ಬಂತು ಅನುಷ್ಕಾ ಸರದಿ, ಕ್ರಿಕೆಟ್ ಲೋಕದ ಒಂದು ಕಾಲದ ಕಿಂಗ್ ಕೊಹ್ಲಿ ರವರ ಪತ್ನಿ ಅನುಷ್ಕಾ ರವರು ಧರಿಸಿರುವ ಬಟ್ಟೆಯ ಬೆಲೆ ಎಷ್ಟು ಗೊತ್ತೇ?
ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ರಬ್ ನೆ ಬನಾ ದಿ ಜೋಡಿ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟರು. ನಂತರ ಹಲವಾರು ಯಶಸ್ವಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಯಶಸ್ಸು ಪಡೆದರು. ಬಾಲಿವುಡ್ ನ ಘಟಾನುಘಟಿಗಳ ಜೊತೆ ನಟಿಸಿ ಕೀರ್ತಿ ಗಳಿಸಿದರು. ನಂತರ ಹೆಸರಾಂತ ಕ್ರಿಕೆಟಿಗ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರನ್ನು ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದಾರೆ. ಒಬ್ಬರನ್ನೊಬ್ಬರು ಬಹಳ ಪ್ರೀತಿಸುವ ಈ ದಂಪತಿ, ಆಗಾಗ ಜೊತೆಯಾಗಿ ಸಮಯ ಕಳೆಯುತ್ತಾರೆ.
ವಿರಾಟ್ ಕೋಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಈಗ ಜೊತೆಯಾಗಿ ಸಮಯ ಕಳೆಯಲು ಹೆಚ್ಚಿನ ಸಮಯ ಸಿಕ್ಕಿದೆ. ಐಪಿಎಲ್ ಪಂದ್ಯಗಳು ಮುಗಿದ ಬಳಿಕ ವಿರಾಟ್ ಕೋಹ್ಲಿ ಅವರಿಗೆ ಬಿಸಿಸಿಐ ರೆಸ್ಟ್ ನೀಡಿದೆ. ಸೌತ್ ಆಫ್ರಿಕಾ ಸರಣಿ ಪಂದ್ಯಗಳಲ್ಲಿ ವಿರಾಟ್ ಕೋಹ್ಲಿ ಅವರು ಭಾಗವಹಿಸುತ್ತಿಲ್ಲ, ಹಾಗಾಗಿ ವಿರಾಟ್ ಕೋಹ್ಲಿ ಅವರು ಮತ್ತು ಅನುಷ್ಕಾ ಶೆಟ್ಟಿ ಇಬ್ಬರು ಸಹ ಸುಂದರವಾದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ವಿರಾಟ್ ಕೋಹ್ಲಿ ಅವರು ಹಾಗೂ ಅನುಷ್ಕಾ ಇಬ್ಬರು ಜೊತೆಯಾಗಿರುವ ಫೋಟೋ ಒಂದನ್ನು ಅನುಷ್ಕಾ ಶರ್ಮಾ ಶೇರ್ ಮಾಡಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಅಪ್ಡೇಟ್ ಮಾಡಿರುವ ಸ್ಟೋರಿಯಲ್ಲಿ ಅನುಷ್ಕಾ ಶರ್ಮಾ ಅವರು ಧರಿಸಿರುವ ಡ್ರೆಸ್ ನ ಬೆಲೆ ಈಗ ಸುದ್ದಿಯಾಗುತ್ತಿದೆ. ಇದು ವಿರಾಟ್ ಕೋಹ್ಲಿ ಅವರು ಅನುಷ್ಕಾ ಅವರಿಗೆ ಗಿಡ್ತ್ ನೀಡಿರುವ ಡ್ರೆಸ್ ಆಗಿದ್ದು, ಈ ಡ್ರೆಸ್ ನ ಬೆಲೆ ಬರೋಬ್ಬರಿ 13,800 ರೂಪಾಯಿಗಳು ಎನ್ನಲಾಗಿದೆ. ಈ ಜೋಡಿ ಆಗಾಗ ಒಬ್ಬರಿಗೊಬ್ಬರು ಗಿಫ್ಟ್ ನೀಡುತ್ತಿರುತ್ತಾರೆ. ವಾಚ್, ಬೈಕ್, ಕಾರ್ ಹೀಗೆ ಗಿಫ್ಟ್ ಕೊಡುತ್ತಾರೆ. ಇದೀಗ ವಿರಾಟ್ ಕೋಹ್ಲಿ ಅವರು ಅನುಷ್ಕಾ ಶರ್ಮಾ ಅವರಿಗೆ ದುಬಾರಿ ಬಟ್ಟೆ ನೀಡಿದ್ದಾರೆ. ಇದರ ಬೆಲೆ ಈಗ ಭಾರಿ ಚರ್ಚೆಯಾಗುತ್ತಿದೆ.