ಒಂದೇ ಬಾರಿಗೆ ಒಂದಲ್ಲ ಎರಡಲ್ಲ ಎಂಟು ಐಷಾರಾಮಿ ಕಾರುಗಳನ್ನು ಖರೀದಿಸಿದ ಪವನ್ ಕಲ್ಯಾಣ್

23

ಟಾಲಿವುಡ್ ನಲ್ಲಿ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುವ ನಟ ಹಾಗೂ ಜನಸೇವ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ರಾಜಕೀಯದಲ್ಲಿ ಸಹ ಸಕ್ರಿಯರಾಗಿದ್ದಾರೆ. ಹಲವು ವರ್ಷಗಳಿಂದ ಜನರ ಸೇವೆ ಮಾಡುವ ಸಲುವಾಗಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಇವರು ಭೀಮ್ಲಾ ನಾಯಕ್ ಸಿನಿಮಾದಲ್ಲಿ ನಟಿಸಿದ್ದರು, ಆ ಸಿನಿಮಾ ಸೂಪರ್ ಹಿಟ್ ಆಗಿತ್ತು, ಸಿನಿಮಾ ಮತ್ತು ರಾಜಕೀಯ ಎರಡು ವಿಚಾರದಲ್ಲು ಸದಾ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಲ್ಲಿರುವ ಪವನ್ ಕಲ್ಯಾಣ್ ಅವರು ಇದೀಗ ಮತ್ತೊಂದು ವಿಚಾರದಿಂದ ಸುದ್ದಿಯಾಗಿದ್ದಾರೆ.

ಇದೀಗ ಪವನ್ ಕಲ್ಯಾಣ್ ಅವರು ಮಾಡಿರುವ ಒಂದು ಕೆಲಸ ನೋಡಿದರೆ, ಅವರು ಸಿನಿಮಾ ಇಂದ ಹೆಚ್ಚು ದೂರ ಉಳಿದು, ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗುವ ಹಾಗೆ ತೋರುತ್ತದೆ. ಪವನ್ ಕಲ್ಯಾಣ್ ಅವರು ಇದೀಗ ಒಂದೇ ಸಮಯಕ್ಕೆ, ಒಂದೇ ಸಾರಿ 8 ಕಾರ್ ಗಳನ್ನು ಖರೀದಿ ಮಾಡಿದ್ದಾರೆ. ಪವನ್ ಕಲ್ಯಾಣ್ ಅವರು 8 ಕಾರ್ ಖರೀದಿ ಮಾಡಿರುವುದು, ಚರ್ಚೆಗೆ ಕಾರಣವಾಗಿದೆ. 19 ಲಕ್ಷ ರೂಪಾಯಿ ಬೆಲೆಬಾಳುವ 8 ಸ್ಕಾರ್ಪಿಯೋ ಕಾರ್ ಗಳನ್ನು ಖರೀದಿ ಮಾಡಿದ್ದಾರೆ. ಈ ಬೆಳವಣಿಗೆ ನೋಡಿದರೆ, ಪವನ್ ಕಲ್ಯಾಣ್ ಅವರು ಚಿತ್ರರಂಗದಿಂದ ದೀರ್ಘ ವಿರಾಮ ಪಡೆದು, ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ರೀತಿ 8 ಕಾರ್ ಖರೀದಿ ಮಾಡಿರುವುದಕ್ಕೆ ಕಾರಣ ಗೊತ್ತಾಗಿದ್ದು, ಆಂಧ್ರಪ್ರದೇಶದ ಪ್ರವಾಸದ ಕಾರಣ ಪವನ್ ಕಲ್ಯಾಣ್ ಅವರು ಕಾರ್ ಗಳನ್ನು ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಅಕ್ಟೋಬರ್ 5ರಂದು ದಸರಾ ಹಬ್ಬ, ಆ ಹಬ್ಬದ ಸಮಯದಿಂದ ಜನಸಂಪರ್ಕ ಸಭೆಗಳನ್ನು ಉದ್ದೇಶಿಸಿ ಪವನ್ ಕಲ್ಯಾಣ್ ಅವರು ಮಾತನಾಡುತ್ತಾರೆ ಎನ್ನುವ ವಿಚಾರ ತಿಳಿದುಬಂದಿದೆ. ಈ ಕೆಲಸಕ್ಕಾಗಿ ಕಾರ್ ಗಳನ್ನು ಸಿದ್ಧಪಡಿಸಿಕೊಂಡಿದ್ದು, ಅವರ ಬೆಂಗಾವಲಿಗೆ ಇಷ್ಟು ಕಾರ್ ಗಳು ಬೇಕಾಗುತ್ತದೆ ಎಂದು ಕಾರ್ ಗಳನ್ನು ಖರೀದಿ ಮಾಡಿದ್ದಾರಂತೆ. ಆಂಧ್ರಪ್ರದೇಶದ ಪೂರ್ತಿ ಪ್ರವಾಸ ಮಾಡಲಿದ್ದು, ಸಭೆಗಳು ಮತ್ತು ಸಮಾರಂಭಗಳನ್ನು ಮಾಡಿ ರಾಜಕೀಯದ ಮೂಲಕ ಜನರಿಗೆ ಬಹಳ ಹತ್ತಿರವಾಗುವ ಪ್ಲಾನ್ ಮಾಡಿಕೊಂಡಿದ್ದಾರೆ. ತಿರುಪತಿ ಇಂದ ಪ್ರವಾಸ ಆರಂಭಿಸಲಿದ್ದು ತಿರುಪತಿ ಕ್ಷೇತ್ರದಿಂದ ಇದೇ ಪಕ್ಷದಿಂದ ಚಿರಂಜೀವಿ ಅವರು ಎಲೆಕ್ಷನ್ ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಹಾಗಾಗಿ ಅದೇ ಕ್ಷೇತ್ರದಿಂದ ಪ್ರವಾಸ ಶುರು ಮಾಡಲಿದ್ದಾರೆ. ಅಲ್ಲಿನ ಮುಂದಿನ ಸಿಎಂ ಪವನ್ ಕಲ್ಯಾಣ್ ಅವರೇ ಆಗಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ.