ಎಣ್ಣೆಯಲ್ಲಿ ಕರೆದ ಆಹಾರ ಬಿಡಲು ಸಾದ್ಯವಾಗುತ್ತಿಲ್ಲವೇ? ಹಾಗಿದ್ದರೇ ತಿಂದ ಬಳಿಕ ಈ ಕೆಲಸ ಮಾಡಿ ಏನು ತೊಂದರೆ ಆಗುವುದಿಲ್ಲ.

40

ಎಣ್ಣೆಯಲ್ಲಿ ಕರಿದ ತಿಂಗಳು ಯಾರಿಗೆ ತಾನೇ ಇಷ್ಟ ಆಗುವುದಿಲ್ಲ. ಬಹುತೇಕ ಎಲ್ಲರೂ ಸಹ ಅಂತಹ ತಿಂಡಿಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಎಣ್ಣೆಯಲ್ಲಿ ಫ್ರೈ ಮಾಡಿರುವ ತಿಂಡಿಗಳು ನಾಲಿಗೆಗೆ ಒಳ್ಳೆಯ ರುಚಿಯನ್ನು ಕೊಡುತ್ತದೆ. ಆದರೆ ಈ ಆಹಾರಗಳನ್ನು ಸೇವಿಸಿ ನಂತರ ಕೆಲವರಿಗೆ ಸಮಸ್ಯೆ ಸಹ ಬರುತ್ತದೆ, ಹೊಟ್ಟೆ ಉರಿ ಬರುವುದು , ಅಜೀರ್ಣ, ಹೊಟ್ಟೆ ಭಾರ ಆಗುವುದು ಇಂತಹ ಸಮಸ್ಯೆ ಬರುತ್ತದೆ. ಆದರೆ ಎಣ್ಣೆಯಲ್ಲಿ ಕರಿದ ತಿಂಡಿ ತಿನ್ನಲು ಇಷ್ಟವೂ ಇರುತ್ತದೆ, ಹಾಗಾಗಿ ತಿಂಡಿಗಳನ್ನು ತಿಂದರೂ ಸಹ, ಅಂತಹ ಸಮಸ್ಯೆ ಬರದೆ ಇರುವ ಹಾಗೆ ನೋಡಿಕೊಳ್ಳಲು ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಿದರೆ, ನೀವು ಎಣ್ಣೆಯಲ್ಲಿ ಕರಿದ ತಿಂಡಿ ತಿಂದರೂ ಸಹ ನಿಮಗೆ ಏನು ಆಗುವುದಿಲ್ಲ..

ಮೊಸರು :- ಮೊಸರು ಮತ್ತು ಹುರಿದ ಜೀರಿಗೆಯ ಮಿಶ್ರಣವನ್ನು ಊಟ ನಂತರ ಸೇವಿಸಿದರೆ, ಜೀರ್ಣ ಚೆನ್ನಾಗಿ ಆಗುತ್ತದೆ ಎಂದು ಆಯುರ್ವೇದದ ಪ್ರಕಾರ ಹೇಳಿದ್ದಾರೆ. ಈ ಮೊಸರು ಮತ್ತು ಜೀರಿಗೆ ಮಿಶ್ರಣವು ಲ್ಯಾಕ್ತೋಬ್ಯಾಸಿಲಸ್ ಬ್ಯಾಕ್ಟೀರಿಯಾ, ಆಮ್ಲಿಯತೆಯನ್ನು ಕಡಿಮೆ ಮಾಡುತ್ತದೆ. ಹಾಗೂ ಕರುಳಿನ ಚಲನೆ ಸರಿಹೊಂದುವ ಹಾಗೆ ಮಾಡುತ್ತದೆ.
ಫೈಬರ್ ಇರುವ ಆಹಾರ :- ಎಣ್ಣೆ ಭರಿತ ಆಹಾರ ಸೇವಿಸಿದ ನಂತರ ಮುಂದಿನ ಆಹಾರವನ್ನು ಫೈಬರ್ ಇರುವ ಆಹಾರ ಅಥವಾ ಗೋಧಿ ನುಚ್ಚು ಸೇವಿಸಬೇಕು, ಈ ರೀತಿ ಮಾಡುವುದರಿಂದ ಅಂತಹ ಸಮಸ್ಯೆಗಳು ಆಗುವುದಿಲ್ಲ. ಫೈಬರ್ ಅಂಶವು ಕರುಳನ್ನು ಸ್ವಚ್ಛ ಮಾಡುತ್ತದೆ. ಹಾಗೂ ಫೈಬರ್ ಇರುವ ಆಹಾರಗಳು, ಹೆಚ್ಚಿನ ಸಮಯದವರೆಗೂ ಹೊಟ್ಟೆ ತುಂಬಿರುವ ಹಾಗೆ ಕಾಣುತ್ತದೆ.
ಗ್ರೀನ್ ಟೀ :- ನೀರಿನ ಬದಲಾಗಿ ಗ್ರೀನ್ ಟೀ ಸೇವಿಸಬಹುದು, ಇದರಲ್ಲಿ ಫ್ಲೇವನಾಯ್ಡ್ ಇರುವ ಕಾರಣ ನಿರೋಧಕವನ್ನು ದೇಹಕ್ಕೆ ಸೇರಿಸುತ್ತದೆ. ಜೀರ್ಣಾಂಗ ವ್ಯವಸ್ಥೆ ಸುಗಮವಾಗಿ ಆಗುವ ಹಾಗೆ ಮಾಡುತ್ತದೆ.

