ತಮ್ಮನ್ನು ತಾವು ಸುಂದರವಾಗಿ ಕಾಣುವಂತೆ ಮಾಡಲು ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿರುವ ನಟಿಯರು ಯಾರ್ಯಾರು ಗೊತ್ತೇ?? ಮೊದಲು ಹೇಗಿದ್ದರೂ ಗೊತ್ತೇ?

43

ನಮಸ್ಕಾರ ಸ್ನೇಹಿತರೇ ಸೆಲೆಬ್ರಿಟಿಗಳಿಗೆ ಏನೇ ಮಾಡಿದರೂ ಕೂಡ ಅದು ಚಿಕ್ಕ ವಿಚಾರವಾಗಿದ್ದರೂ ದೊಡ್ಡಮಟ್ಟದಲ್ಲಿ ಸುದ್ದಿ ಆಗುತ್ತದೆ ಹಾಗೂ ಅವರ ಕುರಿತಂತೆ ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತದೆ. ಅದರಲ್ಲೂ ನಟಿಯರು ಎಂದ ಮೇಲೆ ಅವರ ಸೌಂದರ್ಯ ಕುರಿತಂತೆ ಅವರು ಸಾಕಷ್ಟು ನಿಗಾ ವಹಿಸಬೇಕಾಗುತ್ತದೆ. ಯಾಕೆಂದರೆ ನಟರಿಗೆ ಹೋಲಿಸಿದರೆ ನಟಿಯರಿಗೆ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಸಮಯಾವಕಾಶ ಕಡಿಮೆಯಾಗಿರುತ್ತದೆ. ದೀರ್ಘಕಾಲದವರೆಗೆ ನಟಿಯರು ತಮ್ಮ ಸೌಂದರ್ಯವನ್ನು ಯುವ ನಟಿಯರಿಗೆ ಹೋಲಿಸಿದಂತೆ ಮುಂದುವರಿಸಿಕೊಂಡು ಹೋಗುವುದು ಕಷ್ಟಕರವಾಗಿರುತ್ತದೆ ಇದಕ್ಕಾಗಿ ಅವರು ಕಾಸ್ಮೆಟಿಕ್ ಸರ್ಜರಿ ಗಳನ್ನು ಮಾಡಿಕೊಳ್ಳುತ್ತಾರೆ.

ಇಂದಿನ ವಿಚಾರದಲ್ಲಿ ನಾವು ಸೌಂದರ್ಯವರ್ಧಕ ಸರ್ಜರಿ ಗಳನ್ನು ಮಾಡಿಸಿಕೊಂಡಿರುವ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯರ ಕುರಿತಂತೆ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ನಯನತಾರ; ದಕ್ಷಿಣ ಭಾರತ ಚಿತ್ರರಂಗದ ಸದ್ಯದ ಅನಭಿಶಕ್ತ ರಾಣಿ ಎಂದರೆ ಅದು ನಯನತಾರ. ತಮಿಳು ತೆಲುಗು ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ಕೂಡ ನಟಿಸಿರುವ ಇವರು ಈಗ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಯನತಾರ ರವರು ಕೆಲವು ವರ್ಷಗಳ ಹಿಂದೆ ತಮ್ಮ ತುಟಿಯನ್ನು ಪ್ಲಾಸ್ಟಿಕ್ ಸರ್ಜರಿಗೆ ಒಳಪಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಸಮಂತ ರುತ್ ಪ್ರಭು; ವಿವಾಹ ವಿಚ್ಛೇದನವನ್ನು ಪಡೆದುಕೊಂಡ ಮೇಲೆ ಇಡೀ ಭಾರತೀಯ ಚಿತ್ರರಂಗದಲ್ಲಿ ಆಕರ್ಷಣೆಯ ಕೇಂದ್ರಬಿಂದು ಆಗಿರುವ ಸಮಂತ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಹಿಂದೊಮ್ಮೆ ಸಮಂತ ರವರು ಕೂಡ ತೆಳ್ಳಗೆ ಸ್ಲಿಮ್ ಆಗಿ ಕಾಣಿಸಿಕೊಳ್ಳಲು ಹಲವಾರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂಬುದಾಗಿ ತಿಳಿದುಬಂದಿದೆ.

