ಕನ್ನಡತಿಯಲ್ಲಿ ಮಹಾ ಟ್ವಿಸ್ಟ್, ತನ್ನ ಹೀರೋ ನನ್ನ ತಾನೇ ಪಡೆಯಲು ಗಟ್ಟಿ ನಿರ್ಧಾರ ಮಾಡಿ ಪ್ಲಾನ್ ಮಾಡಿದ ವರು, ಮದುವೆ ಕಥೆ ಏನಾಗಲಿದೆ ಗೊತ್ತೇ?

659

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯ ಕನ್ನಡತಿ ಧಾರಾವಾಹಿ ಹಲವಾರು ತಿರುವು ಹಾಗೂ ರೋಚಕ ಸನ್ನಿವೇಶಗಳಿಂದ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ಕನ್ನಡತಿ ಧಾರಾವಾಹಿ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೆ ಕನ್ನಡತಿ ಧಾರಾವಾಹಿ ರೋಚಕತೆ ಎನ್ನುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹರ್ಷ ಹಾಗೂ ಭುವಿ ಮದುವೆಗೆ ಇನ್ನೇನು ದಿನಗಣನೆ ನಡೆಯುತ್ತಿದೆ ಆದರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವರುಧಿನಿ ಮೊದಲಿನಿಂದಲೂ ಕೂಡ ಹರ್ಷನನ್ನು ಮದುವೆಯಾಗಬೇಕು ಎನ್ನುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದವಳು. ಆದರೆ ಹರ್ಷ ಈ ಮೊದಲೇ ಇದನ್ನು ನಯವಾಗಿಯೇ ತಿರಸ್ಕರಿಸಿದ್ದಾನೆ.

ಹೇಗಾದರೂ ಮಾಡಿ ಈ ಮದುವೆಯನ್ನು ನಿಲ್ಲಿಸಿ ತನ್ನ ಹೀರೋನನ್ನು ಮದುವೆಯಾಗುವ ಆಸೆಯನ್ನು ಇಂದಿಗೂ ಕೂಡ ವರುಧಿನಿ ಹೊಂದಿದ್ದಾಳೆ. ಹರ್ಷನನ್ನು ಮದುವೆಯಾಗುವ ಆಸೆಯನ್ನು ಹೊಂದಿದ್ದರೂ ಕೂಡ ತನ್ನ ಜೀವದ ಗೆಳತಿ ಆಗಿರುವ ಭುವಿಗೆ ತೊಂದರೆ ಮಾಡುವ ಉದ್ದೇಶ ಆಕೆಗೆ ಇರಲಿಲ್ಲ ಎಂಗೇಜ್ಮೆಂಟ್ ನಲ್ಲಿ ಉಂಗುರ ಕಳೆದುಹೋದಾಗಲೂ ಕೂಡ ಹಾಗೂ ಭುವಿಯನ್ನು ಮುಗಿಸಲು ಸಾನಿಯಾ ಪ್ಲಾನ್ ಹಾಕಿದಾಗ ಕೂಡ ಆಕೆಯೊಂದಿಗೆ ಜಗಳವಾಡಿಕೊಂಡಿದ್ದಳು. ಇಷ್ಟೆಲ್ಲ ನಡೆದರೂ ಕೂಡ ಹರ್ಷನನ್ನು ಮದುವೆ ಆಗಲೇಬೇಕು ಎನ್ನುವ ಅಭಿಲಾಷೆಯನ್ನು ಹೊಂದಿರುವ ವರುದಿನಿ ಮದುವೆ ಮನೆಯಲ್ಲಿ ತನ್ನ ಕಡೆಯ ರೌಡಿಗಳನ್ನು ಕೂಡ ತರಿಸಿಕೊಂಡಿದ್ದಾಳೆ.

ಇನ್ನೊಂದು ಕಡೆ ಈ ಮದುವೆಯನ್ನು ನಿಲ್ಲಿಸಲು ಸಾನಿಯಾ ಜೊತೆಗೆ ಕೈ ಸೇರಿಸಿರುವ ವಿಚಾರ ನಿಮಗೆ ತಿಳಿದಿದೆ. ಒಂದು ಮದ್ದಿನ ಪುಡಿಯನ್ನು ಸಾನಿಯಾ ತರಿಸಿದ್ದು ಅದನ್ನು ಜ್ಯೂಸ್ ಗೆ ಹಾಕಿ ಹರ್ಷನಿಗೆ ಕೊಡುವಂತೆ ವರುದಿನಿ ಗೆ ಹೇಳಿದ್ದಾಳೆ. ಆದರೆ ಈಗ ನಡೆಯುತ್ತಿರುವ ಸಂಚಿಕೆಯ ಪ್ರಕಾರ ಮೊದಲಿಗೆ ಹರ್ಷ ಬೇಡ ಎಂಬುದಾಗಿ ನಯವಾಗಿಯೇ ತಿರಸ್ಕರಿಸಿದ್ದಾನೆ. ಅದನ್ನು ಕುಡಿಯುತ್ತಾನೆ ಎಂಬುದನ್ನು ನೋಡಬೇಕಾಗಿದೆ ಹಾಗೂ ಹರ್ಷನನ್ನು ಪಡೆಯಲು ವರುದಿನಿ ಇನ್ಯಾವ ಪ್ಲಾನ್ ಮಾಡುತ್ತಾಳೆ ಎಂಬುದನ್ನು ಕಾದು ನೋಡಬೇಕಾಗಿದೆ. ಇದರಿಂದ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.