ಉಗುರು ಬೆಚ್ಚಗಿನ ನೀರು ಸೇವಿಸಿ :- ಎಣ್ಣೆಯಲ್ಲಿ ಕರಿದ ಆಹಾರ ಸೇವಿಸಿದ ನಂತರ, ಉಗುರು ಬೆಚ್ಚಗಿನ ನೀರು ಸೇವಿಸಿದರೆ, ಜೀರ್ಣಕ್ರಿಯೆ ವೇಗವಾಗಿ ಸಾಗುತ್ತದೆ. ಎಣ್ಣೆ ಜಿಡ್ಡು ಇರುವ ಪದಾರ್ಥಗಳನ್ನು ಸಣ್ಣದಾದ ಮೃದುವಾಗಿ ವಿಭಜನೆ ಆಗುವ ಹಾಗೆ ಮಾಡುತ್ತದೆ. ಭಾರಿ ಊಟ ಮಾಡಿದ ನಂತರ ನೀರು ಕುಡಿಯದೆ ಇದ್ದರೆ, ನಿಮ್ಮ ಕರುಳಿನಲ್ಲಿ ಆಹಾರವನ್ನು ನೀರನ್ನು ಹೀರಿಕೊಳ್ಳುತ್ತದೆ, ಇದದಿಂದ ಮಲಬದ್ಧತೆ ಆಗಬಹುದು. ಉಗುರು ಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಅಜವೈನ್ ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ.
ಐಸ್ ಕ್ರೀಮ್ ಸೇವಿಸಬಾರದು :- ಎಣ್ಣೆಯ ಪದಾರ್ಥ ಸೇವಿಸಿದ ಬಳಿಕ ತಣ್ಣಗಿರುವ ಐಸ್ ಕ್ರೀಮ್ ಸೇವಿಸಬೇಕು, ಚೆನ್ನಾಗಿರುತ್ತದೆ ಎಂದು ಅನ್ನಿಸುವುದು ಸಹಜ, ಆದರೆ ಐಸ್ ಕ್ರೀಮ್ ತಿನ್ನುವುದರಿಂದ ನಿಮ್ಮ ಕರುಳಿಗೆ ಒಳ್ಳೆಯದಲ್ಲ. ಜೀರ್ಣಕ್ರಿಯೆ ಕಷ್ಟವಾಗುತ್ತದೆ.
ವಾಕಿಂಗ್ :- ಎಣ್ಣೆಯ ಪದಾರ್ಥ ತಿಂದರೂ, ತಿನ್ನದೆ ಇದ್ದರು ಸಹ, ಪ್ರತಿದಿನ ಊಟ ಮಾಡಿದ ಬಳಿಕ 1000 ಹೆಜ್ಜೆ ನಡೆದರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.