ಸಂಜನಾ ರವರ ತಂಗಿ ನಿಕ್ಕಿ ಗಲ್ರಾನಿ ರವರನ್ನು ಮದುವೆಯಾದ ನಟಿ ಆದಿ ಪಡೆದ ವರದಕ್ಷಿಣೆ ಎಷ್ಟು ಗೊತ್ತೇ??
ಇತ್ತೀಚಿನ ದಿನಗಳಲ್ಲಿ ಪ್ರೇಮ ವಿವಾಹಗಳು ಹೆಚ್ಚಾಗಿ ನಡೆಯುತ್ತಿವೆ. ಹಣವಿದ್ದವರ ಮನೆಯಲ್ಲಿರಲಿ, ಇಲ್ಲದವರ ಮನೆಯಲ್ಲಿ ಎಲ್ಲರ ಮಮೆಯಲಪು ಹೆಚ್ಚಾಗಿ ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಮದುವೆಯಾಗುವ ಜೋಡಿಗಳು ಒಂದೇ ಕ್ಷೇತ್ರಕ್ಕೆ ಸೇರಿದವರಾಗಿರುವುದು ಹೆಚ್ಚಾಗಿದೆ. ಅದರ ಅರ್ಥ ಡಾಕ್ಟರ್ ಗಳು ಡಾಕ್ಟರ್ ಗಳನ್ನು ಮದುವೆಯಾಗುತ್ತಾರೆ , ಇಂಜಿನಿಯರ್ ಗಳು ಇಂಜಿನಿಯರ್ ಗಳನ್ನು ಮದುವೆಯಾಗುತ್ತಾರೆ ಹಾಗೆಯೇ ಕಲಾವಿದರು ಕಲಾವಿದರ ಜೊತೆಗೆ ಮದುವೆಯಾಗುತ್ತಾರೆ. ಇತ್ತೀಚೆಗಷ್ಟೇ ನಡೆದ ನಟ ಆದಿ ಪಿನಿಸೆಟ್ಟಿಯವರ ಮದುವೆ ಕೂಡ ಇದೇ ವರ್ಗಕ್ಕೆ ಸೇರುತ್ತದೆ. ಆದಿ ಪಿನಿಸೆಟ್ಟಿ ಅವರು ಕಳೆದ ತಿಂಗಳು, ಮೇ 18 ರಂದು ನಟಿ ನಿಕಿ ಗಲ್ರಾನಿ ಅವರರೊಡನೆ ವಿವಾಹವಾಗದರು..
ಇವರಿಬ್ಬರು ಮೊದಲಿಗೆ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದಾಗ ಮೊದಲು ಸ್ನೇಹ ಶುರುವಾಯಿತು. ಇದಾದ ನಂತರ ಮತ್ತೊಂದು ಸಿನಿಮಾದ ಚಿತ್ರೀಕರಣದ ವೇಳೆ ಇವರಿಬ್ಬರ ಸ್ನೇಹ ಪ್ರೀತಿಯಾಯಿತು, ಇಬ್ಬರು ಇಷ್ಟಪಡಲು ಶುರು ಮಾಡಿದ ನಂತರ, ಮನೆಯವರನ್ನು ಒಪ್ಪಿಸಿ ಮದುವೆಯಾದರು. ಈ ಹಿನ್ನೆಲೆಯಲ್ಲಿ ಆದಿ ಪಿನಿಸೆಟ್ಟಿ ಅವರು ವರದಕ್ಷಿಣೆ ತೆಗೆದುಕೊಂಡಿರಬಹುದು ಎನ್ನುವ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ಎಷ್ಟೇ ಪ್ರೀತಿಸಿ ಮದುವೆಯಾದರೂ ವರದಕ್ಷಿಣೆ ತೆಗೆದುಕೊಂಡಿರಬಹುದು ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ, ಆದರೆ ಮೂಲಗಳ ಪ್ರಕಾರ, ತಿಳಿದುಬಂದಿರುವ ವಿಷಯ ಏನೆಂದರೆ, ಆದಿ ಅವರು ವರದಕ್ಷಿಣೆ ಎಂಬ ಪದವನ್ನು ಆದಿ ಇಷ್ಟಪಡುವುದಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ.

ಆದಿ ಅವರ ಮದುವೆಗೆ ವರದಕ್ಷಿಣೆ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ. ಆದರೆ, ನಿಕಿ ಗಲ್ರಾನಿ ಕುಟುಂಬದವರೇ ವರದಕ್ಷಿಣೆ ಪ್ರಸ್ತಾಪವನ್ನು ಮಾಡಿದ್ದು, ಅದನ್ನು ಕೂಡ ಆದಿ ಅವರು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಕೆಲವರು ಆದಿ ಅವರು ತೆಗೆದುಕೊಂಡಿರುವ ನಿರ್ಧಾರಕ್ಕೆ ಬೆಂಬಲ ನೀಡಿದರೆ, ಇನ್ನು ಕೆಲವರು ಭವಿಷ್ಯದಲ್ಲಿ ಹೇಗಿದ್ದರೂ ಬರುತ್ತದೆ ಎನ್ನುತ್ತಿದ್ದಾರೆ. ಖ್ಯಾತ ನಿರ್ದೇಶಕ ರವಿರಾಜ ಪಿನಿಸೆಟ್ಟಿ ಅವರ ಮಗನಾಗಿರುವ ಆದಿ ಅವರು ಹೀರೋ, ವಿಲನ್ ಆಗಿ ಈ ಎಲ್ಲಾ ಪಾತ್ರಗಳಲ್ಲೂ ನಟಿಸಿ, ಸೈ ಎನ್ನಿಸಿಕೊಂಡಿದ್ದಾರೆ.. ಇತ್ತೀಚಿನ ವರ್ಷಗಳಲ್ಲಿ ಅಲ್ಲು ಅರ್ಜುನ್ ಅಭಿನಯದ ಸರೈನೋಡು ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ಆದಿ ಅವರು ನಂತರ ಹೀರೋ ಆಗಿ ನಟಿಸಿದ್ದು, ಈಗ ಮತ್ತೆ ದಿ ವಾರಿಯರ್ ಸಿನಿಮಾದಲ್ಲಿ ಮತ್ತೆ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.