ನಿಜವಾಗಲೂ ನಟಿ ನಿಕಿತಾ ರವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದು ಯಾಕೆ ಗೊತ್ತೇ?? ಅಂದು ಪಾರ್ವತಮ್ಮ ರಾಜ್ ಕುಮಾರ್ ಮಾಡಿದ್ದೇನು ಗೊತ್ತೇ??

94

ನಮಸ್ಕಾರ ಸ್ನೇಹಿತರೇ ನಟಿ ನಿಖಿತಾ ರವರ ಕುರಿತಂತೆ ನಿಮಗೆಲ್ಲರಿಗೂ ಗೊತ್ತೇ ಇದೆ. ಒಂದು ಕಾಲದಲ್ಲಿ ದರ್ಶನ್ ಹಾಗೂ ಅವರ ನಡುವೆ ಇದ್ದಂತಹ ಸ್ನೇಹ ಸಂಬಂಧವನ್ನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಅನುಮಾನಿಸಿ ದೊಡ್ಡಮಟ್ಟದಲ್ಲಿ ಗಲಾಟೆ ನಡೆದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರ ನಡುವೆ ನಡೆದಂತಹ ಜಗಳ ಗಳಿಂದಾಗಿ ದರ್ಶನ್ ರವರು ಜೈಲು ಪಾಲಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಕನ್ನಡ ಚಿತ್ರರಂಗದಲ್ಲಿ ದರ್ಶನ್ ರವರು ಇದೆಲ್ಲ ಅನುಭವಿಸಲು ನಿಜವಾದ ಕಾರಣ ನಿಖಿತಾ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳಲು ಆರಂಭಿಸುತ್ತಾರೆ.

ಈ ಸಂದರ್ಭದಲ್ಲಿ ನಿಖಿತಾ ಅವರಿಂದಾಗಿ ಕನ್ನಡ ಚಿತ್ರರಂಗದ ಮಾನ ಮರ್ಯಾದೆ ಹರಾಜಾಗುತ್ತಿದೆ ಎಂಬ ನಿರ್ಧಾರಕ್ಕೆ ಚಿತ್ರರಂಗದ ನಿರ್ಮಾಪಕರು ಬರುತ್ತಾರೆ. ಅವರೆಲ್ಲರೂ ಕೂಡ ಒಟ್ಟಿಗೆ ಸೇರಿ ಸಭೆಯಲ್ಲಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಅದೇನೆಂದರೆ ನಟಿ ನಿಖಿತಾ ತುಕ್ರಾಲ್ ರವರನ್ನು ಕನ್ನಡ ಚಿತ್ರರಂಗದಿಂದ ಮೂರು ವರ್ಷಗಳ ಕಾಲ ಬ್ಯಾನ್ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಇದರಿಂದಾಗಿ ನಿಖಿತಾ ರವರು ಸಾಕಷ್ಟು ದುಃಖಕ್ಕೆ ಒಳಗಾಗುತ್ತಾರೆ. ಯಾಕೆಂದರೆ ನಟಿ ನಿಕಿತಾ ರವರಿಗೆ ಸಿನಿಮಾವೇ ಎಲ್ಲಾ ಆಗಿತ್ತು.

ಕನ್ನಡ ಸಿನಿಮಾರಂಗದ ನಿರ್ಮಾಪಕರು ತೆಗೆದುಕೊಂಡ ನಿರ್ಧಾರ ಎನ್ನುವುದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ನಟಿ ನಿಖಿತಾ ಅವರಿಗೆ ಬೇರೆ ಭಾಷೆಯಲ್ಲಿ ಕೂಡ ಸಿನಿಮಾ ಸಿಗದಂತೆ ಮಾಡಿಬಿಡುತ್ತದೆ. ಈ ಮೂಲಕ ನಟಿ ನಿಖಿತಾ ರವರ ಸಿನಿಮಾ ಕರಿಯರ್ ಎನ್ನುವುದು ಸಂಪೂರ್ಣವಾಗಿ ನಿಸ್ತೇಜ ಗೊಳ್ಳುತ್ತದೆ. ಈ ಸಂದರ್ಭದಲ್ಲಿ ನಟಿ ನಿಖಿತಾ ರವರು ದುಃಖದಿಂದಲೇ ಮಾಧ್ಯಮಗಳ ಮುಂದೆ ಬಂದು ನನ್ನ ಹಾಗೂ ದರ್ಶನ್ ರವರ ನಡುವೆ ಕೇವಲ ಸ್ನೇಹ ಸಂಬಂಧ ಮಾತ್ರ ಇರುವುದಾಗಿ ಮಾಧ್ಯಮದವರು ನಮ್ಮಿಬ್ಬರ ಸಂಬಂಧದ ನಡುವೆ ತಪ್ಪುಕಲ್ಪನೆ ಬಿಂಬಿಸುವಂತೆ ಮಾಡುತ್ತಿದ್ದಾರೆ ಎಂಬುದಾಗಿ ಹೇಳಿಕೊಳ್ಳುತ್ತಾರೆ.

ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೂಡ ಕನ್ನಡ ಚಿತ್ರರಂಗದ ಮಾನ ಮರ್ಯಾದೆ ಹರಾಜು ಆಗುತ್ತಿರುವ ಸಂದರ್ಭದಲ್ಲಿ ಈ ವಿಚಾರಕ್ಕೆ ಎಂಟ್ರಿ ನೀಡಿದ್ದು ಪಾರ್ವತಮ್ಮ ರಾಜಕುಮಾರ್ ರವರು. ಹೌದು ಗೆಳೆಯರೇ ಅವರು ತಮ್ಮ ಮನೆಗೆ ಎಲ್ಲಾ ನಿರ್ಮಾಪಕರನ್ನು ಕೂಡ ಕರೆಸಿಕೊಂಡು ಗಂಡ ಹೆಂಡಿರ ನಡುವೆ ನಡೆದಿರುವಂತಹ ಜಗಳವನ್ನು ಒಬ್ಬ ನಟಿಯ ತಲೆಗೆ ಕಟ್ಟುತ್ತಿರುವುದು ಎಷ್ಟರಮಟ್ಟಿಗೆ ನ್ಯಾಯ ಎಂಬುದಾಗಿ ನಿರ್ಮಾಪಕರನ್ನು ಪ್ರಶ್ನಿಸುತ್ತಾರೆ. ಒಬ್ಬ ನಟಿಯ ಕುರಿತಂತೆ ಇಂತಹ ಕಠಿಣ ನಿರ್ಧಾರವನ್ನು ನೀವು ತೆಗೆದುಕೊಂಡಿರುವುದು ಅಷ್ಟರಮಟ್ಟಿಗೆ ಸರಿಯಲ್ಲ ಎಂಬುದಾಗಿ ನಿರ್ಮಾಪಕರಿಗೆ ಹೇಳುತ್ತಾರೆ.

ಕೊನೆಗೂ ಪಾರ್ವತಮ್ಮ ರಾಜಕುಮಾರ್ ಅವರು ಹೇಳಿರುವ ಮಾತುಗಳ ಮೂಲಕ ಕರ್ನಾಟಕ ಚಿತ್ರರಂಗದ ನಿರ್ಮಾಪಕರ ಮನಸ್ಸು ಬದಲಾಗುತ್ತದೆ. ನಂತರ ಮತ್ತೆ ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ನಿರ್ಮಾಪಕರು ಮತ್ತೊಮ್ಮೆ ಸುದ್ದಿಗೋಷ್ಠಿ ಮಾಡಿ ನಿಖಿತಾ ತುಕ್ರಾಲ್ ರವರ ಮೇಲೆ ಹೇಳಿರುವಂತಹ ಬ್ಯಾನ್ ಅನ್ನು ತೆರವುಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ನಿಜಕ್ಕೂ ಕೂಡ ನಿಖಿತಾ ರವರು ಸಾಕಷ್ಟು ದುಃಖಗಳನ್ನು ಅನುಭವಿಸಬೇಕಾಗಿ ಬಂದಿತ್ತು.

ಸದ್ಯಕ್ಕೆ ನಿಖಿತಾ ರವರು ಕನ್ನಡ ಚಿತ್ರರಂಗ ಸೇರಿದಂತೆ ಬಹುತೇಕ ಎಲ್ಲಾ ಚಿತ್ರರಂಗದಿಂದ ದೂರವಾಗಿದ್ದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸಂಸಾರದಲ್ಲಿಯೇ ಸುಖವಾಗಿದ್ದಾರೆ ಎಂದು ಹೇಳಬಹುದಾಗಿದೆ. ಆದರೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದರು ಈ ಒಂದು ಕಾರಣದಿಂದಾಗಿ ಸಿನಿಮಾ ಕ್ಷೇತ್ರದಿಂದ ಹೊರಬರಬೇಕಾದ ಅಂತಹ ಪರಿಸ್ಥಿತಿಯನ್ನು ತಂದುಕೊಂಡರು. ನಿಖಿತಾ ರವರ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.