ತನಗಿಂತ ಹೆಚ್ಚು ಕಡಿಮೆ ಅರ್ಧ ವಯಸ್ಸಿನ ಯುವತಿಯನ್ನು ಮದುವೆಯಾಳ ಭಾರತದ ಮಾಜಿ ಆಟಗಾರ, ಹನಿಮೂನ್ ಬಗ್ಗೆ ಹೇಳಿದ್ದೇನು ಗೊತ್ತೇ?

38

ಸೆಲೆಬ್ರಿಟಿ ಮದುವೆಗಳು ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತವೆ. ಅದರಲ್ಲೂ ವಯಸ್ಸಿನ ವ್ಯತ್ಯಾಸ ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗುತ್ತಿದೆ. ಇದೀಗ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರೊಬ್ಬರು, ಇಳಿ ವಯಸ್ಸಿನಲ್ಲಿ ಎರಡನೇ ಮದುವೆಯಾಗಿ ಸುದ್ದಿಯಾಗಿದ್ದಾರೆ, ಇವರ ಮದುವೆ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಇವರ ಮದುವೆ ಇಷ್ಟು ಸುದ್ದಿ ಆಗುತ್ತಿರುವುದು ಯಾಕೆ? ತಿಳಿಸುತ್ತೇವೆ ನೋಡಿ.

ಈಗ ಎರಡನೇ ಮದುವೆ ಆಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ಯಾರು ಅಲ್ಲ, ಅವರು ಅರುಣ್ ಲಾಲ್. ಮೂಲತಃ ಬಂಗಾಳದವರಾದ ಅರುಣ್ ಲಾಲ್ ಅವರು, 1982 ರಿಂದ 1989ರ ವರೆಗೂ ಭಾರತ ಕ್ರಿಕೆಟ್ ತಂಡದ ಪರವಾಗಿ, 16 ಟೆಸ್ಟ್ ಮತ್ತು 13 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಒಳ್ಳೆಯ ಹೆಸರನ್ನು ಸಹ ಪಡೆದುಕೊಂಡಿದ್ದಾರೆ. ಅರುಣ್ ಲಾಲ್ ಅವರಿಗೆ ಈಗ 66 ವರ್ಷ ವಯಸ್ಸು. ಇದೀಗ ಇವರು, ತಮ್ಮ 66ನೇ ವಯಸ್ಸಿನಲ್ಲಿ ಎರಡನೇ ಮದುವೆ ಆಗಿದ್ದರೆ. ಅರುಣ್ ಲಾಲ್ ಅವರು ಎರಡನೇ ಮದುವೆ ಆಗಿರುವುದು ತಮಗಿಂತ 28 ವರ್ಷ ಚಿಕ್ಕ ಹುಡುಗಿ ಬುಲ್ಬುಲ್ ಜೊತೆ ಎನ್ನುವ ವಿಚಾರ ಈಗ ದೊಡ್ಡದಾಗಿ ಸುದ್ದಿಯಾಗುತ್ತಿದೆ. ಅರುಣ್ ಲಾಲ್ ಅವರು ಮದುವೆ ಬಳಿಕ ಮಾಧ್ಯಮಗಳ ಜೊತೆ ಸಹ ಮಾತನಾಡಿದ್ದಾರೆ.

ಮಾಧ್ಯಮದ ಮುಂದೆ ಮಾತನಾಡಿದ ಅರುಣ್ ಲಾಲ್ ಅವರು, “ನಾನು ಈಗ ಮದುವೆಯಾಗಿದ್ದು ತುಂಬಾ ಸಂತೋಷವಿದೆ. ಬುಲ್ಬುಲ್ ಅವರನ್ನು ತುಂಬಾ ಪ್ರೀತಿಸುತ್ತೇನೆ. ನಮ್ಮ ಜೀವನಕ್ಕೆ ಇದು ಹೊಸ ಅಧ್ಯಾಯ. ನಾವಿಬ್ಬರು ಜೀವನದಲ್ಲಿ ತುಂಬಾ ಸಂತೋಷವಾಗಿರುತ್ತೇವೆ..” ಎಂದು ಸಂತೋಷದ ಮಾತುಗಳನ್ನು ಆಡಿದ್ದಾರೆ, ಜೊತೆಗೆ ತಮ್ಮ ಹನಿಮೂನ್ ಬಗ್ಗೆ ಕೂಡ ಮಾತನಾಡಿ, ರಣಜಿ ಟ್ರೋಫಿಯೇ ನಮ್ಮ ಹನಿಮೂನ್ ಎಂದು ಹೇಳಿದ್ದಾರೆ ಅರುಣ್ ಲಾಲ್. ಪ್ರಸ್ತುತ ಅರುಣ್ ಲಾಲ್ ಅವರು ಬೆಂಗಾಲ್ ರಣಜಿ ಟ್ರೋಫಿ ತಂಡದ ಹೆಡ್ ಕೋಚ್ ಆಗಿದ್ದು, ರಣಜಿ ಟ್ರೋಫಿ ಕ್ವಾಟರ್ ಫಿನಾಲೆಗೆ ತಮ್ಮ ತಂಡವನ್ನು ಬೆಂಬಲಿಸಿ, ಆಟಗಾರರಿಗೆ ಗೈಡೆನ್ಸ್ ನೀಡುತ್ತಿದ್ದಾರೆ. ರಣಜಿ ಟ್ರೋಫಿ ಪಂದ್ಯಗಲ್ಲಿ ಇವರ ಪತ್ನಿ ಬುಲ್ಬುಲ್ ಸಹ ಸಾಥ್ ನೀಡಲಿದ್ದಾರೆ.