ಬಹುನೀರಿಕ್ಷಿತ ದಾಳಕೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಲಿರುವ UI ಸಿನೆಮಾಗೆ ಉಪ್ಪಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?

29

ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶನ ಮಾಡುವ ಸಿನಿಮಾಗಳು ಅಂದರೆ, ಅದರ ಮೇಲೆ ಜನರಿಗೆ ನೆಕ್ಸ್ಟ್ ಲೆವೆಲ್ ಕ್ರೇಜ್ ಇರುತ್ತದೆ ಎಂದರೆ ತಪ್ಪಲ್ಲ. ಯಾಕಂದರೆ ಉಪೇಂದ್ರ ಅವರು ನಿರ್ದೇಶನ ಮಾಡುವ ಸಿನಿಮಾಗಳು ಅಷ್ಟರ ಮಟ್ಟಿಗೆ ಇರುತ್ತದೆ. ಇದೀಗ ಉಪೇಂದ್ರ ಅವರು 7 ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿ ಬಂದಿದ್ದಾರೆ. ಉಪೇಂದ್ರ ಅವರು ಮತ್ತೊಮ್ಮೆ ವಿಭಿನ್ನವಾದ ಕಾನ್ಸೆಪ್ಟ್ ಮೂಲಕ ಬರುತ್ತಿದ್ದಾರೆ, ಈ ಹೊಸ ಸಿನಿಮಾದ ಟೈಟಲ್ ಸಹ ಬಹಳ ವಿಭಿನ್ನವಾಗಿದೆ, UI ಎಂದು ಟೈಟಲ್ ಇಡಲಾಗಿದೆ. ಇನ್ನು ಈ ಸಿನಿಮಾದ ಬಜೆಟ್ ಎಷ್ಟು? ಇದಕ್ಕೆ ಉಪೇಂದ್ರ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ರಿಯಲ್ ಸ್ಟಾರ್ ಉಪೇಂದ್ರ ಅವರು ಇದುವರೆಗೂ ಕನ್ನಡದಲ್ಲಿ ಯಾವ ನಟನು ಪಡೆಯದಷ್ಟು ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ. UI ಸಿನಿಮಾದ ಮುಹೂರ್ತ ಇತ್ತೀಚೆಗೆ ನೆರವೇರಿತು, ಉಪೇಂದ್ರ ಅವರು ಶಲ್ಯ ಪಂಚೆ ಧರಿಸಿ, ಹಣೆಗೆ ಮೂರು ನಾಮ ಹಾಕಿ ಡಿಫರೆಂಟ್ ಆಗಿ ಬಂದಿದ್ದರು. ಮುಹೂರ್ತಕ್ಕೆ ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್, ನಟ ಸುದೀಪ್, ಹಾಗೂ ಧನಂಜಯ್ ಅವರು ಸ್ಪೆಷಲ್ ಗೆಸ್ಟ್ ಆಗಿ ಬಂದಿದ್ದರು. ಅದ್ಧೂರಿಯಾಗಿ ದೇವಸ್ಥಾನದಲ್ಲಿ ನಡೆಯಿತು UI ಸಿನಿಮಾ ಮುಹೂರ್ತ. ಇನ್ನು ಸಿನಿಮಾವನ್ನು ಲಹರಿ ಸಂಸ್ಥೆಯ ಲಹರಿ ವೇಲು ಅವರು ಹಾಗೂ ಕೆ.ಪಿ.ಶ್ರೀಕಾಂತ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಸಿನಿಮಾದ ಬಜೆಟ್ ಮತ್ತು ಉಪೇಂದ್ರ ಅವರ ಸಂಭಾವನೆ ಬಗ್ಗೆ ಹೇಳುವುದಾದರೆ..

ಇದುವರೆಗೂ ಯಶ್ ಅವರಾಗಲಿ ದರ್ಶನ್ ಅವರಾಗಲಿ, ಸುದೀಪ್ ಅವರಾಗಲಿ ಯಾವ ಸಿನಿಮಾಗು ಪಡೆಯದೆ ಇರುವಷ್ಟು ಸಂಭಾವನೆಯನ್ನು ಉಪೇಂದ್ರ ಅವರು ಪಡೆದಿದ್ದಾರೆ, UI ಸಿನಿಮಾಗೆ ಉಪೇಂದ್ರ ಅವರು ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇನ್ನು ಸಿನಿಮಾದ ಬಜೆಟ್ ಬರೋಬ್ಬರಿ 150 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಕನ್ನಡದಲ್ಲಿ ಇದುವರೆಗೂ ಬಿಗ್ ಬಜೆಟ್ ಸಿನಿಮಾ ಬಂದಿಲ್ಲ, ಸಿನಿಮಾ ತೆರೆಮೇಲೆ ಅದ್ಧೂರಿಯಾಗಿ ಮೂಡಿಬರಲಿದೆ ಎನ್ನಲಾಗುತ್ತಿದೆ. ಆಗಸ್ಟ್ ನಲ್ಲಿ ಸಿನಿಮಾ ಕೆಲಸಗಳು ಶುರುವಾಗಲಿದ್ದು, ಮೊದಲಿಗೆ ಬೆಂಗಳೂರು, ಮೈಸೂರು ಹಾಗೂ ಇನ್ನಿತರ ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಬಳಿಕ ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇನ್ನು UI ಸಿನಿಮಾದಲ್ಲಿ ಉಪೇಂದ್ರ ಅವರನ್ನು ಹೊರತುಪಡಿಸಿ, ಇನ್ನು ಯಾರೆಲ್ಲಾ ನಟಿಸಲಿದ್ದಾರೆ ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಸಿಗಲಿದೆ.