ಮದುವೆಯಾದ ಕೂಡಲೇ ಪತಿಗೆ ಕೋಟಿ ಕೋಟಿ ಬೆಲೆಬಾಳುವ ಉಡುಗೊರೆ ಕೊಟ್ಟ ನಯನತಾರ. ಎಷ್ಟು ಕೋಟಿ ಹಾಗೂ ಏನು ಗೊತ್ತೇ??
ಕಾಲಿವುಡ್ ನಲ್ಲಿ ಈಗ ಹೆಚ್ಚಾಗಿ ಚರ್ಚೆ ಆಗುತ್ತಿರುವುದು ಹೊಸ ಜೋಡಿಗಳಾದ ನಟಿ ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರ ಬಗ್ಗೆ. ನಯನತಾರ ಮತ್ತು ವಿಘ್ನೇಶ್ ಶಿವನ್ ಅವರು ಮೊನ್ನೆ ಅಂದರೆ ಜೂನ್ 9ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಯ ಮದುವೆ ಯಾವಾಗ ನಡೆಯುತ್ತದೆ ಎಂದು ಅಭಿಮಾನಿಗಳು ಕಾದಿದ್ದರು, ಇದೀಗ ಕೊನೆಗೂ ಈ ಜೋಡಿಯ ಮದುವೆ ನಡೆದಿದೆ. ನಯನತಾರ ಹಾಗೂ ವಿಘ್ನೇಶ್ ಶಿವನ್ ಜೋಡಿಯ ಮದುವೆ, ಜೂನ್ 9ರಂದು ಮಹಾಬಲಿಪುರಂ ನಲ್ಲಿ, ಕುಟುಂಬದವರು ಹಾಗೂ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ನಡೆದಿದೆ. ಈ ಮದುವೆ ನಡೆದ ಬಳಿಕ, ಈಗ ಈ ಜೋಡಿಯ ಬಗ್ಗೆ ಸುದ್ದಿಯೊಂದು ಜೋರಾಗಿಯೇ ಸದ್ದು ಮಾಡುತ್ತಿದೆ..
ನಯನತಾರ ಮತ್ತು ವಿಘ್ನೇಶ್ ಶಿವನ್ ಜೋಡಿಯ ಮದುವೆ, ಸಿನಿಮಾ ಸ್ಟೈಲ್ ನಲ್ಲೇ ಅದ್ಧೂರಿಯಾಗಿ ನಡೆಯಿತು. ಈ ಜೋಡಿಯ ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ನೋಡಿ ಅಭಿಮಾನಿಗಳು ಕೂಡ ಸಂತೋಷಪಟ್ಟರು. ಇದೀಗ ಮದುವೆಯಾಗಿ ಒಂದೆರಡು ದಿನ ಕಳೆಯುವ ಮೊದಲೇ, ನಯನತಾರ ಅವರು ವಿಘ್ನೇಶ್ ಶಿವನ್ ಅವರಿಗೆ ದುಬಾರಿ ಬೆಲೆಯ ಉಡುಗೊರೆ ನೀಡಿದ್ದಾರೆ ನೀಡಿದ್ದಾರೆ ಎನ್ನುವ ಸುದ್ದಿ, ಜೋರಾಗಿಯೇ ಸದ್ದು ಮಾಡುತ್ತಿದೆ. ನಯನತಾರ ಅವರು ಭಾರಿ ದುಬಾರಿ ಬೆಲೆಯ ಉಡುಗೊರೆಯನ್ನು ವಿಘ್ನೇಶ್ ಶಿವನ್ ಅವರಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ ವಿಘ್ನೇಶ್ ಅವರ ಕುಟುಂಬ ಮತ್ತು ತಂಗಿಗೂ ಸಹ ದೊಡ್ಡ ಉಡುಗೊರೆಗಳನ್ನೇ ನೀಡಿರುವುದು, ಈಗ ಹೆಚ್ಚಾಗಿ ಚರ್ಚೆಯಾಗುತ್ತಿದೆ.

ಇದೀಗ ಸಿಕ್ಕಿರುವ ಮಾಹಿತಿಯ ಪ್ರಕಾರ, ನಯನತಾರ ಅವರು ವಿಘ್ನೇಶ್ ಶಿವನ್ ಅವರಿಗೆ 20 ಕೋಟಿ ರೂಪಾಯಿ ಬೆಲೆ ಬಾಳುವ, ಬಂಗಲೆಯನ್ನು ವಿಘ್ನೇಶ್ ಶಿವನ್ ಅವರಿಗೆ ಗಿಫ್ಟ್ ಆಗಿ ನೀಡಿದ್ದಾರಂತೆ. ಈ ಮೊದಲೇ ಖರೀದಿ ಮಾಡಿದ್ದ ಮನೆಯನ್ನು ವಿಘ್ನೇಶ್ ಶಿವನ್ ಅವರ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿದ್ದಾರಂತೆ ನಟಿ ನಯನತಾರ, ಜೊತೆಗೆ ವಿಘ್ನೇಶ್ ಶಿವನ್ ಅವರ ತಂಗಿಗೆ, ಸುಮಾರು 30 ಬಗೆಯ ಬೇರೆ ಬೇರೆ ಬಂಗಾರದ ಒಡವೆಗಳನ್ನು ನೀಡಿದ್ದಾರಂತೆ. ಜೊತೆಗೆ ವಿಘ್ನೇಶ್ ಶಿವನ್ ಅವರ ಕುಟುಂಬದವರಿಗೂ ದುಬಾರಿ ಉಡುಗೊರೆಗಳನ್ನೇ ನೀಡಿದ್ದಾರಂತೆ. ವಿಘ್ನೇಶ್ ಶಿವನ್ ಅವರು ಸಹ ಪತ್ನಿ ನಯನತಾರ ಅವರಿಗೆ ಬರೊಬ್ಬರಿ 3 ಕೋಟಿ ಬೆಲೆಬಾಳುವಷ್ಟು ಒಡವೆಗಳನ್ನು ನೀಡಿದ್ದು, 5ಕೋಟಿ ಬೆಲೆ ಬಾಳುವ ವಜ್ರದ ಉಂಗುರವನ್ನು ಸಹ ನೀಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ, ಈ ವಿಚಾರಗಳು ಸಧ್ಯಕ್ಕೆ ದೊಡ್ಡದಾಗಿ ಚರ್ಚೆಯಾಗುತ್ತಿದೆ.