ನಿಜವಾಗಲು ಶಿವರಾಜ್ ಕುಮಾರ್ ಟಾಪ್ ನಟರಾಗಿದ್ದರೂ ಸರಳವಾಗಿರಲು ಕಾರಣವೇನಂತೆ ಗೊತ್ತೇ??

11

ಕರುನಾಡ ಚಕ್ರವರ್ತಿ ಡಾ.ಶಿವ ರಾಜ್ ಕುಮಾರ್, ಅಭಿಮಾನಿಗಳ ಪ್ರೀತಿಯ ಶಿವಣ್ಣ ಚಿತ್ರರಂಗದಲ್ಲಿ 25 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಸಕ್ರಿಯರಾಗಿದ್ದಾರೆ. ಶಿವಣ್ಣ ಅವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಸಹ ಇದೆ. ಶಿವಣ್ಣ ಅವರು ದೊಡ್ಮನೆಯ ಮಗ. ಅಣ್ಣಾವ್ರು ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಮೊದಲ ಮಗ. ಅಣ್ಣಾವ್ರು ಎಂಥಹ ದೊಡ್ಡ ಮೇರು ನಟ, ಭಾರತ ಚಿತ್ರರಂಗವೇ ಅವರನ್ನು ಕೊಂಡಾಡುತ್ತಿತ್ತು, ಅಂತಹ ಮೇರು ನಟನ ಮಗ ಆಗಿದ್ದರು ಸಹ, ಅಣ್ಣಾವ್ರ ಮಗನಾಗಿ ಶಿವಣ್ಣ ಅವರು ಯಾವಾಗಲೂ ಸರಳತೆಯನ್ನೇ ಮೆರೆದಿದ್ದಾರೆ. ಅದಕ್ಕೆ ಕಾರಣ ಏನು ಗೊತ್ತಾ?

ಶಿವಣ್ಣ ಅವರ ಸರಳತೆ ಮತ್ತು ಮುಗ್ಧತೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ರಸ್ತೆಯಲ್ಲಿ ಓಡಾಡುವಾಗ ರೋಡ್ ಸೈಡ್ ನಲ್ಲಿ ಸಿಗುವ ಸಣ್ಣ ಹೋಟೆಲ್ ನಲ್ಲಿ ಕೂತು ಶಿವಣ್ಣ ಊಟ ಮಾಡುವ ಹಲವು ಫೋಟೋಗಳು ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಶಿವಣ್ಣ ಅವರು ಎಲ್ಲ ಜೊತೆಯಲ್ಲೂ ಬಹಳ ಬೇಗ ಬೆರೆಯುತ್ತಾರೆ, ಅಭಿಮಾನಿಗಳ ಜೊತೆಗೆ ಬಹಳ ಪ್ರೀತಿಯಿಂದ ಇರುತ್ತಾರೆ. ಶಿವಣ್ಣ ಅವರು ಒಂದು ಓಪನ್ ಬುಕ್ ಇದ್ದ ಹಾಗೆ ಎಂದರೆ ತಪ್ಪಾಗುವುದಿಲ್ಲ. ಶಿವಣ್ಣ ಅವರು ಸಿನಿಮಾಗಳ ವಿಚಾರದಲ್ಲೂ ಅದೇ ರೀತಿ, ಈಗಲೂ ಶಿವಣ್ಣ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆ ಇದೆ, ಶಿವಣ್ಣ ಅಗರಿಗಾಗಿಯೇ ಸ್ಪೆಷಲ್ ಆಗಿ ಕಥೆಗಳು ತಯಾರಾಗುತ್ತದೆ. ಅಣ್ಣಾವ್ರ ಮಗ ಆಗಿದ್ದರು ಸಹ, ಶಿವಣ್ಣ ಅವರಿಗೆ ನೇರವಾಗಿ ಚಿತ್ರರಂಗಕ್ಕೆ ಪ್ರವೇಶ ಸಿಗಲಿಲ್ಲ, ಆಕ್ಟಿಂಗ್ ಕಲಿತು ಚಿತ್ರರಂಗಕ್ಕೆ ಬಂದರು ಶಿವಣ್ಣ.

ಇನ್ನು ಶಿವಣ್ಣ ಅಭಿನಯದ ಮೊದಲ ಮೂರು ಸಿನಿಮಾ ಆನಂದ್, ರಥಸಪ್ತಮಿ ಹಾಗೂ ಮನ ಮೆಚ್ಚಿದ ಹುಡುಗಿ ಸಿನಿಮಾ ಸೂಪರ್ ಹಿಟ್ ಆದ ಕಾರಣ ಶಿವಣ್ಣ ಅವರು ಹ್ಯಾಟ್ರಿಕ್ ಹೀರೋ ಎಂದೇ ಹೆಸರು ಪಡೆದುಕೊಂಡರು. ಆಗಿನಿಂದ ಈಗಿನವರೆಗೂ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಶಿವಣ್ಣ. ಇವರು 125ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿದ್ದಾರೆ..ಇಂತಹ ಸಾಧನೆ ಮಾಡಿರುವ ಶಿವಣ್ಣ ಅವರ ಸರಳತೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ಇದರ ಬಗ್ಗೆ ಡಿಕೆಡಿ ವೇದಿಕೆಯಲ್ಲಿ ಹಿರಿಯನಟಿ ಲಕ್ಷ್ಮಿ ಅವರು ಮಾತನಾಡಿದ್ದು, ಶಿವಣ್ಣ ಅವರ ಈ ಸರಳತೆಗೆ ಕಾರಣ ಡಾ.ರಾಜ್ ಕುಮಾರ್ ಅವರು ಎಂದಿದ್ದಾರೆ, ಜೊತೆಗೆ ಅಣ್ಣಾವ್ರ ಬಗ್ಗೆ ಸಹ ಮಾತನಾಡಿದ ಲಕ್ಷ್ಮಿ ಅವರು, ಡಾ.ರಾಜ್ ಕುಮಾರ್ ಅವರ ಬಗ್ಗೆ ಸಹ ಮಾತನಾಡಿ, ಅವರು ಮನಸ್ಸು ಮಾಡಿದ್ದರೆ ಕರ್ನಾಟಕದ ಸಿಎಂ
ಆಗಬಹುದಿತ್ತು, ಆದರೆ ಅವರು ಮುಗ್ಧರಾಗಿದ್ದರು ಎಂದಿದ್ದಾರೆ ನಟಿ ಲಕ್ಷ್ಮಿ.