ಇದಕ್ಕಿಂತ ಉತ್ತಮ ಶೋ ಮೂಲಕ ಮುಂದೆ ಬರುತ್ತೇನೆ ಎಂದ ಅನುಪಮಾ: ರಾಜರಾಣಿ 2 ನಲ್ಲಿ ಕಾಣಿಸಿಕೊಳ್ಳದೆ ಇರುವುದಕ್ಕೆ ನೇರವಾಗಿ ಹೇಳಿದ್ದೇನು ಗೊತ್ತೇ??

27

ರಾಜ ರಾಣಿ ಶೋ ಕನ್ನಡ ಕಿರುತೆರೆ ವೀಕ್ಷಕರಿಗೆ ಬಹಳಷ್ಟು ಮನರಂಜನೆ ನೀಡಿರುವ ಕಾರ್ಯಕ್ರಮಗಳಲ್ಲಿ ಒಂದು, ಈ ಶೋ ಕಳೆದ ವರ್ಷ ಶುರುವಾಗಿ, 12 ಸೆಲೆಬ್ರಿಟಿ ಜೋಡಿಗಳು ಸ್ಪರ್ಧಿಗಳಾಗಿ ಪಾಲ್ಗೊಂಡಿದ್ದರು, ಈ ಜೋಡಿಗಳು ಅಭಿಮಾನಿಗಳಿಗೆ ಬಹಳ ಇಷ್ಟವಾಗಿದ್ದರು. ಇದೀಗ ರಾಜ ರಾಣಿ ಶೋ ಸೀಸನ್ 2 ಸಹ ಶುರುವಾಗಿದೆ. ಜೂನ್ 11 ರಂದು ರಾಜ ರಾಣಿ2 ಶೋ ಶುರುವಾಗಿದ್ದು, 12 ಹೊಸ ಸ್ಪರ್ಧಿಗಳು ಬಂದಿದ್ದಾರೆ. ಆದರೆ ರಾಜ ರಾಣಿ2 ಶೋ ನಲ್ಲಿ ಅನುಪಮಾ ಗೌಡ ಅವರು ನಿರೂಪಕಿಯಾಗಿ ಬಂದಿಲ್ಲ, ಇದಕ್ಕೆ ಕಾರಣ ಏನು ಎಂದು ಅಭಿಮಾನಿಗಳಲ್ಲಿ ಸಹ ಪ್ರಶ್ನೆ ಮೂಡಿತ್ತು, ಅವುಗಳಿಗೆ ಸ್ವತಃ ಅನುಪಮಾ ಅವರೇ ಉತ್ತರ ನೀಡಿದ್ದಾರೆ.

ಅನುಪಮಾ ಗೌಡ ಅವರು ರಾಜ ರಾಣಿ ಶೋ ಮೂಲಕ ಅದ್ಭುತವಾಗಿ ನಿರೂಪಣೆ ಮಾಡಿದ್ದರು, ಅದಾದ ಬಳಿಕ ನನ್ನಮ್ಮ ಸೂಪರ್ ಸ್ಟಾರ್ ಶೋ ಸಹ ಅನುಪಮಾ ಅವರೇ ನಿರೂಪಣೆ ಮಾಡಿದ್ದರು. ಇದೀಗ ರಾಜ ರಾಣಿ2 ಶೋನಲ್ಲಿ ಹೊಸ ನಿರೂಪಕಿ ಬಂದಿದ್ದಾರೆ. ಹಲವರು ಅನುಪಮಾ ಗೌಡ ಅವರು ನಿರೂಪಣೆ ಮಾಡದೆ ಇದ್ದಿದ್ದಕ್ಕೆ ನಿರಾಶೆಗೊಂಡಿದ್ದರು. ಅದಕ್ಕೀಗ ಅನುಪಮಾ ಗೌಡ ಅವರೇ ಉತ್ತರ ನೀಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬರುವ ಮೂಲಕ ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. “ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡುವ ಸಲುವಾಗಿಯೇ ನಾನು ಲೈವ್ ಬಂದಿದ್ದೇನೆ. ರಾಜ ರಾಣಿ ಶೋ ಬಗ್ಗೆ ಬಹುತೇಕ ಎಲ್ಲರೂ ಪ್ರಶ್ನೆ ಕೇಳುತ್ತ ಇದ್ದರು, ಆದರೆ ನಾನು ಸೈಲೆಂಟ್ ಆಗಿದ್ದೆ, ಎಲ್ಲರೂ ಮೆಸೇಜ್ ಮಾಡ್ತಾ ಇದ್ದೀರಾ, ಅದಕ್ಕೆ ನಾನು ಉತ್ತರ ಕೊಡಲು ಬಂದಿದ್ದಾರೆ.

ನಾನು ಬೇರೆ ವಾಹಿನಿಯಲ್ಲಿ ಶೋ ಮಾಡ್ತಾ ಇದ್ದೀನಿ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಅದು ಸುಳ್ಳು ನಾನು ಇನ್ಯಾವುದೇ ಶೋ ಮಾಡ್ತಾ ಇಲ್ಲ. ರಾಜ ರಾಣಿ ಶೋ ಇಂದ ನಾನಾಗೆ ಹೊರಗೆ ಬಂದಿಲ್ಲ, ನನಗೆ ಯಾವುದೇ ಕರೆ ಬರದೇ ಇದ್ದ ಕಾರಣ ನಾನು ಸುಮ್ಮನಾಗಿದ್ದೇನೆ. ನಾನು ಕೂಡ ಪರ್ಸನಲ್ ಕೆಲಸಗಳಲ್ಲಿ ಬ್ಯುಸಿ ಇದ್ದೆ. ನನ್ನ ಕೆಲಸಗಳ ದೊಡ್ಡ ಲಿಸ್ಟ್ ಇದೆ, ಕಾಲ್ ಬಂದಿದ್ದರೆ, ನಾನು ಖಂಡಿತವಾಗಿ ಶೋಗೆ ಬಂದು ಸಂತೋಷವಾಗಿ ನಿರೂಪಣೆ ಮಾಡ್ತಾ ಇದ್ದೆ. ಅಷ್ಟು ಬಿಟ್ಟು ಇನ್ನೇನು ವಿಚಾರ ಇಲ್ಲ, ಇನ್ನು ಕೆಲವು ವಿಚಾರಗಳ ಬಗ್ಗೆ ನಾನು ಮಾತನಾಡೋಕೆ ಇಷ್ಟವಿಲ್ಲ. ಇಲ್ಲಿ ಅವುಗಳ ಬಗ್ಗೆ ಮಾತನಾಡೋದು ಬೇಡ. ನಿಮಗೆಲ್ಲ ನಿರಾಸೆ ಆಗಿದೆ ಎಂದು ನನಗೆ ಗೊತ್ತು, ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಮುಂದಿನ ದಿನಗಳಲ್ಲಿ ಒಳ್ಳೆಯ ಶೋ ಮೂಲಕ ನಿಮ್ಮ ಮುಂದೆ ಬರುತ್ತೇನೆ..” ಎಂದು ಅನುಪಮಾ ಗೌಡ ಹೇಳಿದ್ದಾರೆ.