ಇದ್ದಕ್ಕಿದ್ದ ಹಾಗೆ ತನ್ನ ನಾಯಕತ್ವದ ಕುರಿತು ಮಾತನಾಡಿದ ನಾನು ನಾಯಕನಾಗಿರಲಿಲ್ಲ ಲೀಡರ್ ಆಗಿದ್ದೆ ಎಂದು ಹೇಳಿಕೆ ನೀಡಿದ ಗಂಗೂಲಿ. ಯಾಕೆ ಗೊತ್ತೇ?
ಸೌರವ್ ಗಂಗೂಲಿ ಅವರು ಭಾರತ ಕ್ರಿಕೆಟ್ ತಂಡ ಕಂಡಿರುವ ಅತ್ಯದ್ಭುತ ಪ್ರತಿಭೆಗಳಲ್ಲಿ ಒಬ್ಬರು. ಇವರು ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ಕ್ರಿಕೆಟ್ ಕ್ಯಾಪ್ಟನ್ ಗಳಲ್ಲಿ ಇವರು ಸಹ ಒಬ್ಬರು. ಗಂಗೂಲಿ ಅವರ ನಾಯಕತ್ವದಲ್ಲಿ ಹಿರಿಯ ಆಟಗಾರರು ಮತ್ತು ಯುವ ಆಟಗಾರರು ಎಲ್ಲರೂ ಸಹ ಉತ್ತಮವಾದ ಪ್ರದರ್ಶನ ನೀಡಿದ್ದಾರೆ. ಇದೀಗ ಗಂಗೂಲಿ ಅವರು ತಮ್ಮ ನಾಯಕತ್ವದ ಬಗ್ಗೆ ಕೆಲವು ಮಾತುಗಳನ್ನಾಡಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಕಾರಣದಿಂದ ಭಾರತ ಕ್ರಿಕೆಟ್ ತಂಡ ಅಂಧಪತನ ಆಗಿದ್ದಾಗ, ತಂಡವನ್ನು ಮರಳಿ ಫಾರ್ಮ್ ಗೆ ತಂದವರು ಸೌರವ್ ಗಂಗೂಲಿ ಅವರು. ಗಂಗೂಲಿ ಅವರು ಕ್ಯಾಪ್ಟನ್ ಆಗಿದ್ದಾಗ, ಜೊತೆಗಿದ್ದ ಲೆಜೆಂಡ್ ಆಟಗಾರರಾದ ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್, ರಾಹುಲ್ ದ್ರಾವಿಡ್ ಅವರ ಜೊತೆಗೆ ಸ್ಪರ್ಧೆ ಮಾಡುವ ಯೋಚನೆ ಇರಲಿಲ್ಲ ಎಂದು ಹೇಳಿದ್ದಾರೆ. ಗಂಗೂಲಿ ಅವರು ಕ್ಯಾಪ್ಟನ್ ಆಗಿದ್ದಾಗ, ಇವರ ಕ್ಯಾಪ್ಟನ್ಸಿಯಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅಜರುದ್ದೀನ್ ಎಲ್ಲರೂ ಸಹ ಉತ್ತಮವಾದ ಪ್ರದರ್ಶನ ನೀಡಿದ್ದಾರೆ, ಅದೇ ರೀತಿ ಮೊಹಮ್ಮದ್ ಅಜರುದ್ದೀನ್ ಅವರು ಕ್ಯಾಪ್ಟನ್ ಆಗಿದ್ದಾಗ, ಸೌರವ್ ಗಂಗೂಲಿ ಅವರು ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಇದರ ಬಗ್ಗೆ ಸ್ವತಃ ಸೌರವ್ ಗಂಗೂಲಿ ಅವರು ಮಾತನಾಡಿದ್ದಾರೆ.

ಒಂದು ತಂಡಕ್ಕೆ ನಾಯಕ ಮತ್ತು ಲೀಡರ್ ಎರಡು ಆಗುವುದರಲ್ಲಿ ವ್ಯತ್ಯಾಸ ಇದೆ. ಒಬ್ಬ ನಾಯಕನಾಗಿ ತಂಡದ ಹಿರಿಯರು ಮತ್ತು ಯುವ ಪ್ರತಿಭೆಗಳು ಹೇಗೆ ನಿಮ್ಮ ಮೇಲೆ ನಂಬಿಕೆ ಇಡುತ್ತಾರೆ ಎನ್ನುವುದು ನಿಜವಾದ ಸವಾಲು, ಒಬ್ಬ ನಾಯಕ ಅಂದ್ರೆ ಮೈದಾನದಲ್ಲಿ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎನ್ನುವುದು ಹಾಗೆಯೇ ಒಬ್ಬ ಲೀಡರ್ ಎಂದರೆ ತಂಡವನ್ನು ಹೇಗೆ ಕಟ್ಟುವುದು ಎನ್ನುವ ನಂಬಿಕೆ ಇತ್ತು, ಅದರಿಂದಲೇ ನಾನು ಸಚಿನ್ ಅವರೊಡನೆ, ದ್ರಾವಿಡ್ ಅವರೊಡನೆ ಸ್ಪರ್ಧಿಯಾಗಿ ನಿಲ್ಲಲಿಲ್ಲ, ಒಬ್ಬ ಲೀಡರ್ ಆಗಿ ನಾನು ಅವರೊಡನೆ ಇದ್ದೆ. ಅವರ ಜೊತೆ ಜವಾಬ್ದಾರಿಗಳನ್ನು ಹಂಚಿಕೊಂಡಿದ್ದೆ ಎಂದು ಗಂಗೂಲಿ ಅವರು ಹೇಳಿದ್ದಾರೆ. ಇಷ್ಟೇ ಅಲ್ಲದೆ, ಗಂಗೂಲಿ ಅವರು ನಾಯಕನಾಗಿದ್ದಾಗ, ಭಾರತ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಸಹ ಕಂಡಿತ್ತು. ಇವರ ನಾಯಕತ್ವದಲ್ಲಿ, 146 ಒನ್ ಡೇ ಕ್ರಿಕೆಟ್ ಮ್ಯಾಚ್ ಗಳನ್ನಾಡಿದ್ದು, ಅವುಗಳಲ್ಲಿ 76 ಮ್ಯಾಚ್ ಗಳನ್ನು ಗೆದ್ದು, 65 ಮ್ಯಾಚ್ ಗಳಲ್ಲಿ ಭಾರತ ತಂಡ ಸೋತಿತ್ತು. ಹಾಗೂ 49 ಟೆಸ್ಟ್ ಮ್ಯಾಚ್ ಗಳಲ್ಲಿ 21 ಮ್ಯಾಚ್ ಗಳನ್ನು ಗೆದ್ದು, 15 ಮ್ಯಾಚ್ ಗಳು ಡ್ರಾ ಆಗಿದ್ದು, 13 ಮ್ಯಾಚ್ ಗಳನ್ನು ಸೋತಿದೆ.