಹಾಯಮಾಡುತ್ತಾನೆ ಎಂಬುದಾಗಿ ಹೇಳಿದ್ದಾಳೆ. ಇವರಿಬ್ಬರು ಮದುವೆಯಾಗಿ ಒಂದು ವರ್ಷವಾಗಿದ್ದು ಇದುವರೆಗೂ ಸಂಸಾರದಲ್ಲಿ ಒಂದೇ ಒಂದು ಜಗಳ ನಡೆದಿಲ್ಲ. ಮಹಿಳೆ ಮುಂದುವರೆದು ನನ್ನ ಎಲ್ಲಾ ಆದೇಶಗಳನ್ನು ಕೂಡ ಆತ ಪಾಲಿಸುತ್ತಾನೆ ಒಂದೇ ಒಂದು ಬಾರಿ ನನ್ನೊಂದಿಗೆ ಜಗಳ ನಡೆದಿಲ್ಲ ಎಷ್ಟೊಂದು ಸಲ್ಲಿಸಲಾಗಿರುವ ಜೀವನ ನನಗೆ ಬೇಕಾಗಿಲ್ಲ ನನ್ನ ರೋಮ್ಯಾಂಟಿಕ್ ಪತಿ ಪ್ರತಿಯೊಂದು ವಿಚಾರದಲ್ಲಿ ನಾನು ಹೇಳಿದಂತೆ ನಡೆದುಕೊಳ್ಳುತ್ತಾನೆ. ನನ್ನ ವಿರುದ್ಧ ಯಾವತ್ತೂ ಕೂಡ ಅಪಸ್ವರ ಎತ್ತಿಲ್ಲ ಎಂಬುದಾಗಿ ಹೇಳಿದ್ದಾಳೆ.

ಇನ್ನು ಈ ಕುರಿತಂತೆ ಆಕೆಯ ಪತಿ ನಾನೊಬ್ಬ ಪರ್ಸ್ಪೆಕ್ಟ್ ಪತಿ ಆಗುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿದ್ದೇನೆ ಹೀಗಾಗಿ ಹೀಗೆ ಮಾಡಿದ್ದೇನೆ. ಹೆಂಡತಿ ಸಲ್ಲಿಸಿರುವ ದೂರನ್ನು ಕೋರ್ಟ್ ವಾಪಸ್ ತೆಗೆದುಕೊಳ್ಳುವಂತೆ ಕೂಡ ಆತ ಆಗ್ರಹಿಸಿದ್ದಾನೆ. ಈಗಾಗಲೇ ಕೋರ್ಟ್ ಗಂಡ-ಹೆಂಡತಿ ಇಬ್ಬರೂ ಕೂಡ ವಿಚಾರವನ್ನು ಪರಸ್ಪರ ಪರಿಹರಿಸಿಕೊಳ್ಳಲು ಆದೇಶ ನೀಡಿದೆ. ಈ ವಿಚಾರ ಮುಂದಿನ ದಿನಗಳಲ್ಲಿ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಪ್ರಕರಣದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.