ನಿಜಕ್ಕೂ ದಿನೇಶ್ ಕಾರ್ತಿಕ್ ರವರು ವಿಶ್ವಕಪ್ ನಲ್ಲಿ ಸ್ಥಾನ ಪಡೆಯಲು ಸಾಧ್ಯವೇ?? ಗೌತಮ್ ಗಂಭೀರ್ ಹೇಳಿದ್ದೇನು ಗೊತ್ತೇ??

13

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ ಐಪಿಎಲ್ ನಲ್ಲಿ ಅತ್ಯುತ್ತಮವಾದ ಪ್ರದರ್ಶನವನ್ನು ನೀಡುವ ಮೂಲಕ ದಿನೇಶ್ ಕಾರ್ತಿಕ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಿನಿಶರ್ ಜವಾಬ್ದಾರಿಯನ್ನು ಪರಿಪೂರ್ಣವಾಗಿ ಹಾಗೂ ಪರಿಪಕ್ವವಾಗಿ ನಿಭಾಯಿಸಿದ್ದರು. ಹೌದು ಗೆಳೆಯರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡುವ ಮೂಲಕ ತಂಡ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಲು ಪ್ರಮುಖ ಕಾರಣವಾಗಿದ್ದರು.

ಇದೇ ಹಿನ್ನೆಲೆಯಲ್ಲಿ ದಿನೇಶ್ ಕಾರ್ತಿಕ್ ರವರನ್ನು ಮೂರು ವರ್ಷದ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಐಪಿಎಲ್ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ರವರು ನನಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುವ ಮೂಲಕ ತಂಡವನ್ನು ವಿಶ್ವಕಪ್ನಲ್ಲಿ ಗೆಲ್ಲಿಸುವ ಆಸೆ ಇದೆ ಎಂಬುದಾಗಿ ಹೇಳಿಕೊಂಡಿದ್ದರು. ಇದಕ್ಕೆ ಪೂರಕ ಎನ್ನುವಂತೆ ಅವರು ಮೂರು ವರ್ಷಗಳ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಸೌತ್ ಆಫ್ರಿಕಾ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ಈಗ ಆಯ್ಕೆಯಾಗಿದ್ದಾರೆ. ಆದರೆ ಇತ್ತೀಚಿಗಷ್ಟೇ ಮಾಜಿ ಕ್ರಿಕೆಟಿಗ ಆಗಿರುವ ಗೌತಮ್ ಗಂಭೀರ್ ಅವರು ದಿನೇಶ್ ಕಾರ್ತಿಕ್ ರವರು ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವುದು ಅನುಮಾನ ಎಂಬುದಾಗಿ ಶಾ’ಕಿಂಗ್ ಹೇಳಿಕೆ ನೀಡಿದ್ದಾರೆ.

ಹೌದು ಗೆಳೆಯರೇ ನೀವು ಸರಿಯಾಗಿ ಗಮನಿಸಿದರೆ ಈ ಬಾರಿ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ರವರು ಅಗ್ರಪಂಕ್ತಿಯಲ್ಲಿ ಬ್ಯಾಟಿಂಗ್ ಮಾಡುತ್ತಿಲ್ಲ ಬದಲಾಗಿ ಟೈಲೆಂಡರ್ ಕ್ರಮಾಂಕದಲ್ಲಿ ಆಟವಾಡುತ್ತಿದ್ದಾರೆ ಹೀಗಾಗಿ ಅವರಿಗೆ ನ್ಯಾಷನಲ್ ತಂಡದಲ್ಲಿ ತಮ್ಮ ಆಟವನ್ನು ಸಾಬೀತುಪಡಿಸಲು ಸರಿಯಾದ ಅವಕಾಶಗಳು ದೊರೆಯುತ್ತಿಲ್ಲ. ಇನ್ನು ಅಲ್ಲಿಯವರೆಗೂ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ದಿನೇಶ್ ಕಾರ್ತಿಕ್ ರವರು ಕಾಯ್ದುಕೊಂಡರೆ ಮಾತ್ರ ದಿನೇಶ್ ಕಾರ್ತಿಕ್ ರವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಬಹುದು ಎಂಬುದಾಗಿ ಹೇಳಿದ್ದಾರೆ. ಎಲ್ಲಾ ಅನುಭವಿ ಆಟಗಾರರು ತಂಡಕ್ಕೆ ಬಂದಮೇಲೆ ಹಾಗೂ ಈಗ ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿರುವ ಹಲವಾರು ಯುವ ಆಟಗಾರರು ಕೂಡ ದಿನೇಶ್ ಕಾರ್ತಿಕ್ ರವರ ಸ್ಥಾನಕ್ಕೆ ನಿಕಟ ಸ್ಪರ್ಧಿಗಳು ಆಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದುನೋಡಬೇಕು.