ಇದುವರೆಗೂ ಜೈಲಿಗೆ ಕಂಬಿ ಎಣಿಸಿರುವ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟ ನಟಿಯರು ಯಾರ್ಯಾರು ಗೊತ್ತೇ?? ಇವೆರೆಲ್ಲರೂ ಜೈಲಿಗೆ ಹೋಗಿ ಬಂದಿದ್ದಾರೆ.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟರನ್ನು ಅವರ ಅಭಿಮಾನಿಗಳು ದೇವರಂತೆ ಪೂಜಿಸುತ್ತಾರೆ. ಅದರಲ್ಲಿ ಕೆಲವು ನಟರು ತಾವು ಗೊತ್ತೋ ಗೊತ್ತಿಲ್ಲದೆಯೋ ಮಾಡಿದ ತಪ್ಪಿನಿಂದಾಗಿ ಜೈಲು ಪಾಲಾಗಿದ್ದಾರೆ. ಹಾಗಿದ್ದರೆ ಇದುವರೆಗೂ ಜೈಲುಪಾಲಾಗಿರುವ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ನಟಿಯರು ಯಾರು ಎಂಬುದಾಗಿ ನೋಡೋಣ ಬನ್ನಿ.
ರಜನಿಕಾಂತ್; 1979 ರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಹೈದರಾಬಾದ್ ನ ಏರ್ಪೋರ್ಟ್ ನಲ್ಲಿ ಅಪರಿಚಿತರೊಂದಿಗೆ ಜಗಳವಾಡಿದ ಸಂದರ್ಭದಲ್ಲಿ ಕುಡಿದ ನಶೆಯಲ್ಲಿದ್ದ ಅವರು ಗಾಜನ್ನು ಒಡೆದು ಜಗಳ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಬಂದ ಪೊಲೀಸರೊಂದಿಗೆ ಕೂಡ ವಾಗ್ವಾದ ಮಾಡಿ ನಂತರ ಪೊಲೀಸರು ಅವರ ಫ್ಲೈಟ್ ಟಿಕೆಟ್ ಕ್ಯಾನ್ಸಲ್ ಮಾಡಿ ಅವರನ್ನು ಅರೆಸ್ಟ್ ಮಾಡಿದ್ದಾರೆ.
ನವರಸ ನಾಯಕ ಜಗ್ಗೇಶ್; 90ರ ದಶಕದ ಸಂದರ್ಭದಲ್ಲಿ ಪ್ರೈವೇಟ್ ಕಂಪನಿಯ ಚಾಲಕನಿಗೆ ಹೊಡೆದಿದ್ದಾರೆ ಎಂಬ ಕಾರಣಕ್ಕಾಗಿ ಆ ಕಂಪನಿಯ ಉದ್ಯೋಗಿಗಳಲ್ಲಿ ಸೇರಿ ಜಗ್ಗೇಶ್ ಅವರ ಮೇಲೆ ಕಂಪ್ಲೇಂಟ್ ನೀಡಿದ್ದರು. ಎದುರಿನ ಆಧಾರದ ಮೇಲೆ ಪೊಲೀಸರು ಜಗ್ಗೇಶ್ ರವರನ್ನು ಅರೆಸ್ಟ್ ಮಾಡುತ್ತಾರೆ.

ಚಿರಂಜೀವಿ; 2009 ರ ಸಂದರ್ಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ಪ್ರಜಾರಾಜ್ಯಂ ಎನ್ನುವ ಪಕ್ಷವನ್ನು ಸ್ಥಾಪಿಸಿದ್ದರು. ಆ ಸಂದರ್ಭದಲ್ಲಿ ಆಡಳಿತ ಪಕ್ಷದ ವಿರುದ್ಧ ಇಲ್ಲಸಲ್ಲದ ಆರೋಪವನ್ನು ಹೊರಿಸುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ಅವರನ್ನು ಪೊಲೀಸರು ಬಂಧಿಸಿದ್ದರು. ದುನಿಯಾ ವಿಜಯ್; ಕೆಲವು ವರ್ಷಗಳ ಹಿಂದೆ ಗಮನಿಸಿದರೆ ಪಾನಿಪುರಿ ಕಿಟ್ಟಿ ರವರ ವಿಚಾರದಲ್ಲಿ ದುನಿಯಾ ವಿಜಯ್ ಜೈಲಿಗೆ ಹೋಗಿದ್ದು ನಿಮಗೆಲ್ಲಾ ಗೊತ್ತೇ ಇದೆ.
ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ; ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವ ಇವರಿಬ್ಬರನ್ನು ಕೂಡ 2020 ಸಂದರ್ಭದಲ್ಲಿ ಮಾದಕದ್ರವ್ಯದ ವ್ಯಸನವನ್ನು ಮಾಡುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ಕೂಡ ಬಂಧಿಸಲಾಗಿತ್ತು. ರಘುವೀರ್; ಕನ್ನಡ ಚಿತ್ರರಂಗದ ನಟ ಹಾಗೂ ನಿರ್ಮಾಪಕರಾಗಿದ್ದ ಇವರನ್ನು ವೇ’ಶ್ಯಾವಾಟಿಕೆ ಮಾಡುತ್ತಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಇವರನ್ನು ಪೊಲೀಸರು ಬಂಧಿಸಿದ್ದರು.
ದರ್ಶನ್; ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಅವರ ಪತ್ನಿಯ ಮೇಲೆ ಮಾಡಿರುವ ಹಲ್ಲೆಯನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ಅವರನ್ನು ಬಂಧಿಸುತ್ತಾರೆ. ಪವನ್ ಕಲ್ಯಾಣ್; ತಮ್ಮ ಅಣ್ಣ ಆಗಿರುವ ಮೆಗಾಸ್ಟಾರ್ ಚಿರಂಜೀವಿ ರವರ ಮಗಳ ಕುರಿತಂತೆ ರಿಪೋರ್ಟರ್ ಒಬ್ಬ ಕೆಟ್ಟದಾಗಿ ಬರೆದಿದ್ದ ಕಾರಣದಿಂದಾಗಿ ಪವನ್ ಕಲ್ಯಾಣ್ ಹಾಗೂ ಅವರ ಅನುಚರರು ಆ ರಿಪೋರ್ಟರ್ ಮೇಲೆ ಹ’ಲ್ಲೆ ಮಾಡಿದ ಕಾರಣದಿಂದಾಗಿ ಪೊಲೀಸರು ಅವರನ್ನು ಬಂಧಿಸುತ್ತಾರೆ.
ಕಿಚ್ಚ ಸುದೀಪ್; ಕಿಚ್ಚ ಕ್ರಿಯೇಶನ್ಸ್ ನಲ್ಲಿ ಮೂಡಿಬಂದ ಒಂದು ಧಾರವಾಹಿಯ ಚಿತ್ರೀಕರಣದ ಸಂದರ್ಭದಲ್ಲಿ ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ನಲ್ಲಿ ಕೆಲವೊಂದು ಮರಗಳು ಹಾಳಾಗಿವೆ ಎಂದು ಎಸ್ಟೇಟಿನ ಮಾಲೀಕ ಕಿಚ್ಚ ಸುದೀಪ್ ರವರ ಬಳಿ ಕಾಂಟಾಕ್ಟ್ ಮಾಡಲು ಪ್ರಯತ್ನಿಸಿದಾಗ ಅದಕ್ಕೆ ಅವರು ಸಿಗುವುದಿಲ್ಲ. ಆಗ ಅವರು ಕಿಚ್ಚ ಸುದೀಪ್ ರವರ ಮೇಲೆ ದೂರನ್ನು ಸಲ್ಲಿಸುತ್ತಾರೆ. ಆದರೆ ಕಿಚ್ಚ ಸುದೀಪ್ ರವರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿದ ಕಾರಣ ಅವರಿಗೆ ಅರೆಸ್ಟ್ ವಾರೆಂಟ್ ಇಶ್ಯೂ ಮಾಡಲಾಗುತ್ತದೆ. ಆದರೆ ಕಿಚ್ಚ ಸುದೀಪ್ ರವರ ಪರ ವಕೀಲರು ಹೈಕೋರ್ಟ್ ಮೊರೆ ಗೆ ಹೋಗಿ ವಾರೆಂಟ್ ಅನ್ನು ಹೋಲ್ಡ್ ಅಲ್ಲಿ ಇಡುವಂತೆ ಮಾಡುತ್ತಾರೆ.
