ಬಾಕ್ಸ್ ಆಫೀಸ್ ದೂಳೆಬ್ಬಿಸಿ ಮುನ್ನುಗ್ಗುತ್ತಿರುವ ಚಾರ್ಲಿ ಸಿನೇಮಾದಲ್ಲಿ ನಟನೆ ಮಾಡಿರುವ ನಾಯಿಗೆ ನೀಡಿರುವ ಸಂಭಾವನೆ ಎಷ್ಟು ಗೊತ್ತೇ??, ರಕ್ಷಿತ್ ಹೇಳಿದ್ದೇನು ಗೊತ್ತೇ??

23

ಕೆಜಿಎಫ್2 ಬಳಿಕ 777 ಚಾರ್ಲಿ ಸಿನಿಮಾ ಕನ್ನಡ ಚಿತ್ರರಂಗವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಿದೆ ಎಂದರೆ ತಪ್ಪಾಗುವುದಿಲ್ಲ. ಚಾರ್ಲಿ ಸಿನಿಮಾ ಜೂನ್ 10ರಂದು ಬಿಡುಗಡೆ ಆಗಿದ್ದು, ದೇಶಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾದ ಟ್ರೈಲರ್ ನೋಡಿಯೇ ಸಿನಿಪ್ರಿಯರು ಫಿದಾ ಆಗಿದ್ದರು. ಶ್ವಾನ ಮತ್ತು ಮನುಷ್ಯನ ನಡುವೆ ಇರುವ ಸ್ನೇಹವೆ ಈ ಸಿನಿಮಾದ ಜೀವಾಳ. ಧರ್ಮ ಮತ್ತು ಚಾರ್ಲಿ ಕಥೆ, ಎಲ್ಲರ ಮನಮುಟ್ಟುವಂಥಹ ಕಥೆ ಆಗಿದೆ. ಸಿನಿಮಾ ನೋಡಿದವರೆಲ್ಲರು ಭಾವುಕರಾಗಿ ಕಣ್ಣೀರು ಹಾಕಿರುವುದಂತೂ ಖಂಡಿತ.

ಹಲವರು ಹೇಳಿರುವ ಹಾಗೆ ಸಿನಿಮಾದಲ್ಲಿ ಎಲ್ಲರ ಅಭಿನಯಕ್ಕಿಂತ ಚಾರ್ಲಿ ಶ್ವಾನದ ಅಭಿನಯ ಅದ್ಭುತವಾಗಿ ಮೂಡಿ ಬಂದಿದೆ, ಎಲ್ಲರ ಕಣ್ಣಂಚಲ್ಲು ನೀರು ತರಿಸುತ್ತದೆ ಎನ್ನುವ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗಿದೆ. ಚಾರ್ಲಿ ಮೇಲಿನ ಕ್ರೇಜ್ ಹೇಗಿದೆ ಅಂದ್ರೆ, ಚಾರ್ಲಿ ಶ್ವಾನಕ್ಕೂ ಅಭಿಮಾನಿ ಸಂಘ ಶುರುವಾಗಿದೆ. ಇದೀಗ ಚಾರ್ಲಿ ಬಗ್ಗೆ ಎಲ್ಲರಿಗೂ ಪ್ರೀತಿ ಮೂಡಿದ್ದು, ಶ್ವಾನಗಳ ಮೇಲಿನ ಗೌರವ ಸಾಮಾನ್ಯ ಜನರಿಗೆ ಹೆಚ್ಚಾಗಿದೆ. ದೇಶದ ಮೂಲೆ ಮೂಲೆಗಳಿಂದ ಜನರು ಬಂದು ಚಾರ್ಲಿ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಚಾರ್ಲಿ ಸಿನಿಮಾ ಜನರ ಮನಮುಟ್ಟಿದೆ. ಈ ಸಿನಿಮಾ ಶುರುವಾಗಿ 4 ವರ್ಷ ಕಳೆದಿದ್ದರೂ, ಬಿಡುಗಡೆ ಆಗುವುದು ಬಹಳ ತಡವಾಯಿತು, ಅದಕ್ಕೆ ಒಂದು ಮುಖ್ಯ ಕಾರಣ ಕೋವಿಡ್, ಮತ್ತೊಂದು ಕಾರಣ, ಶ್ವಾನದ ಮೂಡ್.

ಶ್ವಾನ ಟ್ರೇನ್ಡ್ ಆಗಿದ್ದರೂ ಸಹ, ಅದರ ಮೂಡ್ ನೋಡಿಯೇ, ಚಿತ್ರೀಕರಣ ಮಾಡಬೇಕಿತ್ತು, ಹಾಗಾಗಿ ಚಾರ್ಲಿ ಚಿತ್ರೀಕರಣ ಬಹಳ ಸಮಯ ತೆಗೆದುಕೊಂಡಿದೆ. ಇನ್ನು ಸಿನಿಮಾ ಬಿಡುಗಡೆಯಾದ ಬಳಿಕ ಚಾರ್ಲಿಗೆ ರಕ್ಷಿತ್ ಶೆಟ್ಟಿ ಅವರು ಎಷ್ಟು ಸಂಭಾವನೆ ನೀಡಿರಬಹುದು ಎನ್ನುವ ಮಾತುಕತೆ ಶುರುವಾಗಿದ್ದು, ಇದರ ಬಗ್ಗೆ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಉತ್ತರ ನೀಡಿದ್ದಾರೆ. ಸಂದರ್ಶನ ಒಂದರಲ್ಲಿ ರಕ್ಷಿತ್ ಶೆಟ್ಟಿ ಅವರು ಮಾತನಾಡುವಾಗ, ಚಾರ್ಲಿ ಪಡೆದಿರುವ ಸಂಭಾವನೆ ಎಷ್ಟು ಎಂದು ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರ ಕೊಟ್ಟಿರುವ ರಕ್ಷಿತ್ ಅವರು, ಚಾರ್ಲಿಗೆ ಸಂಭಾವನೆ ಒಂದಷ್ಟಾಗಿದ್ದು, ಕೋಟಿ ಹಣ ಆಗಿದೆ..”ಎಂದು ಉತ್ತರ ನೀಡಿದ್ದಾರೆ. ಇದನ್ನು ಕೇಳಿ ಎಲ್ಲರಿಗೂ ಆಶ್ಚರ್ಯ ಆಗಿರುವುದಂತೂ ಖಂಡಿತ. ಇನ್ನು ಚಾರ್ಲಿ ಸಿನಿಮಾದ ಗಳಿಕೆ ವಿಚಾರಕ್ಕೆ ಬರುವುದಾದರೆ, ಈವರೆಗೂ ಸುಮಾರು 20 ಕೋಟಿ ರೂಪಾಯಿ ಗಳಿಕೆ ಮಾಡಿದೆ.