ಮೊದಲ ಪಂದ್ಯದಲ್ಲಿ ಸೋಲಿನ ರುಚಿ ನೋಡಿದ ಭಾರತ, ಈ ಸೋಲಿನಿಂದ ಆರ್ಸಿಬಿ ಗೆ ಹೊಸ ಪಾಠ, ಇದುವೇ ಹರ್ಷಲ್ ಆಟ, ಏನಾಗಿದೆ ಗೊತ್ತೇ?

23

ನಮ್ಮ ಆರ್.ಸಿ.ಬಿ ತಂಡವು ಐಪಿಎಲ್ ಶುರುವಾಗಿ 15 ವರ್ಷಗಳು ಕಳೆದು, 15 ಸೀಸನ್ ಗಳು ಕಳೆದಿದ್ದರೂ ಸಹ ಒಂದು ಸಾರಿಯು ಕಪ್ ಗೆದ್ದಿಲ್ಲ, ಆದರೆ ಅಭಿಮಾನಿಗಳು ಮಾತ್ರ ಆರ್.ಸಿ.ಬಿ. ತಂಡದ ಮೇಲೆ ಭರವಸೆ ಇಡುವುದನ್ನು ನಿಲ್ಲಿಸಿಲ್ಲ. ಪ್ರತಿವರ್ಷವೂ ಸಹ ಈ ಸಲ ಕಪ್ ನಮ್ಮದೇ ಎನ್ನುತ್ತಾರೆ ಅಭಿಮಾನಿಗಳು. ಈ ವರ್ಷ ಆರ್.ಸಿ.ಬಿ ತಂಡವು ಪ್ಲೇ ಆಫ್ಸ್ ಹಂತಕ್ಕೆ ತಲುಪಿಯು ಸಹ, ಫಿನಾಲೆಗೆ ಬರಲಿಲ್ಲ. ಆದರೆ ಈ ಸಾರಿ ಆರ್.ಸಿ.ಬಿ ತಂಡ ಮಾಡಿದ ತಪ್ಪೇನು, ಆರ್.ಸಿ.ಬಿ ಸೋಲಲು ಕಾರಣ ಏನು ಎಂದು ನಿನ್ನೆಯ ಪಂದ್ಯದ ಬಳಿಕ ತಿಳಿದು ಬಂದಿದೆ.

ಆರ್.ಸಿ.ಬಿ ತಂಡದಲ್ಲಿ ಈ ಸಾರಿ ಅತ್ಯುತ್ತಮವಾದ ಆಟಗಾರರು ಇದ್ದರು, ಬಲಿಷ್ಠ ಬೌಲರ್ ಗಳು ಹಾಗೂ ಬ್ಯಾಟ್ಸ್ಮನ್ ಗಳು ಇದ್ದರು. ಆದರು ಸಹ ಕ್ವಾಲಿಫೈಯರ್2 ಪಂದ್ಯದಲ್ಲಿ ಆರ್.ಸಿ.ಬಿ ತಂಡವು ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ ಸೋಲನ್ನು ಕಂಡಿತು. ಇತ್ತ ನಿನ್ನೆ ಸಹ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಪಂದ್ಯಗಳ ಮೊದಲ ಪಂದ್ಯದಲ್ಲಿ ಸೋಲನ್ನು ಕಂಡಿದೆ. ನಿನ್ನೆಯ ಪಂದ್ಯದಲ್ಲಿ ಆಗಿದ್ದು ನೋಡಿ, ಆರ್.ಸಿ.ಬಿ ತಂಡದ ತಪ್ಪಹ್ ಏನು ಎನ್ನುವುದು ತಿಳಿದುಬಂದಿದೆ. ಆರ್.ಸಿ.ಬಿ ತಂಡ ಸೋಲನ್ನು ಕಾಣಲು ಮುಖ್ಯ ಕಾರಣ ಅದ್ಭುತವಾದ ಬೌಲರ್ ಹರ್ಷಲ್ ಪಟೇಲ್ ಅವರನ್ನು ಸರಿಯಾದ ಸಮಯಕ್ಕೆ ಬಳಸಿಕೊಳ್ಳದೆ ಇರುವುದು. ಆರ್.ಸಿ.ಬಿ ತಂಡದಲ್ಲಿ ಹರ್ಷಲ್ ಪಟೇಲ್ ಅವರು ಬೌಲಿಂಗ್ ಗೆ ಬರುವುದ್ 10 ಅಥವಾ 12 ಓವರ್ ಗಳ ನಂತರ.

ಆರ್.ಸಿ.ಬಿ ತಂಡ ಮಾಡಿದ ತಪ್ಪಿದು, ನಿನ್ನೆಯ ಪಂದ್ಯದಲ್ಲಿ ಭಾರತ ತಂಡ ನೀಡಿದ 212 ರನ್ ಗಳನ್ನು, ಸೌತ್ ಆಫ್ರಿಕಾ ತಂಡ ಚೇಜ್ ಮಾಡಬೇಕಿತ್ತು, ಆದರೆ 5 ಓವರ್ ಗಳಲ್ಲಿ ಸೌತ್ ಆಫ್ರಿಕಾ 60 ರನ್ಸ್ ಗಳಿಸಿ, ಒಳ್ಳೆಯ ಪ್ರದರ್ಶನ ನೀಡುತ್ತಿತ್ತು. ತಂಡದ ಕ್ಯಾಪ್ಟನ್ ರಾಹುಲ್ ಅವರು 6ನೇ ಓವರ್ ಗೆ ಹರ್ಷಲ್ ಪಟೇಲ್ ಅವರನ್ನು ಬೌಲಿಂಗ್ ಗೆ ಕಳಿಸಿ, ಒಳ್ಳೆಯ ಕೆಲಸ ಮಾಡಿದರು, ಹರ್ಷಲ್ ಅವರಿಂದಾಗಿ, ವಿಕೆಟ್ ಗಳು ಸಹ ಬಂದವು. ಆರ್.ಸಿ.ಬಿ ತಂಡ ಸಹ ಆರಂಭಿಕ ಓವರ್ ಗಳಲ್ಲೂ ಸಹ ಹರ್ಷಲ್ ಪಟೇಲ್ ಅವರನ್ನು ಬಳಸಿಕೊಂಡರೆ, ಆರ್.ಸಿ.ಬಿ ಗೆ ಬಹಳ ಸಹಾಯ ಆಗುತ್ತದೆ. ಆರ್.ಸಿ.ಬಿ ಮ್ಯಾಚ್ ಗಳ ಆರಂಭಿಕ ಓವರ್ ಗಳಲ್ಲಿ ಜೋಶ್ ಹೇಜಲ್ ವುಡ್, ಸಿರಾಜ್ ಅವರನ್ನು ಬಳಸುವ ಬದಲು ಹರ್ಷಲ್ ಅವರನ್ನು ತಂದರೆ ಆರ್.ಸಿ.ಬಿ ಗೆ ಸಹಾಯ ಆಗುತ್ತದೆ.