ಕಾಜಲ್ ಅಗರ್ವಾಲ್; ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗ ಸೇರಿದಂತೆ ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡಮಟ್ಟದಲ್ಲಿ ಸ್ಟಾರ್ ನಟಿಯಾಗಿದ್ದ ಕಾಜಲ್ ಅಗರ್ವಲ್ ಅವರು ಈಗ ಮದುವೆಯಾಗಿ ಮಗುವಿನ ತಾಯಿಯಾಗಿದ್ದಾರೆ. ಇನ್ನು ಇವರು ಸುಂದರವಾಗಿ ಕಾಣ ಬೇಕು ಎನ್ನುವ ದೃಷ್ಟಿಯಲ್ಲಿ ಚಿತ್ರರಂಗದಲ್ಲಿ ಬಹುಬೇಡಿಕೆಯ ಲ್ಲಿದ್ದಾಗ ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು.

ತ್ರಿಶ; ನಟಿ ತ್ರಿಶ ಪ್ರಮುಖವಾಗಿ ತಮಿಳು ಚಿತ್ರರಂಗದ ಮೂಲದವರಾದರೂ ಕೂಡ ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರ ರಂಗದ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ. ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಇರುವವರು ಇಂದಿಗೂ ಕೂಡ ಹರಿಹರೆಯದ ಯುವತಿಯಂತೆ ಕಾಣಿಸುತ್ತಾರೆ ಆದರೆ ಮೊದಲಿಗಿಂತ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ವಿಭಿನ್ನವಾಗಿ ಕಾಣಿಸುತ್ತಾರೆ ಇದೇ ಕಾರಣದಿಂದಾಗಿ ಅವರು ಖಂಡಿತವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ.

ಅನುಷ್ಕ ಶೆಟ್ಟಿ; ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿದ್ದ ಅನುಷ್ಕಾ ಶೆಟ್ಟಿ ರವರು ಸುಂದರವಾಗಿ ಕಾಣಲು ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ ಅದಾದನಂತರ ಕಡಿಮೆ ತೂಕದಲ್ಲಿ ಕಾಣಿಸಿಕೊಳ್ಳಲು ಕೂಡ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಶ್ರುತಿ ಹಾಸನ್; ದಕ್ಷಿಣ ಭಾರತ ಚಿತ್ರರಂಗ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ನಟರ ಜೊತೆಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಕಮಲಹಾಸನ್ ರವರ ಮಗಳಾಗಿರುವ ಶ್ರುತಿ ಹಾಸನ್ ರವರು ಮೂಗು ಹಾಗೂ ತುಟಿಯ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬುದಾಗಿ ಅವರೇ ಖುದ್ದಾಗಿ ಹೇಳಿಕೊಂಡಿದ್ದಾರೆ.

ಕೀರ್ತಿ ಸುರೇಶ್; ಮೊದಲಿನ ಕೀರ್ತಿ ಸುರೇಶ್ ಹಾಗೂ ಇತ್ತೀಚಿನ ದಿನಗಳಲ್ಲಿ ಕಾಣಿಸುತ್ತಿರುವ ಕೀರ್ತಿ ಸುರೇಶ್ ಗೆ ಹೋಲಿಕೆ ಮಾಡಿದರೆ ಸಾಕಷ್ಟು ಬದಲಾವಣೆ ಕಂಡುಬರುತ್ತದೆ ಅದರಲ್ಲಿ ಕೂಡ ಅವರು ತುಟಿಯನ್ನು ಗಮನಿಸಿದರೆ ಖಂಡಿತವಾಗಿ ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿದ್ದಾರೆ ಎಂಬುದಾಗಿ ತಿಳಿದುಬರುತ್ತದೆ.

ಶ್ರೀಯಾ ಶರಣ್; ಹಲವಾರು ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ಹಲವಾರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಾಯಕ ನಟಿ ಶ್ರೀಯಾ ಶರಣ್ ತಾವು ಸುಂದರವಾಗಿ ಕಾಣಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬುದಾಗಿ ಮೊದಲಿನ ಹಾಗೂ ಇತ್ತೀಚಿನ ಫೋಟೋಗಳನ್ನು ಹೋಲಿಕೆ ಮಾಡಿದಾಗ ತಿಳಿದುಬರುತ್ತದೆ. ಇವರಿಷ್ಟು ಜನ ನಟಿಯರು ಸೌಂದರ್ಯ ವರ್ಧನೆಗಾಗಿ ಪ್ಲಾಸ್ಟಿಕ್ ಸರ್ಜರಿಯ ಮೊರೆಹೋಗಿದ್ದಾರೆ ಎಂಬುದಾಗಿ ತಿಳಿದುಬರುತ್ತದೆ.