ತನ್ನ ಬಾಡಿ ಗಾರ್ಡ್ ಮೇಲೆ ಸಕತ್ ಕೋಪ ಗೊಂಡ ಕನ್ನಡಿಗರ ಮನದ ಅರಸಿ ರಶ್ಮಿಕಾ. ಅಷ್ಟಕ್ಕೂ ಕಾರಣವೇನು ಗೊತ್ತೇ??

24

ನ್ಯಾಶನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ಅವರು ಹಲವು ವಿಚಾರಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಸಧ್ಯಕ್ಕೆ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ನಲ್ಲಿ ಹಿಂದಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ರಣಬೀರ್ ಕಪೂಎ ಅವರ ಜೊತೆಗೆ ಅನಿಮಲ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಆಗಾಗ ಹೊರಗಡೆ ಕಾಣಿಸಿಕೊಳ್ಳುವ ರಶ್ಮಿಕಾ ಅವರು ಇದೀಗ ತಮ್ಮ ಬಾಡಿ ಗಾರ್ಡ್ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಅದಕ್ಕೆ ಒಂದು ಪ್ರಮುಖವಾದ ಕಾರಣ ಸಹ ಇದೆ.

ನಟಿ ರಶ್ಮಿಕಾ ಮಂದಣ್ಣ ಅವರು ಹೆಚ್ಚು ಹೆಚ್ಚು ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ, ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ರಶ್ಮಿಕಾ ಅವರ ಜನಪ್ರಿಯತೆಯನ್ನು ಹೆಚ್ಚು ಮಾಡಿತು. 5 ವರ್ಷಗಳ ಸಿನಿಮಾ ಪಯಣದಲ್ಲಿ ರಶ್ಮಿಕಾ ಮಂದಣ್ಣ ಅವರು ಇಂದು ರಾಷ್ಟ್ರೀವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಿಂದ ಶುರುವಾದ ಈ ಪಯಣ ಇಂದು ಬಾಲಿವುಡ್ ವರೆಗೂ ತಲುಪಿದೆ. ರಶ್ಮಿಕಾ ಅವರಿಗೆ ಬಹಳ ದೊಡ್ಡ ಅಭಿಮಾನಿ ಬಳಗ ಸಹ ಇದೆ. ರಶ್ಮಿಕಾ ಅವರು ಹೊರಗಡೆ ಬಂದರೆ ಅಭಿಮಾನಿಗಳು ರಶ್ಮಿಕಾ ಅವರನ್ನು ಮುತ್ತಿಗೆ ಹಾಕುತ್ತಾರೆ.

ಪ್ರೀತಿಯಿಂದ ಅಭಿಮಾನಿಗಳು ರಶ್ಮಿಕಾ ಅವರ ಜೊತೆ ಫೋಟೋ ತೆಗೆಸಿಕೊಳ್ಳಬೇಕು, ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಅವರನ್ನು ಕೇಳುವುದಂತು ಯಾವಾಗಲೂ ನಡೆದೇ ನಡೆಯುತ್ತದೆ. ಎಲ್ಲಾ ಸೆಲೆಬ್ರಿಟಿಗಳಿಗೂ ಇದೇ ರೀತಿ, ಹೊರಗಡೆ ಬಂದರೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬೀಳುತ್ತಾರೆ. ಇದೀಗ ರಶ್ಮಿಕಾ ಅವರಿಗು ಸಹ ಇದೇ ರೀತಿ, ಚಿತ್ರೀಕರಣ ಮುಗಿಸಿಕೊಂಡು ಬರುವಾಗ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದು ಆಗ ರಶ್ಮಿಕಾ ಅವರ ಬಾಡಿಗಾರ್ಡ್ ಅಭಿಮಾನಿಗಳಿಗೆ ಬೈದು ಹೊರಕಳಿಸುವ ಪ್ರಯತ್ನ ಮಾಡಿದ್ದಾರೆ, ಅದರಿಂದ ಕೋಪಗೊಂಡ ರಶ್ಮಿಕಾ ಅವರು, ತಮ್ಮ ಬಾಡಿಗಾರ್ಡ್ ಗೆ ಬೈದು ಅಭಿಮಾನಿಗಳ ಜೊತೆಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ರಶ್ಮಿಕಾ ಅವರು ಬಾಡಿಗಾರ್ಡ್ ಗೆ ಬೈದ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್ ಆಗಿದ್ದು, ರಶ್ಮಿಕಾ ಅವರು ಮಾಡಿರುವ ಕೆಲಸಕ್ಕೆ ನೆಟ್ಟಿಗರು ಮತ್ತು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.