ಸಮಂತಾ ನಾಗ ಚೈತನ್ಯ ಒಟ್ಟಿಗೆ ಇದ್ದಾಗ ಪ್ರೀತಿಯಿಂದ ಹಾಕಿಸಿಕೊಂಡ ಟ್ಯಾಟೂ ಕಥೆ ಈಗ ಏನಾಗಿದೆ ಗೊತ್ತೇ??
ನಟಿ ಸಮಂತಾ ಅವರ ಮೈಮೇಲೆ ಮೂರು ಟ್ಯಾಟೂ ಇದೆ. ಟ್ಯಾಟೂ ಗಳೆಲ್ಲಾ ನಾಗಚೈತನ್ಯ ಅವರನ್ನು ಮದುವೆಯಾದ ನಂತರ ಹಾಕಿಸಿಕೊಂಡಿದ್ದರು. ಅವುಗಳಲ್ಲಿ ಒಂದು ಅಕ್ಕಿನೇನಿ ನಾಗಚೈತನ್ಯ ಅವರ ನೆನಪಿಗೆ ಹಾಕಿಸಿಕೊಂಡಿದ್ದು, ಮತ್ತೊಂದು ಇವರಿಬ್ಬರು ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಯೇ ಮಾಯ ಚೇಸಾವೆ ಸಿನಿಮಾ ನೆನಪಿಗಾಗಿ. ಇನ್ನೊಂದು ಟ್ಯಾಟೂ ಹಾಗೆ ಹಾಕಿಸಿಕೊಂಡಿದ್ದು ಎನ್ನಲಾಗಿದೆ. ಹಾಗಿದ್ದರೆ ಈಗ, ನಾಗಚೈತನ್ಯ ನೆನಪಿಗಾಗಿ ಹಾಕಿಸಿಕೊಂಡ, ಆ ಟ್ಯಾಟೂ ಗಳ ಕಥೆ ಏನು?
ಸಮಂತಾ ಅವರ ಮೈಮೇಲೆ ಇರುವ ಟ್ಯಾಟೂ ಗಳ ಕಥೆ ಏನು ಎನ್ನುವ ಪ್ರಶ್ನೆ ಮೂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಅಭಿಮಾನಿಗಳ ನಡುವೆ ಭಾರೀ ಚರ್ಚೆ ನಡೆಯುತ್ತಿದೆ. ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ವರೆಗೂ ಎಲ್ಲಾ ಅಭಿಮಾನಿ ವಲಯದಲ್ಲಿ ಇದೇ ಪ್ರಶ್ನೆ ಕೇಳಿಬರುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಸಮಂತಾ ಅವರ ಪಕ್ಕೆಲುಬ ಇರುವ ಜಾಗದಲ್ಲಿ ಹಾಕಿಸಿರುವ ಟ್ಯಾಟೂ, ತುಂಬಾ ಖಾಸಗಿಯಾಗಿದ್ದು, ಆ ಟ್ಯಾಟೋ ಏನಾಗುತ್ತದೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಈಗಲೂ ಆ ಟ್ಯಾಟೂ ಇದೆಯಾ ಇಲ್ಲವಾ ಎನ್ನುವ ಚರ್ಚೆ ಸಹ ದೊಡ್ಡದಾಗಿಯೇ ಸಾಗುತ್ತಿದೆ.

ಇತ್ತೀಚೆಗೆ ಸಮಂತಾ ಹಾಟ್ ಫೋಟೋ ಸೆಷನ್ ಮಾಡಿಸಿದ್ದರು. ಆ ಹೊಸ ಫೋಟೋಶೂಟ್ ನಲ್ಲಿ ಆ ಸ್ಪೆಷಲ್ ಟ್ಯಾಟೂ ಕಾಣಿಸಲಿಲ್ಲ. ಆ ನಂತರ ಆ ಫೋಟೋ ಸೆಷನ್ ನ ವಿಡಿಯೋ ಹೊರಗೆ ಬಂದಿದ್ದು, ಅದರಲ್ಲಿ ಸಹ ಆ ಟ್ಯಾಟೂ ಗುರುತು ಇರಲಿಲ್ಲ, ಹಾಗಾಗಿ ಸಮಂತಾ ಅವರು ಟ್ಯಾಟೂ ತೆಗೆಸಿರಬಹುದು ಎನ್ನಲಾಗುತ್ತಿದೆ. ಆ ಟ್ಯಾಟೂ ನ ವಿಶೇಷತೆ ಏನು ಅಂದ್ರೆ, ಅಕ್ಕಿನೇನಿ ನಾಗಚೈತನ್ಯ ಅವರ ಹೆಸರನ್ನು ಸಮಂತಾ ಟ್ಯಾಟೂ ಹಾಕಿಸಿಕೊಂಡಿದ್ದರು ಸಮಂತಾ. ನಾಗಚೈತನ್ಯ ಜೊತೆ ಅನ್ಯೋನ್ಯ ದಾಂಪತ್ಯ ನಡೆಸುತ್ತಿಡ್ದಾಗ ಪ್ರೀತಿಯಿಂದ ಆ ಟ್ಯಾಟೂ ಹಾಕಿಸಿಕೊಂಡಿದ್ದರು. ಈಗ ಇಬ್ಬರೂ ಕಾನೂನುಬದ್ಧವಾಗಿ ಬೇರ್ಪಟ್ಟಿರುವುದರಿಂದ ಟ್ಯಾಟೂ ತೆಗೆಸಿದ್ದಾರೆ ಎನ್ನಲಾಗುತ್ತಿದೆ.