ಫೈನಲ್ ತಲುಪಿದ ರಾಜಸ್ತಾನ ರಾಯಲ್ಸ್ ತಂಡದ ಬ್ಯಾಟಿಂಗ್ ದಿಗ್ಗಜನಿಂದ ಕಿಚ್ಚನಿಗೆ ಗಿಫ್ಟ್. ಯಾಕೆ ಗೊತ್ತೇ?? ಇರುವ ಸಂಬಂಧವಾದರೂ ಏನು ಗೊತ್ತೇ?
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟನೆಯ ಜೊತೆಗೆ ಕ್ರಿಕೆಟ್ ಜೊತೆಗು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಸುದೀಪ್ ಅವರಿಗೆ ಕ್ರಿಕೆಟ್ ಅಂದ್ರೆ ಅಚ್ಚುಮೆಚ್ಚು. ಬಿಡುವಿನ ಸಮಯ ಸಿಕ್ಕಾಗಲೆಲ್ಲಾ ಸುದೀಪ್ ಅವರು ಸ್ನೇಹಿತರ ಜೊತೆಗೆ ಹಾಗೂ ತಮ್ಮ ತಂಡದ ಜೊತೆಗೆ ಕ್ರಿಕೆಟ್ ಆಡುತ್ತಾರೆ. ಅಷ್ಟೇ ಅಲ್ಲದೆ, ಸುದೀಪ್ ಅವರು ಸಿಸಿಎಲ್ ಪಂದ್ಯಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಜೊತೆಗೆ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಸುದೀಪ್ ಅವರ ನೇತೃತ್ವದ ಒಂದು ತಂಡವು ಇತ್ತು.
ಸುದೀಪ್ ಅವರಿಗೆ ಕ್ರಿಕೆಟ್ ಅಂದ್ರೆ ಅಷ್ಟು ಪ್ರೀತಿ ಇದೆ. ಸುದೀಪ್ ಅವರು ಹಲವು ಬಾರಿ ಕ್ರಿಕೆಟ್ ಪಂದ್ಯಗಳನ್ನು ನೋಡಲು ಮೈದಾನಕ್ಕೆ ಹೋಗುತ್ತಾರೆ. ನಮಗೆಲ್ಲ ಗೊತ್ತಿರುವ ಹಾಗೆ ಕಳೆದ ವರ್ಷ ಐಪಿಎಲ್ ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡವು ಸುದೀಪ್ ಅವರನ್ನು ತಮ್ಮ ತಂಡದ ಪಂದ್ಯ ವೀಕ್ಷಿಸಲು ಆಹ್ವಾನ ನೀಡಿದ್ದರು. ಇದೀಗ ರಾಜಸ್ತಾನ್ ರಾಯಲ್ಸ್ ತಂಡದಿಂದ ಸುದೀಪ್ ಅವರಿಗೆ ಒಂದು ಭರ್ಜರಿಯಾದ ಗಿಫ್ಟ್ ಸಿಕ್ಕಿದೆ. ಅದೇನು ಅಂದ್ರೆ, ರಾಜಸ್ತಾನ್ ರಾಯಲ್ಸ್ ತಂಡದಿಂದ ಸ್ಟಾರ್ ಆಟಗಾರ ಆಗಿರುವ ಜೋಸ್ ಬಟ್ಲರ್ ಅವರಿಂದ ಸುದೀಪ್ ಅವರಿಗೆ ಬ್ಯಾಟ್ ಸಿಕ್ಕಿದೆ. ಹೊಸ ಬಟ್ಲರ್ ಅವರು, ಬೆಸ್ಟ್ ವಿಶಸ್ ಸುದೀಪ್ ಎಂದು ಬರೆದು ಸಹಿ ಹಾಕಿ ತಾವು ಐಪಿಎಲ್ ನಲ್ಲಿ ಬಳಸಿದ್ದ ಬ್ಯಾಟ್ ಅನ್ನು ಸುದೀಪ್ ಅವರಿಗೆ ಗಿಫ್ಟ್ ಆಗಿ ನೀಡಿದ್ದಾರೆ.

ಇದರಿಂದ ಸುದೀಪ್ ಅವರಿಗೆ ಬಹಳ ಸಂತೋಷವಾಗಿದ್ದು, ಜೋಸ್ ಬಟ್ಲರ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡದಿಂದ ಬಂದಿರುವ ಗಿಫ್ಟ್ ಬಗ್ಗೆ ಬಹಳ ಸಂತೋಷದಿಂದ ಟ್ವೀಟ್ ಮಾಡಿ, ವಿಡಿಯೋದಲ್ಲಿ ಮಾತನಾಡಿ, ಸಂತೋಷ ವ್ಯಕ್ತಪಡಿಸಿದ್ದಾರೆ ಹಾಗೂ ತಾವು ಆ ಬ್ಯಾಟ್ ಅನ್ನು ಜೋಪಾನವಾಗಿ ಇಟ್ಟುಕೊಳ್ಳುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಜೋಸ್ ಬಟ್ಲರ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡದ ಕಡೆಯಿಂದ ಸಿಕ್ಕಿರುವ ಈ ಗಿಫ್ಟ್ ಪ್ರತಿಯಾಗಿ ಸುದೀಪ್ ಅವರ ಕಡೆಯಿಂದ ಮತ್ತೊಂದು ಗಿಫ್ಟ್ ಕೇಳಿದ್ದಾರೆ. ಸುದೀಪ್ ಅವರು ಈ ಮೊದಲು ಸಿಸಿಎಲ್ ಪಂದ್ಯಗಳಲ್ಲಿ ಬಳಸಿದ ಗ್ಲೌಸ್ ಅನ್ನು ಕಳಿಸುವಂತೆ ಹೇಳಿದ್ದಾರೆ. ಸುದೀಪ್ ಅವರು ಖಂಡಿತವಾಗಿ ರಾಜಸ್ತಾನ್ ರಾಯಲ್ಸ್ ತಂಡ ಕೇಳಿರುವ ವಸ್ತುವನ್ನು ಕಳಿಸಿಕೊಡುತ್ತಾರ ಎಂದು ಕಾದು ನೋಡಬೇಕಿದೆ.