ಮದುವೆ ಮುಗಿದ ಕೂಡಲೇ ಕಹಿ ಸುದ್ದಿ ಕೊಡಲು ಸಿದ್ಧವಾಗಿದ್ದಾರೆಯೇ ನಯನತಾರ?? ಕಠಿಣ ನಿರ್ಧಾರಕ್ಕೆ ವಿಜ್ಞೇಶ್ ತಾಯಿ ಕಾರಣನಾ?? ನಡೆಯುತ್ತಿರುವುದಾದರೂ ಏನು ಗೊತ್ತೇ?
ನಟಿ ನಯನತಾರ ಅವರು ತಮ್ಮ ನಟನಾ ಕೌಶಲ್ಯದಿಂದ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಪ್ರಸಿದ್ಧ ಪಡೆದುಕೊಂಡಿದ್ದಾರೆ.. ಸೌಂದರ್ಯ ಮತ್ತು ಅಭಿನಯದಿಂದ ಟಾಪ್ ಹೀರೋಯಿನ್ ಆಗಿ ಈಗಲೂ ಮುಂದುವರಿದಿದ್ದಾರೆ. ಆದರೆ, ಕೆಲ ವರ್ಷಗಳಿಂದ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸುತ್ತಿದ್ದರು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಈ ಮದುವೆಗೆ ವಿಘ್ನೇಶ್ ಶಿವನ್ ಅವರ ತಾಯಿ ಒಂದು ಟ್ವಿಸ್ಟ್ ನೀಡಿದ್ದಾರೆ ಎಂದು ವರದಿಯಾಗಿದೆ. ವಿಘ್ನೇಶ್ ಶಿವನ್ ಅವರ ತಾಯಿ ಹಾಕುವ ಕೆಲವು ಕಂಡೀಷನ್ ಗಳಿಗೆ ಓಕೆ ಹೇಳುವುದಾದರೆ ನಯನತಾರ ಅವರನ್ನು ತಮ್ಮ ಸೊಸೆಯಾಗಿ ಮಾಡಿಕೊಳ್ಳುವುದು ಎಂದು ಹೇಳಿದ್ದರಂತೆ.. ಆ ಕಂಡಿಷನ್ಸ್ ಏನು ಎಂದು ತಿಳಿದುಕೊಳ್ಳೋಣ ಬನ್ನಿ.
ನಯನತಾರಾ ಅವರ ಮೇಲೆ ಅಭಿಮಾನಿಗಳಿಗೆ ಇರುವ ಕ್ರೇಜ್ ಹೇಗಿದೆ ಎಂದು ಎಲ್ಲರಿಗೂ ಗೊತ್ತು.. ತೆಲುಗಿನಲ್ಲಿ ರಜನಿಕಾಂತ್ ಅವರ ಚಂದ್ರಮುಖಿ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿರುವ ಈ ನಟಿ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆ ಸಿನಿಮಾ ಮಾಡಿದ್ದಾರೆ. ನಟನೆ ಮತ್ತು ಸೌಂದರ್ಯದಿಂದ ಉತ್ತಮ ಹೆಸರುಗಳಿಸಿ ಟಾಪ್ ನಾಯಕಿಯಾಗಿ ಮಿಂಚಿದ್ದಾರೆ. ವೃತ್ತಿಬದುಕಿನ ಆರಂಭದಲ್ಲಿ ಪ್ರೀತಿಯಲ್ಲಿ ಬಿದ್ದಿದ್ದ ಈ ಚೆಲುವೆ ನಂತರ ಕಾರಣಾಂತರಗಳಿಂದ ಸುಮ್ಮನಿದ್ದರು. ಅದರ ನಂತರ, ಅವರು ಮತ್ತೂಬ್ಬ ಡ್ಯಾನ್ಸ್ ಮಾಸ್ಟರ್ ಜೊತೆ ರಿಲೇಶನ್ಷಿಪ್ ನಲ್ಲಿದ್ದರು, ಆದರೆ ಅದು ಸಹ ಮುರಿದುಬಿತ್ತು. ಬಳಿಕ ನಯನತಾರ ಅವರು ತನಗಿಂತ ಚಿಕ್ಕವರಾಗಿದ್ದ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸುತ್ತಿದ್ದರು. ಲೇಡಿ ಸೂಪರ್ ಸ್ಟಾರ್ ಎಂದೇ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಸಿದ್ಧಿ ಗಳಿಸಿದ್ದರು. ಇತ್ತೀಚೆಗೆ ತನ್ನ ಗೆಳೆಯ ವಿಘ್ನೇಶ್ ಶಿವನ್ ನಿರ್ದೇಶನದ ಕಾತು ವಾಕುಲಾ ಎರಡು ಕಾದಲ್ ಚಿತ್ರದಲ್ಲಿ ಸಮಂತಾ ಜೊತೆಯಾಗಿ ನಟಿಸಿದರು ನಯನತಾರ.

ಕೆಲ ವರ್ಷಗಳಿಂದ ಟೂರ್ ವೆಕೇಶನ್ ಎಂಜಾಯ್ ಮಾಡುತ್ತಿದ್ದ ನಯನ್ ವಿಘ್ನೇಶ್ ಜೋಡಿ ಮದುವೆಯಾಗಲು ನಿರ್ಧರಿಸಿ, ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ಮದುವೆಗೆ ವಿಘ್ನೇಶ್ ತಾಯಿ ಕೆಲ ಷರತ್ತುಗಳನ್ನು ಹಾಕಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಕುಟುಂಬದ ಸೊಸೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರಂತೆ. ಈ ಷರತ್ತಿಗೆ ನಯನ್ ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇದೇ ನಿಜವಾದರೆ ಇಲ್ಲಿಯವರೆಗೂ ಕಮಿಟ್ ಆಗಿರುವ ಸಿನಿಮಾಗಳ ನಂತರ ಹೊಸ ಸಿನಿಮಾಗಳನ್ನು ನಯನ್ ಒಪ್ಪಿಕೊಳ್ಳದೆ ಇರಬಹುದು. ಈ ವಿಚಾರ ನಯನ್ ಅವರನ್ನು ತುಂಬಾ ಪ್ರೀತಿಸಿದ ಅಭಿಮಾನಿಗಳಿಗೆ ನಿರಾಶೆ ನೀಡಿದೆ.. ಜೂನ್ 9 ರಂದು ಅಂದರೆ ನಿನ್ನೆ ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಜೋಡಿಯ ಮದುವೆ ಅದ್ಧೂರಿಯಾಗಿ ನಡೆದಿದೆ.