ಜೀವನದಲ್ಲಿ ಮೊದಲ ಬಾರಿಗೆ ಅರ್ಧಶತಕ ಗಳಿಸಿ, ಪಂದ್ಯಶ್ರೇಷ್ಠ ಪಡೆದ ಬಳಿಕ ದಿನೇಶ್ ಕಾರ್ತಿಕ್ ಖಡಕ್ ಆಗಿ ಹೇಳಿದ್ದೇನು ಗೊತ್ತೇ?? ಎಲ್ಲರೂ ಒಮ್ಮೆಲೇ ಶಾಕ್
ನಮಸ್ಕಾರ ಸ್ನೇಹಿತರೇ ಸೌರಾಷ್ಟ್ರದ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿರುವ ಸೌತ್ ಆಫ್ರಿಕಾ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ಗೆದ್ದಿದ್ದು ಸರಣಿ 2 ಹಾಗೂ 2 ಸಮ ಬಲವನ್ನು ಕಂಡಿದೆ. ಮೊದಲೆರಡು ಪಂದ್ಯಗಳನ್ನು ಸೋತ ನಂತರ ಭಾರತೀಯ ಕ್ರಿಕೆಟ್ ತಂಡ ಪುಟಿದೆದ್ದಿದ್ದು ಸೌತ್ ಆಫ್ರಿಕಾ ತಂಡಕ್ಕೆ ಸರಿಯಾದ ಕಾಂಪಿಟೇಷನ್ ನೀಡುತ್ತಿದೆ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡಾ ಭಾರತೀಯ ಕ್ರಿಕೆಟ್ ತಂಡ 3 ಹಾಗೂ 4ನೇ ಪಂದ್ಯಗಳನ್ನು ಆಡಿರುವ ರೀತಿ ಭಾರತೀಯ ಕ್ರಿಕೆಟ್ ತಂಡ ಯಾವ ರೀತಿ ಕಾಂಪಿಟೇಷನ್ ನೀಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ.
ನಾಲ್ಕನೇ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರರು ಕೈಕೊಟ್ಟರು ಕೂಡ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಆಡಿರುವ ದಿನೇಶ್ ಕಾರ್ತಿಕ್ 55 ಹಾಗೂ ಹಾರ್ದಿಕ್ ಪಾಂಡ್ಯ 46 ರನ್ನುಗಳನ್ನು ಬಾರಿಸಿದ್ದಾರೆ. ಇವರಿಬ್ಬರ ಬ್ಯಾಟಿಂಗ್ ಫಲವಾಗಿ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ 170 ರನ್ನುಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ಆಫ್ರಿಕ ತಂಡಕ್ಕೆ ಭಾರತೀಯ ಬೌಲರ್ ಗಳಾಗಿರುವ ಆವೇಶ್ ಖಾನ್ 4 ವಿಕೆಟ್ ಹಾಗೂ ಚಹಾಲ್ ರವರ ಎರಡು ವಿಕೆಟ್ ಗಳ ಪರಿಣಾಮಕಾರಿ ಬೌಲಿಂಗ್ ದಾಳಿಗೆ ಕೇವಲ 87 ರನ್ ಗಳಿಗೆ ಆಲೌಟ್ ಆಯಿತು.

ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಹಿನ್ನೆಲೆಯಲ್ಲಿ ದಿನೇಶ್ ಕಾರ್ತಿಕ್ ರವರು ಈ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಡೆದುಕೊಂಡರು. ಪಂದ್ಯ ಮುಗಿದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಯನ್ನು ಪಡೆದುಕೊಂಡು ಮಾತನಾಡಿದ ದಿನೇಶ್ ಕಾರ್ತಿಕ್ ರವರು ಈ ಹಿಂದಿನ ಪಂದ್ಯಗಳಲ್ಲಿ ಅಂದುಕೊಂಡಹಾಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಿಲ್ಲ ಆದರೆ ಇಂದಿನ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದೇನೆ ಇದಕ್ಕೆ ನಮ್ಮ ಕೋಚ್ ಗೆ ಶ್ರೇಯ ಸಲ್ಲಬೇಕು ಎಂಬುದಾಗಿ ಹೇಳಿದ್ದಾರೆ. ಈ ಪಿಚ್ ನಲ್ಲಿ ಸೌತ್ ಆಫ್ರಿಕದ ಬೌಲರ್ಗಳ ಬೌಲಿಂಗ್ ಅನ್ನು ಎದುರಿಸುವುದು ಕಷ್ಟಕರವಾಗಿತ್ತು ಬೌಂಡರಿ ಬಾರಿಸುವುದಕ್ಕೆ ಬಲವಾಗಿ ಹೊಡೆಯ ಬೇಕಾಗಿತ್ತು ಎಂಬುದಾಗಿ ಕೂಡ ತಮ್ಮ ಬ್ಯಾಟಿಂಗ್ ಅನುಭವವನ್ನು ಹೇಳಿಕೊಂಡಿದ್ದಾರೆ.