ಇದೀಗ ಪ್ರೀತಿಸಿ ಮದುವೆಯಾಗಿರುವ ವಿಜ್ಞೇಶ್ ಹಾಗೂ ನಯನತಾರ ರವರ ನಡುವಿನ ಏಜ್ ಗ್ಯಾಪ್ ಎಷ್ಟು ಗೊತ್ತೇ?? ಇಬ್ಬರಲ್ಲಿ ಯಾರು ದೊಡ್ಡವರು ಎಂದು ತಿಳಿದರೆ ಶಾಕ್ ಆಗ್ತೀರಾ.

23

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ಸಮಯದಲ್ಲಿ ಸೆಲೆಬ್ರಿಟಿಗಳು ಮದುವೆಯಾಗುವ ಪರಂಪರೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಈಗ ಅದೇ ಸೆಲೆಬ್ರಿಟಿಗಳ ಸಾಲಿಗೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿಗಳು ಸೇರಿದ್ದಾರೆ ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೇ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿ ಹಲವಾರು ವರ್ಷಗಳ ಕಾಲ ಚಿತ್ರರಂಗದಲ್ಲಿ ಮಿಂಚಿರುವಂತಹ ಹಾಗೂ ಈಗಲೂ ಮಿಂಚುತ್ತಿರುವ ನಟಿ ನಯನತಾರಾ ರವರು ನಿರ್ದೇಶಕ ವಿಘ್ನೇಶ್ ರವರ ಜೊತೆಗೆ ಹಲವಾರು ವರ್ಷಗಳ ಕಾಲ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿ ಇರುವ ಮೂಲಕ ಕೊನೆಗೂ ಇದೇ ಜೂನ್ 9ರಂದು ಸಪ್ತಪದಿಯನ್ನು ತುಳಿಯುವ ಮೂಲಕ ವೈವಾಹಿಕ ಜೀವನಕ್ಕೆ ಜೊತೆಯಾಗಿ ಕಾಲಿಟ್ಟಿದ್ದಾರೆ. ಇವರಿಬ್ಬರು ಮದುವೆಯಾಗಲಿದ್ದಾರೆ ಎನ್ನುವುದಾಗಿ ಹಲವಾರು ವರ್ಷಗಳಿಂದಲೂ ಕೂಡ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೇಳಿಬರುತ್ತದೆ. ಆದರೆ ಕೊನೆಗೂ ಕೂಡ ಇವರಿಬ್ಬರು ಈಗ ದಂಪತಿಗಳಾಗಿರುವುದು ಪ್ರತಿಯೊಬ್ಬರಿಗೂ ಹಾಗೂ ಅವರ ಅಭಿಮಾನಿಗಳಿಗೆ ಸಂತೋಷವನ್ನು ನೀಡಿದೆ.

ಇನ್ನು ಇವರಿಬ್ಬರ ಮದುವೆಗೆ ಶಾರುಖ್ ಖಾನ್ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ಸೆಲೆಬ್ರಿಟಿಗಳು ಕೂಡ ಆಗಮಿಸಿ ನವವಧೂವರರನ್ನು ಹಾರೈಸಿದ್ದಾರೆ. ಇಷ್ಟೊಂದು ಪ್ರೀತಿಸಿ ಮದುವೆಯಾಗಿರುವ ಇವರಿಬ್ಬರ ನಡುವಿನ ವಯಸ್ಸಿನ ಅಂತರವನ್ನು ಕೇಳಿದರೆ ನೀವು ಕೂಡ ಆಚರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೆ ವಯಸ್ಸಿನ ಅಂತರವಿದ್ದರೂ ಕೂಡ ಪ್ರೀತಿಗೆ ವಯಸ್ಸಿನ ಅಡ್ಡಿ ಇಲ್ಲ ಎಂಬುದನ್ನು ಇವರಿಬ್ಬರು ಕೂಡ ಸಾಬೀತುಪಡಿಸಿದ್ದಾರೆ. ನಯನತಾರಾ ರವರು ವಿಜ್ಞೇಶ್ ಅವರಿಗಿಂತ ವಯಸ್ಸಿನಲ್ಲಿ ಹನ್ನೊಂದು ತಿಂಗಳು ದೊಡ್ಡವರಾಗಿದ್ದಾರೆ. ನಯನತಾರಾ ರವರು ನವೆಂಬರ್ 18 1984 ರಲ್ಲಿ ಜನಿಸಿದ್ದರೆ ಈ ಕಡೆ ವಿಘ್ನೇಶ್ ರವರು ಸಪ್ಟೆಂಬರ್ 18 1985 ರಲ್ಲಿ ಜನಿಸಿದ್ದಾರೆ. ಒಟ್ಟಾರೆಯಾಗಿ ಇವರಿಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಇಬ್ಬರನ್ನು ಕೂಡ ನೆಟ್ಟಿಗರು ಕ್ಯೂಟ್ ಜೋಡಿಗಳು ಎಂಬುದಾಗಿ ಹೊಗಳುತ್ತಿದ್ದಾರೆ.