ರಾಹುಲ್ ರವರ ಚಡ್ಡಿ ಜಾಹಿರಾತು ನೋಡಿ, ಖ್ಯಾತ ನಟಿ ಹೇಳಿದ್ದೇನು ಗೊತ್ತೇ?? ಇನ್ನು ಏನ್ ಏನ್ ಕೇಳ್ಬೇಕು ಎಂದ ಜನ.

12

ಸೆಲೆಬ್ರಿಟಿಗಳು ಹಾಗೂ ಕ್ರಿಕೆಟಿಗರು ಸಾಮಾನ್ಯವಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಹಲವು ಬ್ರ್ಯಾಂಡ್ ಗಳಿಗೆ ಅಂಬಾಸಿಡರ್ ಆಗಿರುತ್ತಾರೆ. ಕೂಲ್ ಡ್ರಿಂಕ್ಸ್ ಗಳು, ಗೇಮ್ಸ್ ಗಳು, ಬಟ್ಟೆಯ ಬ್ರ್ಯಾಂಡ್ ಗಳು, ಹೀಗೆ ಅನೇಕ ಬ್ರ್ಯಾಂಡ್ ಗಳಿಗೆ ಅಂಬಾಸಿಡರ್ ಆಗಿರುತ್ತಾರೆ. ಇದೀಗ ನಮ್ಮ ಕರ್ನಾಟಕದ ಪ್ರತಿಭೆ ಕೆ.ಎಲ್.ರಾಹುಲ್ ಅವರು ಒಳಉಡುಪಿನ ಬ್ರ್ಯಾಂಡ್ ಒಂದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ಅವುಗಳ ಜಾಹೀರಾತಿನ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರಾಹುಲ್ ಅವರ ಈ ಜಾಹೀರಾತಿನ ಬಗ್ಗೆ ಬಹುಭಾಷಾ ಹಿರಿಯನಟಿ ಕಸ್ತೂರಿ ಅವರು ಪ್ರತಿಕ್ರಿಯೆ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೆ.ಎಲ್.ರಾಹುಲ್ ಈ ವರ್ಷ ಐಪಿಎಲ್ ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿದರು, ಲಕ್ನೌ ತಂಡದ ಕ್ಯಾಪ್ಟನ್ ಆಗಿ, ಈ ವರ್ಷ ರಾಹುಲ್ ಅವರು ಒಳ್ಳೆಯ ಪ್ರದರ್ಶನ ನೀಡಿದ ಬಳಿಕ, ಇದೀಗ ಸೌತ್ ಆಫ್ರಿಕಾ ತಂಡದ ವಿರುದ್ಧದ ಸರಣಿ ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ರಾಹುಲ್. ಇದರ ನಡುವೆ ಒಳಉಡುಪಿನ ಜಾಹೀರಾತಿನಲ್ಲು ಕಾಣಿಸಿಕೊಂಡಿದ್ದು, ಈ ಜಾಹೀರಾತಿನ ಫೋಟೋಗಳನ್ನು ಸಹ ಶೇರ್ ಮಾಡಿದ್ದರು. ರಾಹುಲ್ ಅವರು ಈ ಮೊದಲು ಸಹ ಸಾಕಷ್ಟು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ, ಆದರೆ ಈ ಜಾಹಿರಾತು ಬೇರೆ ರೀತಿಯಲ್ಲೇ ವೈರಲ್ ಆಗಿದೆ. ಖ್ಯಾತ ನಟಿ ಕಸ್ತೂರಿ ಅವರು ಟ್ವೀಟ್ ಮೂಲಕ ರಾಹುಲ್ ಅವರ ಜಾಹೀರಾತಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

“ಸಾಮಾನ್ಯವಾಗಿ ಕ್ರಿಕೆಟಿಗರು ಆನ್ ಲೈನ್ ಗೇಮ್ಸ್ , ಕೂಲ್ ಡ್ರಿಂಕ್ಸ್, ಚಿಪ್ಸ್, ಬಟ್ಟೆ ಬ್ರ್ಯಾಂಡ್ ಗಳ ಜಾಹೀರಾತು ಮತ್ತು ಪ್ರಚಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಒಳಉಡುಪುಗಳ ಬ್ರ್ಯಾಂಡ್ ಅಂಬಾಸಿಡರ್ ಆಗಲು ಕ್ರಿಕೆಟಿಗರು ನಾಚಿಕೆ ಪಟ್ಟುಕೊಳ್ಳುತ್ತಾರೆ. ಆದರೆ ರಾಹುಲ್ ಅವರು ಯಾವುದೇ ಯೋಚನೆ ಇಲ್ಲದೆ, ಒಳಉಡುಪಿನ ಬ್ರ್ಯಾಂಡ್ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಕ್ಸರ್ ಗಳಲ್ಲಿ ಅವರನ್ನು ನೋಡಲು ಸಂತೋಷವಾಯಿತು. ಪುರುಷರ ಒಳಉಡುಪುಗಳ ಬ್ರ್ಯಾಂಡ್ ನಲ್ಲಿ ಇದು ಅತ್ಯುತ್ತಮವಾಗಿರುತ್ತದೆ ಎಂದು ನಾನು ನಂಬುತ್ತೇನೆ” ಎಂದು ನಟಿ ಕಸ್ತೂರಿ ಟ್ವೀಟ್ ಮಾಡಿದ್ದು, ಇದೀಗ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.