ಕೀರ್ತಿ ಸುರೇಶ್ ಹಾಗೂ ಪೂಜಾ ಹೆಗ್ಡೆ ಇಬ್ಬರ ಕಡೆಯಿಂದ ಬಂದು ಮಹತ್ವದ ಸುದ್ದಿ, ಕುಣಿದು ಕುಪ್ಪಳಿಸಿದ ಫ್ಯಾನ್ಸ್. ಕಣ್ಣಿಗಂತು ಹಬ್ಬ.

21

ದಕ್ಷಿಣ ಭಾರತ ಚಿತ್ರರಂಗದ ಈಗಿನ ಜೆನೆರೇಷನ್ ನಟಿಯರಲ್ಲಿ ಮಹಾನಟಿ ಎಂದೇ ಹೆಸರು ಮಾಡಿರುವವರು ನಟಿ ಕೀರ್ತಿ ಸುರೇಶ್. ರಾಷ್ಟ್ರಪ್ರಶಸ್ತಿ ವಿಜೇತೆ ಆಗಿರುವ ಕೀರ್ತಿ ಸುರೇಶ್ ಅವರು, ಇತ್ತೀಚೆಗೆ ಸಾಲು ಸಾಲು ಸೋಲು ಕಂಡಿದ್ದರು. ಇದರಿಂದ ಅವರ ಕೆರಿಯರ್ ಇಳಿಮುಖ ಕಂಡಿತ್ತು. ಮೂಲತಃ ಕೇರಳದವರಾದ ಕೀರ್ತಿ ಸುರೇಶ್, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ತಮಿಳು ಸಿನಿಮಾ ಮೂಲಕ, ಬಳಿಕ ಕೀರ್ತಿ ಅವರು ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. ಇವರು ತೆಲುಗಿಗೆ ಎಂಟ್ರಿ ಕೊಟ್ಟಿದ್ದು, ರಾಮ್ ಪೋತಿನೇನಿ ಅವರು ನಾಯಕನಾಗಿದ್ದ ನೇನು ಶೈಲಜಾ ಸಿನಿಮಾ ಮೂಲಕ. ಮೊದಲ ಸಿನಿಮಾ ಕೀರ್ತಿ ಅವರಿಗೆ ದೊಡ್ಡ ಹಿಟ್ ತಂದುಕೊಟ್ಟಿದೆ.

ನಟಿ ಕೀರ್ತಿ ಸುರೇಶ್ ಅವರಿಗೆ ಬಿಗ್ ಬ್ರೇಕ್ ತಂದು ಕೊಟ್ಟ ಸಿನಿಮಾ ಮಹಾನಟಿ. ಆ ಸಿನಿಮಾ ಇಂದ ಕೀರ್ತಿ ಅವರಿಗೆ ಬೇಡಿಕೆ ಹೆಚ್ಚಾಯಿತು, ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಳ್ಳುವ ಅವಕಾಶಗಳು ಹೆಚ್ಚಾಯಿತು. ಆದರೆ ಮಹಾನಟಿ ಸಾವಿತ್ರಿ ಅವರ ಪಾತ್ರದಲ್ಲಿ ಕೀರ್ತಿ ಅವರನ್ನು ನೋಡಿದ್ದ ಜನರು, ಸಾಮಾನ್ಯವಾದ ಪಾತ್ರಗಳಲ್ಲಿ ಕೀರ್ತಿ ಅವರನ್ನು ಒಪ್ಪಿಕೊಳ್ಳಲಿಲ್ಲ ,ಕೀರ್ತಿ ಸುರೇಶ್ ಅಭಿನಯದ ಸಾಲು ಸಾಲು ಸಿನಿಮಾಗಳು ಸೋಲು ಕಂಡವು. ಆದರೆ ಈಗ ಮತ್ತೆ ಗೆಲುವಿನ ಹಾದಿಗೆ ಬಂದಿದ್ದಾರೆ ಕೀರ್ತಿ. ಅದು ಮಹೇಶ್ ಬಾಬು ಅವರೊಡನೆ ಕೀರ್ತಿ ಸುರೇಶ್ ನಟಿಸಿದ, ಸರ್ಕಾರು ವಾರಿ ಪಾಟ ಸಿನಿಮಾ ಮೂಲಕ, ಈ ಸಿನಿಮಾ ಸೂಪರ್ ಹಿಟ್ ಆಗಿ, ಕೀರ್ತಿ ಸುರೇಶ್ ಅವರಿಗೆ ಸ್ಟಾರ್ ಸ್ಟೇಟಸ್ ತಂದುಕೊಟ್ಟಿದೆ. ಜೊತೆಗೆ ಹೆಚ್ಚು ಆಫರ್ ಗಳು ಕೂಡ ಬರಲು ಶುರುವಾಗಿದೆ..

ಪ್ರಸ್ತುತ ಕೀರ್ತಿ ಸುರೇಶ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರಿಗೆ ತಂಗಿ ಪಾತ್ರದಲ್ಲಿ ಭೋಲಾ ಶಂಕರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಈಗ ಹಿಂದಿಯಲ್ಲಿ ತೆರೆಕಂಡು ಹಿಟ್ ಆಗಿದ್ದ ಮಿಮಿ ಸಿನಿಮಾ ರಿಮೇಕ್ ನಲ್ಲಿ ನಟಿಸುವ ಅವಕಾಶ ಕೀರ್ತಿ ಅವರಿಗೆ ಸಿಕಿದೆ. ಮಿಮಿ ಸಿನಿಮಾದಲ್ಲಿ ಮಕ್ಕಳಿಲ್ಲದ ವಿದೇಶಿ ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ಪೋಷಕರಾಗುವ ಕಥೆ ಅದಾಗಿದೆ. ಕೃತಿ ಸನೋನ್ ಅವರು ನಟಿಸಿದ್ದಾ ಪಾತ್ರದಲ್ಲಿ ಕೀರ್ತಿ ಸುರೇಶ್ ಅವರು ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ನೋಡಿ, ಕಥೆ ಇಷ್ಟವಾದ ಕಾರಣ ಕೀರ್ತಿ ಅವರು ತಾಯಿ ಪಾತ್ರದಲ್ಲಿ ನಟಿಸುತ್ತಾರಂತೆ. ಆದರೆ ಕೀರ್ತಿ ಅಭಿನಯದ ಸಿನಿಮಾಗಳು, ಸಾಲು ಸಾಲು ಫ್ಲಾಪ್ ಆದ ಕಾರಣ, ನೆಟ್ಟಿಗರು ಆಕೆಯನ್ನು ಟ್ರೋಲ್ ಮಾಡುತ್ತಿದ್ದು, ನೀನು ಪೂಜಾ ಹೆಗ್ಡೆ ತಂಗಿ ಎನ್ನುತ್ತಿದ್ದಾರೆ. ಪೂಜಾ ಹೆಗ್ಡೆ ಅವರು ಅಭಿನಯದ 4 ಸಿನಿಮಾಗಳು ಸರಣಿ ಸೋಲು ಕಂಡಿದ್ದು, ಕೀರ್ತಿ ಸುರೇಶ್ ಅವರನ್ನು ಇದಕ್ಕೆ ಹೋಲಿಸುತ್ತಿದ್ದಾರೆ ನೆಟ್ಟಿಗರು.