ವಿಶಾಲ್; ವಿಶಾಲ ರವರು 2018 ರಲ್ಲಿ ತಮಿಳು ಫಿಲಂ ಪ್ರೊಡ್ಯೂಸರ್ ಕೌನ್ಸಿಲ್ ಗೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ಯಾವುದೇ ಕಾರ್ಯವನ್ನು ನಿರ್ವಹಿಸುತ್ತಿಲ್ಲ ಕೇವಲ ಪರ್ಸನಲ್ ಕೆಲಸವನ್ನು ಮಾತ್ರ ನಿರ್ವಹಿಸುತ್ತಿದ್ದಾರೆ ಎಂಬುದಾಗಿ ಕೌನ್ಸಿಲ್ ಮೆಂಬರ್ ಗಳು ಮುಖ್ಯಮಂತ್ರಿಗಳಲ್ಲಿ ದೂರನ್ನು ನೀಡಿದ ಸಂದರ್ಭದಲ್ಲಿ ಕೌನ್ಸಿಲ್ ಗೆ ಬೀಗವನ್ನು ಜಡಿಯಲಾಗುತ್ತದೆ. ಈ ಸಂದರ್ಭದಲ್ಲಿ ಬೀಗವನ್ನು ಒಡೆಯಲು ಹೋದ ವಿಶಾಲ್ ಹಾಗೂ ಪೊಲೀಸ್ ರವರ ನಡುವೆ ವಾಗ್ವಾದ ಉಂಟಾಗಿ ವಿಶಾಲ್ ರವರನ್ನು ಬಂಧಿಸುತ್ತಾರೆ.

ಸಿಂಬು; ತಮಿಳು ಸಂಗೀತ ನಿರ್ದೇಶಕ ಅನಿರುದ್ಧ ರವರ ಜೊತೆಗೆ ಸೇರಿಕೊಂಡು ಸಿಂಬು ರವರು ಒಂದು ಸಾಂಗನ್ನು ತಯಾರು ಮಾಡುತ್ತಾರೆ ಇದರಲ್ಲಿ ಅತಿಯಾದ ಪದಗಳಿವೆ ಎಂಬ ಕಾರಣಕ್ಕಾಗಿ ಸಿಂಬುವವರ ಮೇಲೆ ದೂರನ್ನು ಸಲ್ಲಿಸುತ್ತಾರೆ. ಆಗ ಪೊಲೀಸರು ಹುಡುಕಿದಾಗ ಸಿಂಬು ರವರು ಬೆಂಗಳೂರಿನಲ್ಲಿದ್ದಾರೆ ಎಂಬ ವಿಚಾರವನ್ನು ತಿಳಿದು ಅವರನ್ನು ಬಂಧಿಸುತ್ತಾರೆ. ಇವಿಷ್ಟು ಜನ ನಟರು ಜೈಲಿಗೆ ಹೋಗಿಬಂದಿದ್ದಾರೆ ಅಥವಾ ಜೈಲಿನ ಪ್ರಕ್ರಿಯೆಗೆ ಒಳಗಾಗಿದ್ದಾರೆ ಎಂದು ಹೇಳಬಹುದು.