ಕೇವಲ 25 ಸಾವಿರ ಹೂಡಿಕೆ ಮಾಡಿ, ಬರೋಬ್ಬರಿ 72 ಲಕ್ಷದ ವರೆಗೂ ಹಣಗಳಿಸುವ ಬಿಸಿನೆಸ್ ಯಾವುದು ಗೊತ್ತೇ??

41

ಕೋವಿಡ್ ಸಮಸ್ಯೆ ಬಂದ ಬಳಿಕ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ಅನೇಕ ಜನರ ಬದುಕು ಕಷ್ಟಕ್ಕೆ ಸಿಲುಕಿತ್ತು. ಅನೇಕ ಕಂಪನಿಗಳು ಮುಚ್ಚಿ ಹೋದವು, ಒಂದಷ್ಟು ಜನರು ಒಳ್ಳೆಯ ಪೊಸಿಷನ್ ನಲ್ಲಿ ಇದ್ದವರು ಸಹ ಕೆಲಸ ಕಳೆದುಕೊಳ್ಳುವ ಹಾಗೆ ಆಯಿತು. ಈ ರೀತಿ ಎಲ್ಲರ ಜೀವನವನ್ನು ಅಸ್ತ ವ್ಯಸ್ತ ಮಾಡಿತು ಕರೊನಾ. ಇದರಿಂದಾಗಿ ಹಲವು ಜನರಿಗೆ ಬೇರೆಡೆ ಕೆಲಸ ಮಾಡಬೇಕಾ ಅಥವಾ ಸ್ವಂತವಾಗಿ ಬ್ಯುಸಿನೆಸ್ ಮಾಡಬೇಕಾ ಎನ್ನುವ ಪ್ರಶ್ನೆ ಕಾಡಲು ಶುರುವಾಯಿತು. ಅನೇಕರು ಕರೊನಾ ಬಳಿಕ ಸ್ವಂತ ಬ್ಯುಸಿನೆಸ್ ಮಾಡಲು ಶುರುಮಾಡಿದರು. ಇದರಿಂದಾಗಿ ಲಾಭವನ್ನು ಸಹ ಪಡೆದರು. ಬ್ಯುಸಿನೆಸ್ ಎಂದು ಅಂದುಕೊಳ್ಳುವುದೇನೋ ಸುಲಭ, ಆದರೆ ಲಾಭ ನೀಡುವಂತಹ ಬ್ಯುಸಿನೆಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

ಸ್ವಂತ ಉದ್ಯಮವನ್ನು ಸರಿಯಾದ ರೀತಿಯಲ್ಲಿ ಪ್ಲಾನ್ ಮಾಡಿ ಶುರು ಮಾಡಿದರೆ ಯಶಸ್ಸು ಸಿಗುವುದು ಖಂಡಿತ. ಬ್ಯುಸಿನೆಸ್ ಮಾಡುವ ಪ್ಲಾನ್ ಇರುವವರಿಗೆ, ಕೇಂದ್ರ ಸರ್ಕಾರದಿಂದ ನರೇಂದ್ರ ಮೋದಿ ಅವರು ಸಹ ಸಹಕಾರ ನೀಡುತ್ತಾರೆ, ಬ್ಯುಸಿನೆಸ್ ಮಾಡುವವರಿಗೆ ಲೋನ್ ಗಳನ್ನು ಸಹ ನೀಡುತ್ತಾರೆ. ಇಂದು ನಾವು ನಿಮಗೆ ಲಾಭ ನೀಡುವಂತಹ ಒಂದು ಬ್ಯುಸಿನೆಸ್ ಐಡಿಯಾ ಬಗ್ಗೆ ತಿಳಿಸುತ್ತೇವೆ. ಇದರಲ್ಲಿ ನೀವು 25 ಸಾವಿರ ರೂಪಾಯಿ ಇನ್ವೆಸ್ಟ್ ಮಾಡಿ, ಬರೋಬ್ಬರಿ 72 ಲಕ್ಷ ರೂಪಾಯಿಯವರೆಗೂ ಲಾಭ ಪಡೆಯಬಹುದು. ಆ ಬ್ಯುಸಿನೆಸ್ ಯಾವುದು ಎಂದು ತಿಳಿಸುತ್ತೇವೆ ನೋಡಿ. ಇಂದು ನಾವು ನಿಮಗೆ ತಿಳಿಸುವುದು ನೀಲಗಿರಿ ಕೃಷಿಯ ಬಗ್ಗೆ. ಗ್ರಾಮೀಣ ಭಾಗದ ರೈತರಿಗೆ ಇದರ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲ, ಆದರೆ ನೀಲಗಿರಿ ಕೃಷಿಯನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ದೊಡ್ಡ ಮಟ್ಟದಲ್ಲಿ ಲಾಭ ಪಡೆಯಬಹುದು.

ಇದನ್ನು ದೇಶದ ಯಾವ ಪ್ರದೇಶದಲ್ಲಿ ಬೇಕಾದರೂ ಬೆಳೆಯಬಹುದು ಎನ್ನುವುದು ನೀಲಗಿರಿಯ ವಿಶೇಷತೆ. ಇದರಿಂದ ಸಿಗುವ ಪ್ರಯೋಜನ ಏನೆಂದರೆ, ಈ ಮರದಿಂದ ಕೃಷಿಯ ಪ್ರದೇಶ ಮತ್ತು ಟೆಂಪರೇಚರ್ ಮೇಲೆ ವಿಶೇಷ ಪರಿಣಾಮ ಇಲ್ಲ. ಒಂದು ಹೆಕ್ಟರ್ ಪ್ರದೇಶದಲ್ಲಿ ಸುಮಾರು 3000 ನೀಲಗಿರಿ ಮರಗಳನ್ನು ಬೆಳೆಯಬಹುದು. ಈ ಮರದ ಸಸಿಗಳು ನರ್ಸರಿಯಲ್ಲಿ ಸಿಗುತ್ತದೆ. ಇವು ಆಸ್ಟ್ರೇಲಿಯಾ ಮೂಲದ ಸಸಿಗಳು, ಆದರೆ ಭಾರತದಲ್ಲಿ ಸುಲಭವಾಗಿ ಬೆಳೆಯಬಹುದು. ಈ ಮರಗಳಿಂದ ಗಟ್ಟಿ ಹಲಗೆ, ತಿರುಳು, ಪೀಠೋಪಕರಣಗಳು ಹಾಗು ಪೆಟ್ಟಿಗೆಗಳನ್ನು ತಯಾರಿಸಲು ಬಳಸುತ್ತಾರೆ. ಮಧ್ಯಪ್ರದೇಶ,ಹರಿಯಾಣ, ಪಂಜಾಬ್, ಬಿಹಾರ್ ಮತ್ತು ಬೇರೆ ಪ್ರದೇಶಗಳಲ್ಲಿ ಈ ಮರಗಳನ್ನು ಬೆಳೆಯಲಾಗುತ್ತದೆ