ಮದುವೆಯಾದ ಮರುದಿನವೇ ನಯನತಾರ ಶಾಕ್ ನೀಡಿದ ಆಂಧ್ರಪ್ರದೇಶ: ಇವೆಲ್ಲ ನಿಮಗೆ ಬೇಕಿತ್ತೆ ಎಂದ ಅಭಿಮಾನಿಗಳು. – ಯಾಕೆ ಗೊತ್ತೇ?

25

ನಟಿ ನಾಯನತಾರ ಮದುವೆಯಾದ ಸಂತೋಷದಲ್ಲಿದ್ದರೆ, ಮದುವೆ ಮದುವೆ ನಡೆದ ಮರುದಿನವೇ, ತಿರುಪತಿಯ ಟಿಟಿಡಿ ಇವರಿಗೆ ಶಾಕ್ ನೀಡಿದೆ. ಇದೀಗ ದೇವಸ್ಥಾನದ ಟಿಟಿಡಿ ಸಂಸ್ಥೆ ನಟಿ ನಯನತಾರ ಅವರ ವಿರುದ್ಧ ನೋಟಿಸ್ ಜಾರಿ ಮಾಡಿದೆ. ಇದಕ್ಕೆ ಕಾರಣ ಏನು ಎಂದು ತಿಳಿಸುತ್ತೇವೆ ನೋಡಿ. ನಟಿ ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರ ಮದುವೆ ಜೂನ್9 ರಂದು ಮಹಾಬಲಿಪುರಂನ ಐಷಾರಾಮಿ ರೆಸಾರ್ಟ್ ನಲ್ಲಿ ನಡೆಯಿತು. ಇವರಿಬ್ಬರು ತಿರುಪತಿ ಬಾಲಾಜಿಯ ಭಕ್ತರಾಗಿರುವ ಕಾರಣ ಮದುವೆಯಾದ ಮರುದಿನವೇ ಈ ಜೋಡಿ ತಿರುಪತಿಗೆ ಭೇಟಿ ನೀಡಿದೆ.

ತಿರುಪತಿ ದೇವಸ್ಥಾನದ ಬೀದಿಗಳಲ್ಲಿ ಚಪ್ಪಲಿ ಧರಿಸಿ ನಾಯನತಾಫ ಅವರು ಓಡಾಡಿರುವ ವಿಡಿಯೋ ಒಂದು ವೈರಲ್ ಆಗಿದೆ ಜೊತೆಗೆ ದೇವಸ್ಥಾನದ ಗಾಳಿಗೋಪುರದ ಎದುರು ಫೋಟೋಶೂಟ್ ಆಯೋಜಿಸಿದ್ದರು ಎಂದು ಸಹ ತಿಳಿದುಬಂದಿದ್ದು, ಈ ರೀತಿ ಮಾಡಿರುವುದಕ್ಕೆ ಕಠಿಣ ವಿರೋಧ ವ್ಯಕ್ತವಾಗಿದೆ. ದೇವಸ್ಥಾನದ ಬೀದಿಗಳಲ್ಲಿ ಚಪ್ಪಲಿ ಧರಿಸಿ ಓಡಾಡುವ ಹಾಗಿಲ್ಲ ಎನ್ನುವ ನಿಯಮ ಇದೆ, ಆ ನಿಯಮ ಮೀರಿ ಲಕ್ಷಾಂತರ ಭಕ್ತಾದಿಗಳ ನಂಬಿಕೆಗೆ ಧಕ್ಕೆ ತಂದಿದ್ದಾರೆ ನಯನತಾರ ಎನ್ನುವ ಕಾರಣಕ್ಕೆ ಅವರ ವಿರುದ್ಧ ನೋಟಿಸ್ ಸಹ ಜಾರಿ ಮಾಡಲಾಗಿದೆ ಎಂದು ಟಿಟಿಡಿ ಸಿ.ವಿ.ಎಸ್.ಒ ನಂದ ಕಿಶೋರ್ ಹೇಳಿದ್ದಾರೆ. ಇನ್ನು ಚಪ್ಪಲಿ ಧರಿಸಿ ನಡೆದಿದ್ದು, ಮತ್ತು 90ರ ದಶಕದ ರೀತಿಯಲ್ಲಿ ಫೋಟೋಶೂಟ್ ಆಯೋಜಿಸಿದ್ದಕ್ಕೆ ನಯನತಾರ ಅವರನ್ನು ಪ್ರಶ್ನೆ ಮಾಡಲಾಗಿದೆಯಂತೆ ಎಂದು ಟಿಟಿಡಿ ಸಿಬ್ಬಂದಿಗಳ ಮೂಲಕ ತಿಳಿದುಬಂದಿದೆ.

ನೋಟೀಸ್ ಗೆ ನಯನತಾರ ಏನು ಉತ್ತರ ಕೊಡುತ್ತಾರೆ ಎನ್ನುವುದರ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ. ಈ ರೀತಿ ಆಗಿ ಟಿಟಿಡಿ ಇಂದ ನೋಟೀಸ್ ಸಿಕ್ಕಿರುವ ಕಾರಣ ನಯನತಾರ ಅವರ ಪತಿ ವಿಘ್ನೇಶ್ ಶಿವನ್ ಅವರು ಇದೀಗ ತಮ್ಮಿಂದ ಆದ ತಪ್ಪಿಗೆ ಬಹಿರಂಗ ಪತ್ರ ಬರೆಯುವ ಮೂಲಕ ಕ್ಷಮೆ ಕೇಳಿದ್ದಾರೆ, ತಮ್ಮಿಬ್ಬರಿಗೂ ತಿರುಪತಿಯ ಬಾಲಾಜಿ ದೇವರ ಮೇಲೆ ಬಹಳ ಭಕ್ತಿ ಇದೆ, ಮದುವೆಯನ್ನು ಅಲ್ಲೇ ಮಾಡಿಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದಾಗಿಯೂ, ಕಾರಣಾಂತರಗಳಿಂದ ಮದುವೆಯಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿ, ಮದುವೆ ಬಳಿಕ ನೇರವಾಗಿ ಮಂಟಪದಿಂದ ದೇವರ ದರ್ಶನ ಪಡೆಯಲು ಬಂದಿದ್ದು, ಅಲ್ಲಿ ಬಂದರೆ ತಮ್ಮ ಮದುವೆ ಕಂಪ್ಲೀಟ್ ಆಯಿತು ಎನ್ನುವ ಭಾವನೆ ಇರುವ ಕಾರಣ, ತಮ್ಮ ಮದುವೆಯ ಒಂದು ಸುಂದರವಾದ ನೆನಪಿಗಾಗಿ ಫೋಟೋ ತೆಗಸಿಕೊಳ್ಳುವ ಪ್ಲಾನ್ ಇತ್ತು, ಆದರೆ ಮೊದಲಿಗೆ ಎಲ್ಲಾ ಭಕ್ತರು ಇದ್ದ ಕಾರಣ, ಹೊರಬಂದು ಮತ್ತೊಮ್ಮೆ, ಒಂದು ಫೋಟೋ ತೆಗೆಸಿಕೊಳ್ಳಲು ಬರುವಾಗ, ಅಚಾತುರ್ಯದಿಂದ ಕಾಲಿನಲ್ಲಿ ಚಪ್ಪಲಿ ಇದ್ದಿದ್ದನ್ನು ಗಮನಿಸಿಲ್ಲ, ಎಂದು ಹೇಳಿರುವ ವಿಘ್ನೇಶ್ ಶಿವನ್ ಅವರು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.